ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಗ್ಯಾಂಗ್ವೊಂದು ಇದನ್ನ ಸದ್ಬಳಕೆ ಮಾಡಿಕೊಂಡು ಫೇಕ್ ಮ್ಯಾಟ್ರಿಮೋನಿಯಲ್ ಅಕೌಂಟ್ ಮಾಡಿ, ಅದರಲ್ಲಿ ಪ್ರೊಫೈಲ್ನಲ್ಲಿ ಚೆನ್ನಾಗಿರುವ ಫೋಟೋ ಹಾಕಿ, ಒಳ್ಳೆ ಕಂಪನಿ ಅಥವಾ ವಿದೇಶದಲ್ಲಿ ಹುದ್ದೆ ಇರುವುದಾಗಿ ಉಲ್ಲೇಖ ಮಾಡಿ ಬಳಿಕ ಅಮಾಯಕ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಮೋಸ ಮಾಡುತ್ತಿದ್ದಾರೆ.
ಇದರ ಆಧಾರದ ಮೇಲೆ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಾಗ, ಪ್ರೊಫೈಲ್ನಲ್ಲಿರುವ ಫೋಟೋ ಅಥವಾ ಆರೋಪಿಗಳು ಉಲ್ಲೇಖಿಸಿರುವ ಮಾಹಿತಿ ಮೇರೆಗೆ ಅವರನ್ನು ಬಂಧಿಸಲು ಸಾಧ್ಯವಾಗುವುದಿಲ್ಲ. ಯಾಕಂದ್ರೆ ಆರೋಪಿಗಳು ತಪ್ಪಾದ ಮಾಹಿತಿಯನ್ನ ಹಾಕಿರುತ್ತಾರೆ. ಹೀಗಾಗಿ ಪ್ರತಿಬಾರಿ ಸೈಬರ್ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಥವಾ ಮ್ಯಾಟ್ರಿಮೋನಿಯಲ್ ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.
ಯಾವೆಲ್ಲಾ ರೀತಿ ಮೋಸ ಮಾಡಬಹುದು:
- ವಿವಾಹದ ನೆಪದಲ್ಲಿ ಮೊದಲು ಗೆಳೆತನ
- ನಂತರ ಫೋನ್ ನಂಬರ್ ತೆಗೆದುಕೊಳ್ಳುತ್ತಾರೆ
- ಪ್ರತಿದಿನ ಪ್ರೀತಿಯಿಂದ ಸಲುಗೆಯಲ್ಲಿ ಮಾತುಕತೆ
- ಕೆಲವೊಂದು ಫೋಟೋಗಳನ್ನ ಶೇರ್ ಮಾಡುವಂತೆ ಸೂಚನೆ
- ನಂತರ ಎಮರ್ಜೆನ್ಸಿ ಹಣ ಬೇಕೆಂದು ಬೇಡಿಕೆ ಅಥವಾ ಬ್ಯಾಂಕ್ ಅಕೌಂಟ್ ತೊಂದರೆಯಾಗಿದೆ ಎಂದು ಹೇಳಿ ಹಣ ಕೇಳುವುದು.
- ಹಣ ಕೇಳಿದರೆ ಅಶ್ಲೀಲವಾಗಿ ಫೋಟೋ ಎಡಿಟ್ ಮಾಡಿ ಬೆದರಿಕೆ
ಇದನ್ನ ತಡೆಯಲು ಸೈಬರ್ ತಜ್ಞರ ಸಲಹೆ ಏನು:
ಇದರ ಬಗ್ಗೆ ಈಗಾಗಲೇ ಕೆಲವೊಂದು ವಿಚಾರಗಳನ್ನ ಅಧ್ಯಯನ ಮಾಡಿರುವ ಸೈಬರ್ ತಜ್ಞ ಡಾ. ಅನಂತ್ ಪ್ರಭು ಅವರು ಮಾತನಾಡಿ, ಮ್ಯಾಟ್ರಿಮೋನಿಯಲ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ವಿಚಾರಗಳು ಕೇಳಿ ಬರ್ತಿವೆ. ಹೀಗಾಗಿ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ಗೆ ಹೋಗುವ ಮುನ್ನ ಬಹಳ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
ಜೀವನದ ಸಂಗಾತಿಯನ್ನ ಆಯ್ಕೆ ಮಾಡಿಕೊಳ್ಳುವಾಗ ಬಹಳ ನಂಬಿಕೆ ಇರುವ ವೆಬ್ಸೈಟ್ನನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.
ಹೊಸದಾಗಿ ಮ್ಯಾಟ್ರಿಮೋನಿಯಲ್ ಅಕೌಂಟ್ ಓಪನ್ ಮಾಡುವಾಗ ಇಮೇಲ್ ಐಡಿ, ಫೋನ್ ನಂಬರ್, ಹಟ್ಟಿದ ದಿನಾಂಕ, ಅಕೌಂಟ್ ನಂಬರ್, ಬ್ಯಾಂಕ್ ಡಿಟೇಲ್ಸ್ ನಮೂದು ಮಾಡಬಾರದು.
ಪ್ರಪೋಸಲ್ ಬಂದಾಗ ಪ್ರೊಫೈಲ್ ಬ್ಯಾಕ್ ಗ್ರೌಂಡ್ ಚೆಕ್ ಮಾಡೋದು ಬಹಳ ಮುಖ್ಯವಾಗಿರುತ್ತದೆ.
ಒಂದು ವೇಳೆ ಭೇಟಿಯಾಗಲು ತಿಳಿಸಿದಾಗ ಅಥವಾ ಹಣಕ್ಕೆ ಬೇಡಿಕೆ ಇಟ್ಟಾಗ ಯಾವುದೇ ಕಾರಣಕ್ಕೂ ಹಣ ನೀಡಬಾರದು.
ಭೇಟಿಯಾಗಲು ತಿಳಿಸಿದಾಗ ಜನರು ಇರುವಂತ ಜಾಗಕ್ಕೆ ಹೋಗಬೇಕು. ಲಾಡ್ಜ್, ರೂಮ್ ಇನ್ನಿತರೆ ಸ್ಥಳಗಳಿಗೆ ಹೋಗಬಾರದು.
ವಿಡಿಯೋ ಕಾಲ್ ಅಥವಾ ಫೋಟೋಗಳನ್ನ ಶೇರ್ ಮಾಡಬಾರದು.
ಇದನ್ನು ಓದಿ:ಗೋ ಹತ್ಯೆ ನಿಷೇಧ ವಿಧೇಯಕ ವಿಚಾರ: ಮಂಗಳವಾರ ಒಂದು ದಿನದ ಅಧಿವೇಶನ ಕರೆಯಲು ಸಿಎಂ ನಿರ್ಧಾರ
ಹೀಗೆ ಹಲವಾರು ವಿಚಾರಗಳ ಬಗ್ಗೆ ಬಹಳ ಎಚ್ಚರದಿಂದ ಇರುವಂತೆ ಸೈಬರ್ ತಜ್ಞ ಅನಂತ್ ಪ್ರಭು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.