ಬೆಂಗಳೂರು: ನಗರದಲ್ಲಿಂದು ಕೋವಿಡ್ ಸೋಂಕಿತರ ಪ್ರಕರಣದಲ್ಲಿ ಇಳಿಕೆ ಕಂಡಿದ್ದು, 978 ಮಂದಿಯಲ್ಲಿ ಪಾಸಿಟಿವ್ ಬಂದಿದ್ದು, 5 ಮಂದಿ ಮೃತಪಟ್ಟಿದ್ದಾರೆ.
959 ಮಂದಿ ಇಂದು ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 350305 ಕ್ಕೆ ಏರಿಕೆಯಾಗಿದ್ದು, ಈವರೆಗೆ 327948 ಮಂದಿ ಬಿಡುಗಡೆಯಾಗಿದ್ದಾರೆ. 18395 ಸಕ್ರಿಯ ಕೋವಿಡ್ ಪಾಸಿಟಿವ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಮೃತಟ್ಟವರ ಸಂಖ್ಯೆ 3961 ಕ್ಕೆ ಏರಿಕೆಯಾಗಿದೆ. 470 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.