ETV Bharat / state

ಸಿಎಂ ವಿರುದ್ಧ ಕಟೀಲ್​ಗೆ ದೂರು ನೀಡಿದ ಬಿಜೆಪಿ ರೆಬಲ್ ಶಾಸಕರು...! - ಸಿಎಂ ವಿರುದ್ಧ ದೂರು ನೀಡಿದ ರೆಬಲ್​ ಶಾಸಕರು,

ಅನುದಾನದ ತಾರತಮ್ಯ ಹೆಸರಲ್ಲಿ ಸಿಎಂ ಯಡಿಯೂರಪ್ಪ ವಿರುದ್ಧ ರೆಬಲ್​ ಶಾಸಕರು ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗ್ತಿದೆ.

rebel MLAs compliant, rebel MLAs compliant against CM, rebel MLAs compliant against CM Yediyurappa, ದೂರು ನೀಡಿದ ರೆಬಲ್​ ಶಾಸಕರು, ಸಿಎಂ ವಿರುದ್ಧ ದೂರು ನೀಡಿದ ರೆಬಲ್​ ಶಾಸಕರು, ಸಿಎಂ ಯಡಿಯೂರಪ್ಪ ವಿರುದ್ಧ ದೂರು ನೀಡಿದ ರೆಬಲ್​ ಶಾಸಕರು,
ಸಿಎಂ ವಿರುದ್ಧ ಕಟೀಲ್​ಗೆ ದೂರು ನೀಡಿದ ಬಿಜೆಪಿ ರೆಬಲ್ ಶಾಸಕರು
author img

By

Published : Jun 19, 2020, 6:13 AM IST

Updated : Jun 19, 2020, 6:59 AM IST

ಬೆಂಗಳೂರು: ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆ ಕಸರತ್ತು ಅಂತ್ಯಗೊಳ್ಳುತ್ತಿದ್ದಂತೆಯೇ ಬಿಜೆಪಿಯ ರೆಬೆಲ್ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮತ್ತೊಮ್ಮೆ ತಮ್ಮ ಧ್ವನಿ ಎತ್ತತೊಡಗಿದ್ದಾರೆನ್ನಲಾಗಿದೆ.

ಅನುದಾನದ ತಾರತಮ್ಯ ಹೆಸರಲ್ಲಿ ಬಿಜೆಪಿಯ ಅಧಿಕಾರ ವಂಚಿತ ಅತೃಪ್ತ ಶಾಸಕರು ಸಿಎಂ ಯಡಿಯೂರಪ್ಪನವರ ವಿರುದ್ಧ ಈಗ ತಿರುಗಿ ಬಿದ್ದಿದ್ದಾರೆ. ಗುರುವಾರ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭಿನ್ನಮತೀಯ ಶಾಸಕರು ಭೇಟಿಯಾಗಿ ಮುಖ್ಯಮಂತ್ರಿಗಳು ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ದೂರು ನೀಡಿದ್ದಾರೆ.

ಬಂಡಾಯ ಶಾಸಕರೆನ್ನಲಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ, ಅನಿಲ್ ಬೆನಕೆ ಸೇರಿದಂತೆ ಹಲವು ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ತಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿ ಯೋಜನೆಗಳಿಗೆ ಸಿಎಂ ಅನುದಾನ ನೀಡುತ್ತಿಲ್ಲ. ಅಧ್ಯಕ್ಷರು ಮಧ್ಯ ಪ್ರವೇಶಿಸಿ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಅನುದಾನ ಬಿಡುಗಡೆ ಮಾಡಲು ಒತ್ತಡ ಹಾಕುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ.

ಇದೇ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲೇ ಮಾಡಬೇಕು. ತಮಗೂ ಮಂತ್ರಿಮಂಡಲದಲ್ಲಿ ಅವಕಾಶ ನೀಡಬೇಕು ಎಂದು ಬಂಡಾಯ ಶಾಸಕರು ಕಟೀಲ್ ಬಳಿ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಕ್ಷೇತ್ರಕ್ಕೆ ಅನುದಾನ ಬಿಡುಗಡೆಗಾಗಿ ಭಿನ್ನಮತೀಯ ಶಾಸಕರು ಬಿಜೆಪಿ ಅಧ್ಯಕ್ಷರನ್ನು ಮೇಲ್ನೋಟಕ್ಕೆ ಭೇಟಿ ಮಾಡಿರುವರಾದರೂ ಇದರ ಹಿಂದಿನ ಉದ್ದೇಶವೇ ಬೇರೆ ಇದೆ. ಸಿಎಂ ವಿರುದ್ದ ಸಿಡಿದೇಳಲು ಬಿಜೆಪಿಯ ಅತೃಪ್ತ ಶಾಸಕರ ಈಗಿನಿಂದಲೇ ವೇದಿಕೆ ಸಿದ್ಧಪಡಿಸುತ್ತಿದ್ದಾರೆನ್ನಲಾಗಿದೆ.

Last Updated : Jun 19, 2020, 6:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.