ETV Bharat / state

ಬೆಸ್ಕಾಂನಿಂದ 1 ಲಕ್ಷಕ್ಕೂ ಅಧಿಕ ಟ್ರಾನ್ಸ್‌ ಫಾರ್ಮರ್‌ ಗಳ ದುರಸ್ತಿ ಕಾರ್ಯ ಯಶಸ್ವಿ

ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಟಿಸಿಗಳಿಗೆ ಶಾಶ್ವತ ಕಾಯಕಲ್ಪ ಒದಗಿಸಲಾಗುತ್ತಿದ್ದು, ಟಿಸಿಗಳ ನಿರ್ವಹಣೆಯಿಂದಾಗಿ ಅವುಗಳ ಕಾರ್ಯಕ್ಷಮತೆ ಹೆಚ್ಚಾಗುವುದರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಸಲು ನೆರವಾಗುತ್ತದೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

Repair work of more than 1 lakh transformers by BESCOM has been successful
ಬೆಸ್ಕಾಂನಿಂದ 1 ಲಕ್ಷಕ್ಕೂ ಅಧಿಕ ಟ್ರಾನ್ಸ್‌ ಫಾರ್ಮರ್‌ ಗಳ ದುರಸ್ಥಿ ಕಾರ್ಯ ಯಶಸ್ವಿ
author img

By

Published : Nov 25, 2022, 7:00 PM IST

ಬೆಂಗಳೂರು: ದುರಸ್ತಿ ಸ್ಥಿತಿಯಲ್ಲಿರುವ ಹಾಗೂ ತಾಂತ್ರಿಕ ದೋಷದಿಂದ ಕೂಡಿರುವ 1,02,713 ವಿದ್ಯುತ್ ಪರಿವರ್ತಕಗಳ (ಟಿಸಿ)ಗಳ ನಿರ್ವಹಣೆಯನ್ನು ಬೆಸ್ಕಾಂ ಕಳೆದ 7 ತಿಂಗಳಲ್ಲಿ ಮಾಡಿದೆ. ಟಿಸಿ ನಿರ್ವಹಣೆಯನ್ನು ಎಲ್ಲ 535 ಸೆಕ್ಷನ್​ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಟಿಸಿ ನಿರ್ವಹಣೆ ಅಭಿಯಾನಕ್ಕೆ ಈ ವರ್ಷದ ಮೇ 5 ರಂದು ಇಂಧನ ಇಲಾಖೆ ಚಾಲನೆ ನೀಡಿತ್ತು.

ಟಿಸಿಗಳ ನಿರ್ವಹಣೆ ಕಾರ್ಯವನ್ನು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಆರಂಭಿಸಲಾಗಿತ್ತು. ನವೆಂಬರ್‌ 24 ರ ವೇಳೆಗೆ 1,02,713 ಟಿಸಿಗಳ ನಿರ್ವಹಣೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.

ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಟಿಸಿಗಳಿಗೆ ಶಾಶ್ವತ ಕಾಯಕಲ್ಪ ಒದಗಿಸಲಾಗುತ್ತಿದ್ದು, ಟಿಸಿಗಳ ನಿರ್ವಹಣೆಯಿಂದಾಗಿ ಅವುಗಳ ಕಾರ್ಯಕ್ಷಮತೆ ಹೆಚ್ಚಾಗುವುದರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಸಲು ನೆರವಾಗುತ್ತದೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಪರಿಶೀಲನಾ ಸಭೆಯಲ್ಲಿ ಸೂಚನೆ: ಬೆಸ್ಕಾಂ ವ್ಯಾಪ್ತಿಯಲ್ಲಿ ಟಿಸಿಗಳ ನಿರ್ವಹಣೆಗೆ ವೇಗ ನೀಡಲು ಇತ್ತೀಚೆಗೆ ನಡೆದ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಲಾಗಿತ್ತು. ನಿರ್ವಹಣೆ ಸಂದರ್ಭದಲ್ಲಿ ಟಿಸಿಯಲ್ಲಿನ ಬುಶ್​ಗಳು ಸಡಿಲಗೊಂಡಿದ್ದರೆ ಗಟ್ಟಿಗೊಳಿಸುವುದು, ಜಂಪ್ ರಿಪೇಲ್​ಗಳ ನಿರ್ವಹಣೆ, ಸಡಿಲಗೊಂಡ ವೈರ್ ಸರಿಪಡಿಸುವಿಕೆ ಮತ್ತು ಟಿಸಿ ಆಯಿಲ್ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಯಾವ ಜಿಲ್ಲೆಗಳಲ್ಲಿ ಎಷ್ಟು ದುರಸ್ತಿ ಕಾರ್ಯ: ಬೆಸ್ಕಾಂನ ನಗರ ಜಿಲ್ಲೆಯಲ್ಲಿ 35,235 ಟಿಸಿಗಳ ನಿರ್ವಹಣೆ ಮಾಡಲಾಗಿದೆ. ದಾವಣೆಗೆರೆ ಜಿಲ್ಲೆಯಲ್ಲಿ 12,365, ತುಮಕೂರು ಜಿಲ್ಲೆಯಲ್ಲಿ 16,234, ಚಿತ್ರದುರ್ಗ ಜಿಲ್ಲೆಯಲ್ಲಿ 12,230 ಟಿಸಿಗಳ ನಿರ್ವಹಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹಾಗೆ ರಾಮನಗರದಲ್ಲಿ 9,873, ಚಿಕ್ಕಬಳ್ಳಾಪುರ 7,981, ಕೋಲಾರ 4,018 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4,687 ಗಳ ನಿರ್ವಹಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ನಿರ್ವಹಿಸಿರುವ 35,235 ಟಿಸಿಗಳ ಪೈಕಿ ಪಶ್ಚಿಮ ವೃತ್ತದಲ್ಲಿ 7,688, ದಕ್ಷಿಣವೃತ್ತದಲ್ಲಿ 10,261, ಪೂರ್ವ ವೃತ್ತದಲ್ಲಿ 7,015 ಹಾಗು ಉತ್ತರ ವೃತ್ತದಲ್ಲಿ 7,519 ಟಿಸಿಗಳ ನಿರ್ವಹಣೆ ಕಾರ್ಯ ಪೂರ್ಣ ಗೊಳಿಸಲಾಗಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ.

ಇದನ್ನೂ ಓದಿ : ಅಂಚೆಯಲ್ಲಿ ರವಾನಿಸಿದ ವಸ್ತು ಕಳವು: ಐಪ್ಯಾಡ್‌ಗಳ ಮೌಲ್ಯಕ್ಕೆ 13 ಸಾವಿರ ಸೇರಿಸಿ ಪರಿಹಾರ ನೀಡಲು ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.