ETV Bharat / state

ಸಿಎಂ ಯಡಿಯೂರಪ್ಪ ಬದಲಾವಣೆಗೆ ಬಿಜೆಪಿ ಬಂಡಾಯ ಶಾಸಕರ ಬಿಗಿ ಪಟ್ಟು! - ಉಮೇಶ್‌ ಕತ್ತಿ

ಬಿಜೆಪಿಯಲ್ಲಿ ಇದೀಗ ನಾಯಕತ್ವದ ಬದಲಾವಣೆಯ ಕೂಗು ಕೇಳಿಬಂದಿದೆ. ಮುಖ್ಯಮಂತ್ರಿ ಬದಲಾವಣೆಗೆ ಹಿರಿಯ ಶಾಸಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

rebels demanding for leadership changes in karnataka bjp
ಸಿಎಂ ಯಡಿಯೂರಪ್ಪ ಬದಲಾವಣೆಗೆ ಬಿಜೆಪಿ ಬಂಡಾಯ ಶಾಸಕರ ಬಿಗಿ ಪಟ್ಟು!
author img

By

Published : May 28, 2020, 11:27 PM IST

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆಗೆ ಬಿಗಿ ಪಟ್ಟನ್ನು ಬಂಡಾಯ ಶಾಸಕರು ಹಿಡಿದಿರುವುದು ಮುಖ್ಯಮಂತ್ರಿಗಳ ನೆಮ್ಮದಿಯನ್ನು ಕದಡಿದೆ ಎಂದು ಹೇಳಲಾಗುತ್ತಿದೆ.

ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದು ಅತೃಪ್ತ ಶಾಸಕರನ್ನು ಸೆಳೆದು ಸಭೆ ನಡೆಸುತ್ತಿರುವ ಭಿನ್ನಮತೀಯ ನಾಯಕರು ಎನ್ನಲಾದ ಉತ್ತರ ಕರ್ನಾಟಕ ಭಾಗದ ಅದರಲ್ಲೂ ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿಯ ಹಿರಿಯ ಶಾಸಕರ ಮನವೊಲಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಯಾಸಪಡುತ್ತಿದ್ದಾರೆ.

ಬಂಡಾಯ ಗುಂಪಿನಲ್ಲಿರುವ ಶಾಸಕರು ಇವರೇ ಅಂತೆ?

ಬಸವನಗೌಡ ಪಾಟೀಲ್ ಯತ್ನಾಳ್, ಉಮೇಶ ಕತ್ತಿ, ಮುರುಗೇಶ್ ನಿರಾಣಿ, ಸಿದ್ದು ಸವದಿ, ಅರವಿಂದ ಬೆಲ್ಲದ್, ದತ್ತಾತ್ರೇಯ ಪಾಟೀಲ್ ರೇವೂರ್, ಸೇಡಂ ಶಾಸಕ ರಾಜ್ ಕುಮಾರ್ ಪಾಟೀಲ್ ಸೇರಿದಂತೆ ಉತ್ತರ ಕರ್ನಾಟಕದ ಸುಮಾರು 25ಕ್ಕೂ ಹೆಚ್ಚು ಶಾಸಕರು ಬಂಡಾಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಬಂಡಾಯ ಚಟುವಟಿಕೆಗಳ ಸುಳಿವು ದೊರೆಯುತ್ತಿದ್ದಂತೆ ಸಿಎಂ ಯಡಿಯೂರಪ್ಪ ಭಿನ್ನಮತೀಯ ಶಾಸಕರನ್ನು ಸಂಪರ್ಕಿಸಿ ಆರಂಭಿಕ ಹಂತದಲ್ಲೇ ಶಮನಗೊಳಿಸುವ ಯತ್ನ ನಡೆಸಿದರೂ ನಿರೀಕ್ಷಿತ ಫಲ ದೊರಕುತ್ತಿಲ್ಲ. ತಮ್ಮ ನಾಯಕತ್ವದ ವಿರುದ್ಧ ಅಪಸ್ವರ ಕೇಳಿ ಬರುತ್ತಿದ್ದಂತೆ ಸಿಎಂ ಬಿಎಸ್‌ವೈ, ಈ ಹಿಂದೆ ಆಪರೇಷನ್ ಕಮಲದ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆಯುವ ಪ್ರಯತ್ನದಲ್ಲಿ ಚುರುಕಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಆಪ್ತ ಸಹಾಯಕ ಎನ್.ಆರ್.ಸಂತೋಷ ಅವರನ್ನು ಕರೆಸಿಕೊಂಡು ದಿಢೀರನೆ ಅವರನ್ನು ತಮ್ಮ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಇಂದೂ ಸಹ ಸಭೆ

ಭಿನ್ನಮತೀಯ ಶಾಸಕರು ಬೆಂಗಳೂರಿನಲ್ಲಿ ಇಂದೂ ಸಹ ರಹಸ್ಯ ಸಭೆ ನಡೆಸಿ ಸಿಎಂ ಯಡಿಯೂರಪ್ಪರನ್ನು ಬದಲಾವಣೆ ಹಾಗೂ ರಾಜಕೀಯ ಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಯತ್ನಾಳ್ ಉಮೇಶ್ ಕತ್ತಿ, ನಿರಾಣಿ ಸೇರಿದಂತೆ ಹಲವು ಶಾಸಕರು ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಮೇಲ್ನೋಟಕ್ಕೆ ಉತ್ತರ ಕರ್ನಾಟಕದ ಅಭಿವೃದ್ಧಿ, ರಾಜ್ಯಸಭೆ ಟಿಕೆಟ್, ಅತಿವೃಷ್ಟಿ ಹಾನಿಗೆ ಪರಿಹಾರ ಎಂದು ಹೇಳುತ್ತಿದ್ದರಾದರೂ ಸಭೆಯ ಹಿಂದಿನ ರಾಜಕೀಯ ಕಾರಣವೇ ಬೇರೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.