ETV Bharat / state

ಬೆಂಗಳೂರು : ಸ್ಥಗಿತವಾಗಿದ್ದ 104 ಸಹಾಯವಾಣಿಗೆ ಮರುಜೀವ ನೀಡಲು ಮುಂದಾದ ಆರೋಗ್ಯ ಇಲಾಖೆ..‌

ಸಂಬಳ ನೀಡದೇ ಇರುವ ಬಗ್ಗೆ 104 ಸಿಬ್ಬಂದಿ ಆರೋಗ್ಯ ಇಲಾಖೆಯ ಆಯುಕ್ತರಿಗೆ ಮನವಿ ಪತ್ರ ಹಾಗೂ ದೂರು ನೀಡಿದ್ರು. ಕೂಡಲೇ ಪಿರಾಮಲ್ ಸಂಸ್ಥೆಗೆ 9 ಕೋಟಿ ರೂಪಾಯಿಯನ್ನು ಸರ್ಕಾರ ನೀಡಿತ್ತು. ಅದಾದ ನಂತರವೂ ಸಿಬ್ಬಂದಿ ಕೆಲಸಕ್ಕೆ ಹಾಜರಾಗದ ಕಾರಣ ಸೇವೆಗಳು ಪುನಾರಂಭಗೊಂಡಿರಲಿಲ್ಲ. ಆಗಲೂ ಸಹ ಸಿಬ್ಬಂದಿ ಸಂಬಳ ನೀಡದೇ ಇರುವ ಕುರಿತು ಮಾಹಿತಿ ನೀಡಿದ್ರು..

Randeep
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಂದೀಪ್
author img

By

Published : Jan 23, 2022, 6:26 PM IST

ಬೆಂಗಳೂರು : ದೇಶದೆಲ್ಲೆಡೆ ಕೋವಿಡ್-19 ವೈರಸ್ ಹರಡುವಿಕೆ ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರ ಸಾರ್ವಜನಿಕರಿಗಾಗಿ 104 ಸಹಾಯವಾಣಿಯೊಂದನ್ನ ಆರಂಭಿಸಿತ್ತು.‌ ಕೋವಿಡ್ 2ನೇ ಅಲೆ ಸಂದರ್ಭದಲ್ಲಂತೂ 104 ಸಹಾಯವಾಣಿಗೆ ಬಿಟ್ಟೂ ಬಿಡದಂತೆ ಕರೆಗಳು ಬರುತ್ತಿದ್ದ ಕಾರಣ ಸಿಬ್ಬಂದಿಗೆ ಒತ್ತಡವಿತ್ತು.

ಈ ಸಿಬ್ಬಂದಿ ಕೇವಲ ಆಸ್ಪತ್ರೆಗಳ, ಕೋವಿಡ್ ಕುರಿತು ಇರುವ ಗೊಂದಲ ಪರಿಹಾರವಷ್ಟೇ ಮಾಡಲಿಲ್ಲ. ಬದಲಿಗೆ ಮಾನಸಿಕವಾಗಿ ಕೊಂದು ಹೋಗಿದ್ದ ಜನರಿಗೆ ಧೈರ್ಯ ಹೇಳುವ ಸಹಾಯವಾಣಿಯಾಗಿ ಬದಲಾಗಿತ್ತು.

ದಿನದ 3 ಪಾಳಿಯಲ್ಲಿ ಕಾರ್ಯನಿರ್ವಹಿಸಿದ್ರೂ ಒತ್ತಡದ ಕೆಲಸ ಮಾತ್ರ ಮುಗಿಯುತ್ತಿರಲಿಲ್ಲ. ಇಂತಹ ಪ್ರಮುಖ ಸಹಾಯವಾಣಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಪೂರ್ಣ ಸ್ಥಗಿತಗೊಂಡಿದ್ದು, ಇದೀಗ ಈ ನಂಬರ್‌ಗೆ ಮರುಜೀವ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಮಾತನಾಡಿರುವುದು..

ಹೋಂ ಐಸೋಲೇಶನ್‌ನಲ್ಲಿದ್ದೋರು, ಆಸ್ಪತ್ರೆಗಳಲ್ಲಿ ಬೆಡ್‌ಗಾಗಿ ಹುಡುಕಾಟ ನಡೆಸುತ್ತಿದ್ದೋರು, ಅವರ ಕುಟುಂಬಸ್ಥರು, ಸ್ನೇಹಿತರು ಹೀಗೆ ಎಲ್ಲರೂ 104 ಸಹಾಯವಾಣಿಗೆ ಕರೆ ಮಾಡ್ತಿದ್ರು. ದಿನದ 3 ಪಾಳಿಯಲ್ಲಿ ಕಾರ್ಯನಿರ್ವಹಿಸಿದ್ರೂ ಒತ್ತಡದ ಕೆಲಸ ಮಾತ್ರ ಮುಗಿಯುತ್ತಿರಲಿಲ್ಲ.

ಇಂತಹ ಪ್ರಮುಖ ಸಹಾಯವಾಣಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಪೂರ್ಣ ಸ್ಥಗಿತಗೊಂಡಿದ್ದು, ಇದೀಗ ಈ ನಂಬರ್‌ಗೆ ಮರುಜೀವ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.

ಅಂದಹಾಗೇ, ಆರೋಗ್ಯ ಇಲಾಖೆಯಿಂದ 104 ಸಹಾಯವಾಣಿ ನಿಭಾಯಿಸಲು ಪಿರಾಮಲ್ ಸಂಸ್ಥೆಯು ಗುತ್ತಿಗೆ ಪಡೆದಿತ್ತು. 104 ಸಹಾಯವಾಣಿ ಮಾತ್ರವಲ್ಲದೇ, 14410 ಹಾಗೂ 108 ಕರೆಗಳನ್ನೂ 104 ಸಿಬ್ಬಂದಿಗಳೇ ಸ್ವೀಕರಿಸುತ್ತಿದ್ರು. ಕೋವಿಡ್ ಸಂದರ್ಭದಲ್ಲಿ ಕೆಲಸದ ಅವಧಿಗೂ ಮೀರಿ ದುಡಿದಿದ್ದರು.

ಆದರೆ, ಸರಿಯಾಗಿ ವೇತನವನ್ನೇ ನೀಡದೇ, ಇನ್ಸೆಂಟಿವ್ಸ್ ಕೊಡಿಸುವ ಭರವಸೆಗೂ ಎಳ್ಳುನೀರು ಬಿಟ್ಟಿದ್ದರು. ಹುಬ್ಬಳ್ಳಿ ಹಾಗೂ ಬೆಂಗಳೂರಿನ ಸಿ ವಿ ರಾಮನ್ ಆಸ್ಪತ್ರೆಯಲ್ಲಿ 150ಕ್ಕೂ ಹೆಚ್ಚು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ವೇತನದ ಸಮಸ್ಯೆಯಿಂದಾಗಿ 104 ಕಾಲ್ ಸೆಂಟರ್ ಸಿಬ್ಬಂದಿಯಿಲ್ಲದ ಕಾರಣ ಸ್ಥಗಿತಗೊಂಡಿತ್ತು.

ಸಂಬಳ ನೀಡದೇ ಇರುವ ಬಗ್ಗೆ 104 ಸಿಬ್ಬಂದಿ ಆರೋಗ್ಯ ಇಲಾಖೆಯ ಆಯುಕ್ತರಿಗೆ ಮನವಿ ಪತ್ರ ಹಾಗೂ ದೂರು ನೀಡಿದ್ರು. ಕೂಡಲೇ ಪಿರಾಮಲ್ ಸಂಸ್ಥೆಗೆ 9 ಕೋಟಿ ರೂಪಾಯಿಯನ್ನು ಸರ್ಕಾರ ನೀಡಿತ್ತು. ಅದಾದ ನಂತರವೂ ಸಿಬ್ಬಂದಿ ಕೆಲಸಕ್ಕೆ ಹಾಜರಾಗದ ಕಾರಣ ಸೇವೆಗಳು ಪುನಾರಂಭಗೊಂಡಿರಲಿಲ್ಲ. ಆಗಲೂ ಸಹ ಸಿಬ್ಬಂದಿ ಸಂಬಳ ನೀಡದೇ ಇರುವ ಕುರಿತು ಮಾಹಿತಿ ನೀಡಿದ್ರು.

ಮತ್ತೊಮ್ಮೆ ಸರ್ಕಾರದಿಂದ ಬಾಕಿ ₹4.5 ಕೋಟಿಯನ್ನು ನೀಡಲಾಗಿತ್ತು. ಇಷ್ಟೆಲ್ಲಾ ನೀಡಿದ್ರೂ ಪಿರಾಮಲ್ ಸಂಸ್ಥೆ ಸಿಬ್ಬಂದಿಗೆ ಹಣ ನೀಡದ ಕಾರಣ 104 ಸಹಾಯವಾಣಿ ಪರ್ಮನೆಂಟಾಗಿ ಸ್ಥಗಿತಗೊಂಡಿತ್ತು. ಈ ಹಿನ್ನೆಲೆ ಅವರ ಸೇವೆಯನ್ನು ವಜಾಗೊಳಿಸಿ ಹೊಸ ಟೆಂಡರ್‌ ಕರೆಯಲಾಗಿದೆ.

ಮಾರ್ಚ್ 31ರೊಳಗೆ ಹೊಸ ಕಂಪನಿಗೆ ಗುತ್ತಿಗೆ ನೀಡಲಾಗುತ್ತಿದೆ. ಅಷ್ಟರಲ್ಲಿ ತಾತ್ಕಾಲಿಕವಾಗಿಯಾದ್ರೂ 104 ಸಹಾಯವಾಣಿಗೆ ಬೇರೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಅಂತಾ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ.

104 ಕರೆಗಳನ್ನು ಮಾತ್ರವಲ್ಲದೇ ಹೆಚ್ಚಿನ 2 ಸಹಾಯವಾಣಿಗಳ ಕರೆಯನ್ನು ಸ್ವೀಕರಿಸಿ ಸಿಬ್ಬಂದಿ ಹಗಲು-ರಾತ್ರಿ ದುಡಿದಿದ್ದಾರೆ. ಕೋವಿಡ್‌ನಂತಹ ಸಂದರ್ಭದಲ್ಲಿಯೂ ತನ್ನ ಲಾಭವನ್ನೇ ನೋಡಿಕೊಂಡು ಸಿಬ್ಬಂದಿಯ ಹಿತಾಸಕ್ತಿಗೆ ಬೆಲೆ ಕೊಡದ ಕಂಪನಿಯ ಸೇವೆಯನ್ನು ವಜಾಗೊಳಿಸಿದ್ದು, ಸರ್ಕಾರದ ಒಳ್ಳೆಯ ನಡೆಯಾಗಿದೆ. ಆದಷ್ಟು ಬೇಗ 104 ಹೆಲ್ಪ್​​ಲೈನ್ ಚಾಲ್ತಿಗೆ ಬಂದು, ಕೋವಿಡ್ ಸೋಂಕಿತರ ಸೇವೆಗಳು ಸಮರ್ಪಕವಾಗಿ ನಡೆಯಲು ಅನುಕೂಲವಾಗಲಿ ಅನ್ನೋದು ನಮ್ಮ ಆಶಯ.

ಓದಿ: ನಿರಾಣಿ ಅವರಿಗೆ ಬೆಂಬಲಿಸುವ ಮೂಲಕ ಪರೋಕ್ಷವಾಗಿ ಕೂಡಲಸಂಗಮ ಶ್ರೀ ವಿರುದ್ಧ ವಚನಾನಂದ ಸ್ವಾಮೀಜಿ ಕಿಡಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.