ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣ ಬೆನ್ನಲ್ಲೇ ಪಶ್ಚಿಮವಿಭಾಗದ ಪೊಲೀಸರು ಕಾಟನ್ ಪೇಟೆ ಸೇರಿದಂತೆ ಸುತ್ತಮುತ್ತಲಿನ ಏರಿಯಾಗಳ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
3 ಎಸಿಪಿ, 11 ಇನ್ಸ್ ಪೆಕ್ಟರ್, 33 ಪಿಎಸ್ಐ ಹಾಗೂ ನೂರಕ್ಕಿಂತ ಹೆಚ್ಚು ಪೊಲೀಸರು ಕಾಟನ್ ಪೇಟೆ, ಭಕ್ಷಿ ಗಾರ್ಡನ್, ರೋಜ್ ಗಾರ್ಡನ್, ಪೆಕ್ಷನ್ ಮಹಲ್, ಅಂಜನಪ್ಪ ಗಾರ್ಡನ್, ಛಲವಾದಿ ಪಾಳ್ಯ ಸೇರಿದಂತೆ ಆರು ಏರಿಯಾಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
25ಕ್ಕೂ ಹೆಚ್ಚು ರೌಡಿಶೀಟರ್ ಹಾಗೂ ಅಪರಾಧ ಪ್ರಕರಣ ಹಿನ್ನೆಲೆ ಹೊಂದಿರುವವರು ಮನೆ ಖಾಲಿ ಮಾಡಿ ತೆರಳಿದ್ದಾರೆ. ಸದ್ಯ ತಪಾಸಣೆ ವೇಳೆ 42 ಜನರ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿ ಕೇಸ್ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.
ಅಪರಾಧ ಪ್ರಕರಣದಲ್ಲಿ ಭಾಗಿಯಾದವರಿಗೆ ಎಚ್ಚರಿಕೆ ಜೊತೆಗೆ ಪರಿಸ್ಥಿತಿ ಲಾಭ ಪಡೆಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಒಟ್ಟಾರೆ 75 ಜನ ಅಪರಾಧ ಪ್ರಕರಣಗಳ ಹಿನ್ನೆಲೆ ಉಳ್ಳವರ ಮನೆ ಮತ್ತು ಇತರೆ 42 ಜನರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಪೂರ್ವ ತಾಲೂಕಿನಲ್ಲಿ ಮಿನಿ ಲಾಲ್ಬಾಗ್: ಇಂದು ಸಿಎ ಬಿಎಸ್ವೈ ಉದ್ಘಾಟನೆ
ಕರ್ಪ್ಯೂ ಇದ್ದರೂ ಉಳಿದವರು ಇನ್ನೂ ಏಕೆ ಮನೆ ಸೇರಿಲ್ಲ ಎಂಬುದರ ಬಗ್ಗೆ ಬಗ್ಗೆ ಮಾಹಿತಿ ಕಲೆ ಹಾಕಲಿದ್ದೇವೆ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.