ಬೆಂಗಳೂರು: ವಿಶ್ವ ಮೆದುಳಿನ ದಿನದ ಅಂಗವಾಗಿ ಸೋಮವಾರ ಸಂಜೆ ಬಿಬಿಎಂಪಿ ವತಿಯಿಂದ ವಿವಿಧ ಕಟ್ಟಡಗಳಿಗೆ ಕೆಂಪುಬಣ್ಣದ ಅಲಂಕಾರ ಮಾಡಲಾಗಿತ್ತು.
ಮಹಾತ್ಮಗಾಂಧಿ ರಸ್ತೆಯಲ್ಲಿರುವ ಪಿಯುಬಿ ಕಟ್ಟಡ, ಬಿಬಿಎಂಪಿ ಕೇಂದ್ರ ಕಚೇರಿ ಮತ್ತು ಕೌನ್ಸಿಲ್ ಕಟ್ಟಡಗಳನ್ನು ಕೆಂಪು ಬಣ್ಣದ ವಿದ್ಯುತ್ ದೀಪದಿಂದ ಅಲಂಕೃತಗೊಳಿಸುವ ಮೂಲಕ ಮೆದುಳಿನ ಉರಿಯೂತದ ಜಾಗತಿಕ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಬಿಬಿಎಂಪಿ ಬೆಂಬಲ ವ್ಯಕ್ತಪಡಿಸಿತು.
ಓದಿ: ತಂದೆಯ ಮೃತದೇಹಕ್ಕೆ ಹೆಗಲು ಕೊಟ್ಟ ಹೆಣ್ಮಕ್ಕಳು..
ಮೆದುಳಿನ ಉರಿಯೂತ ಇಡೀ ವಿಶ್ವವನ್ನೇ ಬಾಧಿಸುತ್ತಿದ್ದು, ವೈರಸ್ ಸೋಂಕಿನಿಂದ ತಲೆನೋವು, ಜ್ವರದ ಲಕ್ಷಣಗಳು ಕಂಡುಬರುತ್ತವೆ.