ದೇವನಹಳ್ಳಿ: ವಿದೇಶಗಳಲ್ಲಿರುವವರನ್ನು ಸ್ವದೇಶಕ್ಕೆ ವಾಪಸ್ ತರುವ ಮತ್ತು ಇಲ್ಲಿಂದ ವಿದೇಶಕ್ಕೆ ಕರೆದೊಯ್ಯುವ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅವಕಾಶ ಮಾಡಿಕೊಟ್ಟಿದೆ.
ಭಾರತ ಸರ್ಕಾರದ ವಂದೇ ಭಾರತ್ ಮಿಷನ್ ಮತ್ತು ಏರ್ ಬಬಲ್ ಕಾರ್ಯಕ್ರಮಗಳ ಅಂಗವಾಗಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭವಾಗಲಿದೆ. ಕಾರ್ಯಕ್ರಮದ ಒಪ್ಪಂದಗಳ ಅಡಿಯಲ್ಲಿ 13 ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆ ನಡೆಸಲಿವೆ.
ಬೆಂಗಳೂರು ವಿಮಾನ ನಿಲ್ದಾಣದಿಂದ 14 ಸ್ಥಳಗಳಿಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಡೆಯಲಿದ್ದು, ಅಬುಧಾಬಿ (ಎತಿಹಾದ್, ಗೋ ಏರ್ ಮತ್ತು ಇಂಡಿಯಾ ಎಕ್ಸ್‍ಪ್ರೆಸ್), ಆಮ್ಸ್‍ಟರ್‍ಡ್ಯಾಮ್ (ಕೆಎಲ್‍ಎಂ ರಾಯಲ್ ಡಚ್), ದುಬೈ (ಎಮಿರೇಟ್ಸ್, ಇಂಡಿಗೊ, ಗೋಏರ್, ಏರ್ ಇಂಡಿಯಾ ಎಕ್ಸ್‍ಪ್ರೆಸ್ ಮತ್ತು ವಿಸ್ತಾರ), ದೋಹಾ (ಇಂಡಿಗೊ, ಕತಾರ್ ಏರ್‍ವೇಸ್), ಫ್ರಾಂಕ್‍ಫರ್ಟ್(ಲುಫ್ತಾನ್ಸ), ಕುವೈತ್(ಏರ್ ಇಂಡಿಯಾ ಮತ್ತು ಇಂಡಿಗೊ), ಕೌಲಾಲಂಪುರ್(ಏರ್ ಇಂಡಿಯಾ ಎಕ್ಸ್‍ಪ್ರೆಸ್ ಮತ್ತು ಮಲೇಷಿಯನ್ ಏರ್‍ಲೈನ್ಸ್), ಲಂಡನ್ (ಏರ್ ಇಂಡಿಯಾ ಮತ್ತು ಬ್ರಿಟಿಷ್ ಏರ್‍ವೇಸ್), ಮಸ್ಕತ್ (ಏರ್ ಇಂಡಿಯಾ ಎಕ್ಸ್‍ಪ್ರೆಸ್) ಮತ್ತು ಸಿಂಗಪುರ್(ಏರ್ ಇಂಡಿಯಾ ಎಕ್ಸ್‍ಪ್ರೆಸ್) ಸೇರಿವೆ. ಸ್ಯಾನ್‍ಫ್ರಾನ್ಸಿಸ್ಕೊಗೆ ಕೊಚ್ಚಿನ್(ಏರ್ ಇಂಡಿಯ) ಮೂಲಕ ಬೆಂಗಳೂರು ವಿಮಾನ ನಿಲ್ದಾಣ ಸಂಪರ್ಕ ಹೊಂದಲಿದೆ.
ವಿಮಾನಗಳ ಆಗಮನ ಮತ್ತು ನಿರ್ಗಮನ ಬಗ್ಗೆ ಕೆಲವು ಮಾರ್ಗಸೂಚಿ ಅಳವಡಿಸಲಾಗಿದೆ.