ಬೆಂಗಳೂರು: ವಿಚಾರಣೆಗಾಗಿ ನಾಳೆ ಯಾವ ಅತೃಪ್ತ ಶಾಸಕರೂ ಸ್ಪೀಕರ್ ಬಳಿ ಹೋಗದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಅತೃಪ್ತ ಶಾಸಕರಿಗೆ ನಾಳೆ ವಿಚಾರಣೆಗೆ ಬರುವಂತೆ ಸ್ಪೀಕರ್ ನೋಟೀಸ್ ನೀಡಿದ್ದರು. ಆದರೆ, ನಾಳೆ ಸ್ಪೀಕರ್ ಬಳಿ ಯಾವ ಅತೃಪ್ತ ಶಾಸಕರು ತೆರಳುತ್ತಿಲ್ಲವಂತೆ. ಈಗಾಗಲೇ ಸ್ಪೀಕರ್ ಮುಂದೆ ಅತೃಪ್ತರೆಲ್ಲರೂ ಹಾಜರಾಗಿದ್ದರು. ಇತ್ತ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆ, ಸ್ಪೀಕರ್ ಭೇಟಿಯಾಗದಿರಲು ನಿರ್ಧರಿಸಿದ್ದಾರೆ. ಈ ಸಂಬಂಧ ಅತೃಪ್ತರು ವಕೀಲರನ್ನೂ ಸಂಪರ್ಕಿಸಿ ಅವರ ಸಲಹೆಯನ್ನು ಪಡೆದಿದ್ದಾರೆ. ತಮ್ಮ ವಕೀಲರ ಸೂಚನೆಯಂತೆ ನಾಳೆ ಸ್ಪೀಕರ್ ರಮೇಶ್ ಕುಮಾರ್ ಅವರ ಮುಂದೆ ಹಾಜರಾಗದಿರಲು ಅತೃಪ್ತ ಶಾಸಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ವಿಶ್ವಾಸ ಮತಯಾಚನೆ ಮುಗಿದ ಬಳಿಕವೇ ಬೆಂಗಳೂರಿಗೆ ವಾಪಾಸ್ ಆಗುವುದು ಅತೃಪ್ತರ ಅಚಲ ನಿರ್ಧಾರವಾಗಿದೆಯಂತೆ.