ETV Bharat / state

ಕೆಟ್ಟ ಟ್ರಾನ್ಸ್​​ಫಾರ್ಮರ್​​ಗಳಿಗೆ ಮುಕ್ತಿ: ಪಾದಚಾರಿ ರಸ್ತೆಯ ಟಿಸಿ ಸ್ಥಳಾಂತರಕ್ಕೆ ಬೆಸ್ಕಾಂ ನಿರ್ಧಾರ

ರಾಜ್ಯಾದ್ಯಂತ ಮೇ 5 ರಿಂದ 15 ರವರೆಗೆ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ನಡೆಯಲಿರುವ ಇಂಧನ ಇಲಾಖೆಯ ಹತ್ತು ದಿನಗಳ ಟ್ರಾನ್ಸ್​​ಫಾರ್ಮರಗಳ ನಿರ್ವಹಣಾ ಅಭಿಯಾನಕ್ಕೆ ಇಂಧನ ಸಚಿವ ವಿ.ಸುನಿಲ್ ಕುಮಾರ್ ಚಾಲನೆ ನೀಡಿದ್ದಾರೆ.

Bescom's decision to relocate TC on sidewalk
ಕೆಟ್ಟ ಟ್ರಾನ್ಸ್​​ಫಾರ್ಮರ್​​ಗಳಿಗೆ ಮುಕ್ತಿ
author img

By

Published : May 6, 2022, 8:38 AM IST

ಬೆಂಗಳೂರು: ಕೆಟ್ಟಿರುವ, ಅಪಾಯಕಾರಿ ಎನಿಸುವ ಹಾಗೂ ಪಾದಚಾರಿ ರಸ್ತೆಯಲ್ಲಿ ಇರುವ ವಿದ್ಯುತ್ ಟ್ರಾನ್ಸ್​​ಫಾರ್ಮರ್​ಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವ "ಟ್ರಾನ್ಸ್ ಫಾರ್ಮರ್ ನಿರ್ವಹಣಾ ಅಭಿಯಾನ"ವನ್ನು ಬೆಸ್ಕಾಂ ಕೈಗೊಂಡಿದೆ. ಬೆಸ್ಕಾಂ ಮಾತ್ರವಲ್ಲದೇ ರಾಜ್ಯಾದ್ಯಂತ ಮೇ 5ರಿಂದ 15 ರವರೆಗೆ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ನಡೆಯಲಿರುವ ಇಂಧನ ಇಲಾಖೆಯ ಹತ್ತು ದಿನಗಳ ಟ್ರಾನ್ಸ್​​ಫಾರ್ಮರಗಳ ನಿರ್ವಹಣಾ ಅಭಿಯಾನಕ್ಕೆ ಇಂಧನ ಸಚಿವ ವಿ.ಸುನಿಲ್ ಕುಮಾರ್ ಚಾಲನೆ ನೀಡಿದ್ದಾರೆ.

ನ್ಯೂನತೆ ಹೊಂದಿರುವ, ಕೆಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು (ಟ್ರಾನ್ಸ್​​​ಫಾರ್ಮರ್) ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಕ್ಕೆ ಅಭಿಯಾನದ ಸಂದರ್ಭದಲ್ಲಿ ಆದ್ಯತೆ ನೀಡಲು ಬೆಸ್ಕಾಂ ನಿರ್ಧರಿಸಿದೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಸಮೀಪದ ಪಾದಚಾರಿ ರಸ್ತೆಯಲ್ಲಿರುವ ಟ್ರಾನ್ಸ್​​ಫಾರ್ಮರ್ ನಿರ್ವಹಣೆಗೆ ಚಾಲನೆ ನೀಡುವ ಮೂಲಕ ಬೆಸ್ಕಾಂ ಆಡಳಿತ ನಿರ್ದೇಶಕ ಪಿ.ರಾಜೇಂದ್ರ ಚೋಳನ್, ಹತ್ತು ದಿನಗಳ ನಿರ್ವಹಣಾ ಅಭಿಯಾನವನ್ನು ಬೆಸ್ಕಾಂನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ಉದ್ಘಾಟಿಸಿದರು. ಬೆಸ್ಕಾಂನ ವ್ಯಾಪ್ತಿಯಲ್ಲಿ ಬರುವ ಬಹುತೇಕ ಟ್ರಾನ್ಸ್ ಫಾರ್ಮರ್​ಗಳ ನಿರ್ವಹಣೆ ಕಾರ್ಯ ನಡೆಯಲಿದೆ.

ಹತ್ತು ದಿನಗಳ ಟ್ರಾನ್ಸ್​​ಫಾರ್ಮರಗಳ ನಿರ್ವಹಣಾ ಅಭಿಯಾನಕ್ಕೆ ಇಂಧನ ಸಚಿವ ವಿ. ಸುನಿಲ್ ಕುಮಾರ್ ಚಾಲನೆ

ಪಾದಚಾರಿ ರಸ್ತೆಗಳಲ್ಲಿರುವ ಎಲ್ಲಾ ಟ್ರಾನ್ಸ್​ಫಾರ್ಮರ್​​ಗಳನ್ನು ಏಕಕಾಲದಲ್ಲಿ ಮೇಲ್ದರ್ಜೆಗೆ ಏರಿಸುವ ಕಾರ್ಯ ಈ ಸಂದರ್ಭದಲ್ಲಿ ನಡೆಯಲಿದೆ. ಟ್ರಾನ್ಸ್ ಫಾರ್ಮರ್​ಗಳ ಸುರಕ್ಷತೆ ಅಡಿಟ್ ಮಾಡಿ ಒಂದು ವಾರದೊಳಗೆ ಪಾದಚಾರಿ ರಸ್ತೆಗಳ ಮೇಲಿರುವ ಟಾನ್ಸಫಾರ್ಮರ್​ಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುವುದು ಎಂದು ಬೆಸ್ಕಾಂ ಎಂ.ಡಿ ಪಿ.ರಾಜೇಂದ್ರ ಚೋಳನ್ ಈ ವೇಳೆ ತಿಳಿಸಿದ್ದಾರೆ. ಟ್ರಾನ್ಸ್ ಫಾರ್ಮರ್​ಗಳ ಅಡಿಟ್ ಕಾರ್ಯ ಮುಗಿದ ಮೇಲೆ, ಕೆಟ್ಟಿರುವ, ದುರಸ್ಥಿಯಲ್ಲಿರುವ ಟ್ರಾನ್ಸ್ ಫಾರ್ಮರ್​ಗಳನ್ನು ಬದಲಿಸಿ ಹೊಸ ಟ್ರಾನ್ಸ್​ಫಾರ್ಮರ್​​ಗಳನ್ನು ಅಳವಡಿಸಲಾಗುವುದು ಎಂದು ಚೋಳನ್ ಮಾಹಿತಿ ನೀಡಿದರು.

ಇದನ್ನೂ ಓದಿ: ಕೌಟುಂಬಿಕ ಕಿರುಕುಳ: ಪತ್ನಿ ಜೀವನಾಂಶಕ್ಕೆ ಅರ್ಹಳು- ಹೈಕೋರ್ಟ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.