ETV Bharat / state

ಈರುಳ್ಳಿ ಬೆಳೆದವರ ಕಣ್ಣೀರಿಗೆ ಕಾರಣವಾದ ಕೇಂದ್ರ.. ಗ್ರಾಹಕರಿಗೆ ಖುಷಿ, ಅನ್ನದಾತರಿಗೆ ತಲೆಬಿಸಿ.. - ರಫ್ತು ನಿರ್ಬಂಧ ಎಫ್ಟೆಕ್ಟ್

ಕೆಲ ದಿನಗಳ ಹಿಂದಷ್ಟೇ ಕೆಜಿಗೆ 50ರಿಂದ 60 ರೂ. ಮಾರಾಟವಾಗುತ್ತಿದ್ದ ಈರುಳ್ಳಿ ದರ ಇದೀಗ ಕೆಜಿಗೆ 20ರಿಂದ 30ರೂ. ಇಳಿಕೆಯಾಗಿರೋದ್ರಿಂದ ರೈತರನ್ನು ತ್ರೀವ ನಿರಾಸೆಗೆ ನೂಕುವಂತೆ ಮಾಡಿದೆ.ಅತಿವೃಷ್ಟಿಯಿಂದಾಗಿ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದರಿಂದ ಸಹಜವಾಗಿ ಬೇಡಿಕೆ ಹೆಚ್ಚಾಗಿತ್ತು. ಇದನ್ನು, ನಿವಾರಿಸಲು ಕೇಂದ್ರ ಸರ್ಕಾರ ವಿದೇಶಗಳಿಗೆ ರಫ್ತಾಗುತ್ತಿದ್ದ ಟನ್‌ಗಟ್ಟಲೇ ಈರುಳ್ಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದರಿಂದ ರಾಜ್ಯದ ವಿವಿಧ ಮಾರುಕಟ್ಟೆಯ ದಾಸ್ತಾನಿನಲ್ಲಿ ಈರುಳ್ಳಿ ಉಳಿಯುವಂತಾಯಿತು.

ತಗ್ಗಿದ ಈರುಳ್ಳಿ ಬೆಲೆ
author img

By

Published : Oct 9, 2019, 10:06 PM IST

Updated : Oct 9, 2019, 10:20 PM IST

ಬೆಂಗಳೂರು: ಕರ್ನಾಟಕ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಏರಿಕೆಯಾಗಿದ್ದ ಈರುಳ್ಳಿ ಬೆಲೆ ಇದೀಗ ಹಠಾತ್ ಕುಸಿತ ಕಂಡಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಇದು ಖುಷಿಯ ಸಂಗತಿಯಾದರೆ, ಸಾವಿರಾರು ರೂ. ಬಂಡವಾಳ ಹಾಕಿ ಈರುಳ್ಳಿ ಬೆಳೆದಿದ್ದ ರೈತರಿಗೆ ನುಂಗಲಾರದ ತುತ್ತಾಗಿದೆ.

ಈರುಳ್ಳಿಯು ದೇಶದ ಪ್ರಮುಖ ಬೆಳೆಗಳಲ್ಲಿ ಒಂದಾಗಿದೆ. ಬಹುತೇಕ ಜನರು ಬಳಸುವ ಅಡುಗೆಯಲ್ಲಿ ಈರುಳ್ಳಿಯನ್ನು ನೆಚ್ಚಿಕೊಂಡಿದ್ದು ಬೆಲೆ ಹೆಚ್ಚಳಕ್ಕೆ ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಕಂಗಲಾಗಿದ್ದರು. ಆದರ್ರೀಗ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರ ಈರುಳ್ಳಿ ಬೆಳೆಗಾರರಿಗೆ ಮುಳುವಾಗಿದೆ.

ಕೆಲ ದಿನಗಳ ಹಿಂದೆ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಸಂಭವಿಸಿದ ಅತಿವೃಷ್ಟಿಯೇ ಪ್ರಮುಖ ಕಾರಣವಾಗಿದೆ. ನೆರೆಯ ಪರಿಣಾಮ ಈರುಳ್ಳಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ದೇಶದ ಪ್ರಮುಖ ಈರುಳ್ಳಿ ಮಾರುಕಟ್ಟೆ ಎಂದೇ ಖ್ಯಾತಿಯಾಗಿರುವ ಮಹಾರಾಷ್ಟ್ರದ ನಾಸಿಕ್ ಎಪಿಎಂಸಿ ಯಾರ್ಡ್​ನಲ್ಲಿ ವಿವಿಧ ರಾಜ್ಯಗಳಿಂದ ಬರಬೇಕಿದ್ದ ಟನ್‌ಗಟ್ಟಲೇ ಈರುಳ್ಳಿ ಬರದ ಪರಿಣಾಮ ಇದರ ಎಫೆಕ್ಟ್ ರಾಜ್ಯಕ್ಕೆ ತಟ್ಟಿತ್ತು. ಹೀಗಾಗಿ ಈರುಳ್ಳಿ ಬೆಲೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿತ್ತು.

ಈರುಳ್ಳಿ ಬೆಲೆ ಹೆಚ್ಚಳವಾಗುತ್ತಿದ್ದಂತೆ ಕೇಂದ್ರ ಸರ್ಕಾರವು ಗ್ರಾಹಕರ ಹೊರೆ ತಗ್ಗಿಸಲು ತೆಗೆದುಕೊಂಡ ನಿರ್ಧಾರದಿಂದ ಈರುಳ್ಳಿ ಬೆಳೆಗಾರರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.

ತಗ್ಗಿದ ಈರುಳ್ಳಿ ಬೆಲೆ..

ರಫ್ತು ನಿರ್ಬಂಧ ಎಫ್ಟೆಕ್ಟ್, ಕಂಗಲಾದ ಬೆಳೆಗಾರರು:

ಅತಿವೃಷ್ಟಿಯಿಂದಾಗಿ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದರಿಂದ ಸಹಜವಾಗಿ ಬೇಡಿಕೆ ಹೆಚ್ಚಾಗಿತ್ತು. ಇದನ್ನು ನಿವಾರಿಸಲು ಕೇಂದ್ರ ಸರ್ಕಾರ ವಿದೇಶಗಳಿಗೆ ರಫ್ತಾಗುತ್ತಿದ್ದ ಟನ್‌ಗಟ್ಟಲೇ ಈರುಳ್ಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದರಿಂದ ರಾಜ್ಯದ ವಿವಿಧ ಮಾರುಕಟ್ಟೆಯ ದಾಸ್ತಾನಿನಲ್ಲಿ ಈರುಳ್ಳಿ ಉಳಿಯುವಂತಾಯಿತು. ಇದರಿಂದ ಮಾರುಕಟ್ಟೆಯಲ್ಲಿ ಅಗತ್ಯಕ್ಕಿಂತ ಈರುಳ್ಳಿ ಲಭ್ಯವಾಗಿದ್ದರಿಂದ ಆಟೋಮೆಟಿಕ್ ಆಗಿ ಬೆಲೆಯಲ್ಲಿ ಕಡಿಮೆಯಾಗಿದೆ. ದಸರಾ ಹಬ್ಬ ಹಿನ್ನೆಲೆಯಲ್ಲಿ ಕ್ವಿಂಟಲ್‌ಗಟ್ಟಲೇ ಈರುಳ್ಳಿ ಬೆಳೆದು ಸೂಕ್ತ ಬೆಲೆ ಸಿಗುವುದಾಗಿ ಆಸೆ ಹೊಂದಿದ್ದ ರೈತರು ಸದ್ಯ ಹತಾಶೆ ವ್ಯಕ್ತಪಡಿಸುತ್ತಿದ್ದಾರೆ.

ಈರುಳ್ಳಿ ಬೆಲೆ ಇಳಿಕೆಯಾಗಿರುವುದರ ಬಗ್ಗೆ ಈಟಿವಿ ಭಾರತ್​ದೊಂದಿಗೆ ಮಾತನಾಡಿದ ಚಳ್ಳಕೆರೆ ತಾಲೂಕಿನ ಈರುಳ್ಳಿ ಬೆಳೆಗಾರ ಮಂಜು, ಒಂದು ಎಕರೆಯಲ್ಲಿ ಸುಮಾರು 25 ಕೆಜಿ ಇರುವ 150 ಚೀಲ ಈರುಳ್ಳಿ ಬೆಳೆಯಬಹುದು. ಕೈಗೆ ಬೆಳೆ ಬರುವ ಮುನ್ನ 50ರಿಂದ 60 ಸಾವಿರ ರೂ. ತಗುಲುತ್ತದೆ. ದಿಢೀರನೇ ಈರುಳ್ಳಿ ಬೆಲೆಯಲ್ಲಿ ಕಡಿಮೆಯಾಗಿರುವುದು ಸಂಕಷ್ಟಕ್ಕೀಡಾಗುವಂತೆ ಮಾಡಿದೆ. ಮೊನ್ನೆವರೆಗೂ ಈರುಳ್ಳಿಗೆ ಉತ್ತಮ ಬೆಲೆ ಇತ್ತು. ಈಗ ರಫ್ತು ಬಂದ್ ಮಾಡಿದ ಪರಿಣಾಮ ಎಕರೆಗೆ 20 ಸಾವಿರ ರೂ. ಉಳಿಯುತ್ತಿತ್ತು. ಇದೀಗ ಕನಿಷ್ಠ ಇಪ್ಪತ್ತು ಸಾವಿರವೂ ಉಳಿಯುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಕೇಂದ್ರ ಸರ್ಕಾರ ಕೂಡಲೇ ಈರುಳ್ಳಿ ರಫ್ತು ನಿರ್ಬಂಧ ತೆಗೆಯಬೇಕು. ಮೂರು ವರ್ಷಕ್ಕೊಮ್ಮೆ ಈರುಳ್ಳಿಗೆ ಉತ್ತಮ ಬೆಲೆ ದೊರಕಲಿದ್ದು, ಇದಕ್ಕೆ ಸರ್ಕಾರ ಅಡ್ಡಗಾಲು ಹಾಕಬಾರದು. ಗ್ರಾಹಕರಿಗೆ ಬೆಲೆ ಏರಿಕೆಯಿಂದ ಹೆಚ್ಚಿನ ಹೊರೆ ಆಗುವುದಿಲ್ಲ. ತಿಂಗಳಿಗೆ ಸುಮಾರು 5 ರಿಂದ 6 ಕೆಜಿ ಈರುಳ್ಳಿಗೆ 150 ರೂಪಾಯಿ ಅಧಿಕ ಕೊಡುತ್ತೀರಾ. ಇದರಿಂದ ಅಷ್ಟೇನು ಹೊರೆ ಆಗುವುದಿಲ್ಲ ಎಂದು ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಅಧ್ಯಕ್ಷ ಕೆ.ಲೋಕೇಶ್ ಹೇಳುತ್ತಾರೆ.

Intro:Body:ತಗ್ಗಿದ ಈರುಳ್ಳಿ ಬೆಲೆ: ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಈರುಳ್ಳಿ ಬೆಳೆಗಾರರು

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಏರಿಕೆಯಾಗಿದ್ದ ಈರುಳ್ಳಿ ಬೆಲೆ ಇದೀಗ ಹಠಾತ್ ಕುಸಿತ ಕಂಡಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಖುಷಿ ಸಂಗತಿಯಾದರೆ ಸಾವಿರಾರು ರೂ. ಬಂಡವಾಳ ಹಾಕಿ ಈರುಳ್ಳಿ ಬೆಳೆದಿದ್ದ ರೈತರಿಗೆ ನುಂಗಲಾರದ ತುತ್ತಾಗಿದೆ.

ಕೆಲ ದಿನಗಳ ಹಿಂದಷ್ಟೇ ಕೆ.ಜಿ.ಗೆ 50ರಿಂದ 60 ರೂ.ಮಾರಾಟವಾಗುತ್ತಿದ್ದ ಈರುಳ್ಳಿ ಇದೀಗ ಕೆ.ಜಿ.ಗೆ 20ರಿಂದ 30ರೂ. ಇಳಿಯುವ ಮೂಲಕ ರೈತರನ್ನು ತ್ರೀವ ನಿರಾಸೆಗೆ ನೂಕುವಂತೆ ಮಾಡಿದೆ.

ಈರುಳ್ಳಿಯು ದೇಶದ ಪ್ರಮುಖ ಬೆಳೆಗಳಲ್ಲಿ ಒಂದಾಗಿದೆ. ಬಹುತೇಕ ಜನರು ಬಳಸುವ ಅಡುಗೆಯಲ್ಲಿ ಈರುಳ್ಳಿ ಯನ್ನು ನೆಚ್ಚಿಕೊಂಡಿದ್ದು ಬೆಲೆ ಹೆಚ್ಚಳಕ್ಕೆ ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಕಂಗಲಾಗಿದ್ದರು. ಇದಕ್ಕೆ ಪ್ರಮುಖ ಕಾರಣ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರ ಈರುಳ್ಳಿ ಬೆಳೆಗಾರರಿಗೆ ಮುಳುವಾಗಿದೆ.

ಕೆಲ ದಿನಗಳ ಹಿಂದೆ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಸಂಭವಿಸಿದ ಅತಿವೃಷ್ಠಿಯೇ ಪ್ರಮುಖ ಕಾರಣವಾಗಿದೆ. ನೆರೆಯ ಪರಿಣಾಮ ಈರುಳ್ಳಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ದೇಶದ ಪ್ರಮುಖ ಈರುಳ್ಳಿ ಮಾರುಕಟ್ಟೆ ಎಂದೇ ಖ್ಯಾತಿಯಾಗಿರುವ ಮಹಾರಾಷ್ಟ್ರದ ನಾಸಿಕ್ ಎಪಿಎಂಸಿ ಯಾರ್ಡ್ ನಲ್ಲಿ ವಿವಿಧ ರಾಜ್ಯಗಳಿಂದ ಬರಬೇಕಿದ್ದ ಟನ್ ಗಟ್ಟಲೇ ಈರುಳ್ಳಿ ಬರದ ಪರಿಣಾಮ ಇದರ ಎಫೆಕ್ಟ್ ರಾಜ್ಯಕ್ಕೆ ತಟ್ಟಿತ್ತು. ಹೀಗಾಗಿ ಈರುಳ್ಳಿ ಬೆಲೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿತ್ತು.

ಈರುಳ್ಳಿ ಬೆಲೆ ಹೆಚ್ಚಳವಾಗುತ್ತಿದ್ದಂತೆ ಕೇಂದ್ರ ಸರ್ಕಾರವು ಗ್ರಾಹಕರ ಹೊರೆ ತಗ್ಗಿಸಲು ತೆಗೆದುಕೊಂಡ ನಿರ್ಧಾರದಿಂದ ಈರುಳ್ಳಿ ಬೆಳೆಗಾರರು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ.

ರಫ್ತು ನಿರ್ಬಂಧ ಎಫ್ಟೆಕ್ಟ್: ಕಂಗಲಾದ ಬೆಳೆಗಾರರು

ಅತಿವೃಷ್ಟಿಯಿಂದಾಗಿ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದರಿಂದ ಸಹಜವಾಗಿ ಬೇಡಿಕೆ ಹೆಚ್ಚಾಗಿತ್ತು. ಇದನ್ನು ನಿವಾರಿಸಲು ಕೇಂದ್ರ ಸರ್ಕಾರ ವಿದೇಶಗಳಿಗೆ ರಫ್ತಾಗುತ್ತಿದ್ದ ಟನ್ ಗಟ್ಟಲೇ ಈರುಳ್ಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದರಿಂದ ರಾಜ್ಯದ ವಿವಿಧ ಮಾರುಕಟ್ಟೆಯ ದಾಸ್ತಾನಿನಲ್ಲಿ ಈರುಳ್ಳಿ ಉಳಿಯುವಂತಾಯಿತು. ಇದರಿಂದ ಮಾರುಕಟ್ಟೆಯಲ್ಲಿ ಅಗತ್ಯಕ್ಕಿಂತ ಈರುಳ್ಳಿ ಲಭ್ಯವಾಗಿದ್ದರಿಂದ ಆಟೋಮೆಟಿಕ್ ಆಗಿ ಬೆಲೆಯಲ್ಲಿ ಕಡಿಮೆಯಾಗಿದೆ. ದಸರಾ ಹಬ್ಬ ಹಿನ್ನೆಲೆಯಲ್ಲಿ ಕ್ವಿಂಟಲ್ ಗಟ್ಟಲೇ ಈರುಳ್ಳಿ ಬೆಳೆದು ಸೂಕ್ತ ಬೆಲೆ ಸಿಗುವುದಾಗಿ ಆಸೆ ಹೊಂದಿದ್ದ ರೈತರು ಸದ್ಯ ಹತಾಶೆ ವ್ಯಕ್ತಪಡಿಸುತ್ತಿದ್ದಾರೆ.

ಈರುಳ್ಳಿ ಬೆಲೆ ಇಳಿಕೆಯಾಗಿರುವುದರ ಬಗ್ಗೆ ಈಟಿವಿ ಭಾರತ್ ದೊಂದಿಗೆ ಮಾತನಾಡಿದ ಚಳ್ಳಕೆರೆ ತಾಲೂಕಿನ ಈರುಳ್ಳಿ ಬೆಳೆಗಾರ ಮಂಜು, ಒಂದು ಎಕರೆಯಲ್ಲಿ ಸುಮಾರು 25 ಕೆ.ಜಿ.ಇರುವ 150 ಚೀಲ ಈರುಳ್ಳಿ ಬೆಳೆಯಬಹುದು. ಕೈಗೆ ಬೆಳೆ ಬರುವ ಮುನ್ನ 50ರಿಂದ 60 ಸಾವಿರ ರೂ. ತಗುಲುತ್ತದೆ. ದೀಢಿರನೇ ಈರುಳ್ಳಿ ಬೆಲೆಯಲ್ಲಿ ಕಡಿಮೆಯಾಗಿರುವುದು ಸಂಕಷ್ಟಕ್ಕೆ ಈಡಾಗುವಂತೆ ಮಾಡಿದೆ. ಮೊನ್ನೆವರೆಗೂ ಈರುಳ್ಳಿಗೆ ಉತ್ತಮ ಬೆಲೆ ಇತ್ತು. ಈಗ ರಫ್ತು ಬಂದ್ ಮಾಡಿದ ಪರಿಣಾಮ ಎಕರೆಗೆ 20 ಸಾವಿರ ರೂ. ಉಳಿಯುತ್ತಿತ್ತು. ಇದೀಗ ಕನಿಷ್ಠ ಇಪ್ಪತ್ತು ಸಾವಿರವೂ ಉಳಿಯುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಕೇಂದ್ರ ಸರ್ಕಾರ ಕೂಡಲೇ ಈರುಳ್ಳಿ ರಫ್ತು ನಿರ್ಬಂಧನೆ ತೆಗೆಯಬೇಕು. ಮೂರು ವರ್ಷಕ್ಕೊಮ್ಮೆ ಈರುಳ್ಳಿಗೆ ಉತ್ತಮ ಬೆಲೆ ದೊರಕಲಿದ್ದು, ಇದಕ್ಕೆ ಸರ್ಕಾರ ಅಡ್ಡಗಾಲಾಕಬಾರದು. ಗ್ರಾಹಕರಿಗೆ ಬೆಲೆ ಏರಿಕೆಯಿಂದ ಹೆಚ್ಚಿನ ಹೊರೆ ಆಗುವುದಿಲ್ಲ. ತಿಂಗಳಿಗೆ ಸುಮಾರು 5 ರಿಂದ 6 ಕೆಜಿ ಈರುಳ್ಳಿಗೆ 150 ರೂಪಾಯಿ ಅಧಿಕ ಕೊಡುತ್ತೀರಾ. ಇದರಿಂದ ಅಷ್ಟೇನು ಹೊರೆ ಆಗುವುದಿಲ್ಲ ಎಂದು ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಅಧ್ಯಕ್ಷ ಕೆ.ಲೋಕೇಶ್ ಹೇಳುತ್ತಾರೆ.Conclusion:
Last Updated : Oct 9, 2019, 10:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.