ETV Bharat / state

ಆರ್​ಬಿಐ ದೇಶದ ಆರ್ಥಿಕತೆಯ ರಕ್ಷಕ, ಸಂವಿಧಾನ ಪ್ರಜಾಪ್ರಭುತ್ವದ ಆತ್ಮ: ಸಿಎಂ ಬೊಮ್ಮಾಯಿ

ಸ್ವಾತಂತ್ರ್ಯ ಪೂರ್ವದಿಂದ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಿ, ದೇಶದ ಆರ್ಥಿಕತೆಯನ್ನು ನಿಯಂತ್ರಿಸುತ್ತಿರುವ ಆರ್​ಬಿಐ ಸಂವಿಧಾನ ದಿನಾಚರಣೆ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದು ಸಿಎಂ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ
author img

By

Published : Nov 28, 2022, 4:15 PM IST

Updated : Nov 28, 2022, 4:36 PM IST

ಬೆಂಗಳೂರು: ಉತ್ತಮ ಆರ್ಥಿಕತೆ ಪ್ರಗತಿಯ ಸಂಕೇತವಾಗಿದ್ದು, ಆರ್​ಬಿಐ ದೇಶದ ಆರ್ಥಿಕತೆಯ ರಕ್ಷಕನಂತಿದೆ. ನಮ್ಮ ದೇಶದ ಸಂವಿಧಾನ ಪ್ರಜಾಪ್ರಭುತ್ವದ ಆತ್ಮದಂತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕಿನ ಪರಿಶಿಷ್ಟ ಜಾತಿ/ಪಂಗಡ ವರ್ಗದ ನೌಕರರ ಸಂಘ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್​ಬಿಐ ತನ್ನದೇ ಇತಿಹಾಸ ಹೊಂದಿದೆ. ಸ್ವಾತಂತ್ರ್ಯ ಪೂರ್ವದಿಂದ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಿ, ದೇಶದ ಆರ್ಥಿಕತೆಯನ್ನು ನಿಯಂತ್ರಿಸುತ್ತಿರುವ ಆರ್​ಬಿಐ ಸಂವಿಧಾನ ದಿನಾಚರಣೆ ಆಚರಿಸುತ್ತಿರುವುದು ಸಂತಸದ ಸಂಗತಿ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಂವಿಧಾನ ಪ್ರಜಾಪ್ರಭುತ್ವದ ಆತ್ಮ ಇದ್ದಂತೆ. ಸಂವಿಧಾನ ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬಂದಿದೆ. ಇಷ್ಟು ದೊಡ್ಡ ಜನಸಂಖ್ಯೆ, ವೈವಿಧ್ಯಮಯ ಸಂಸ್ಕೃತಿ, ಭಾಷೆಗಳಿರುವ ದೇಶ ಒಂದು ಸಂವಿಧಾನವನ್ನು ಒಪ್ಪಿ, ಒಂದು ರಾಷ್ಟ್ರ, ಪ್ರಜಾಪ್ರಭುತ್ವವಾಗಿ ಗಣತಂತ್ರ ವ್ಯವಸ್ಥೆಯಲ್ಲಿ ಒಗ್ಗೂಡಿ ಕೆಲಸ ಮಾಡುತ್ತಿರುವುದು ಇಂದಿನ ಕಾಲದಲ್ಲಿ ಒಂದು ಅದ್ಭುತವೇ ಸರಿ ಎಂದು ಬಣ್ಣಿಸಿದರು.

ಆರ್ಥಿಕತೆಗೆ ವೇಗ: ಆರ್ಥಿಕತೆಯಲ್ಲಿ ಕೇವಲ ಫಲಿತಾಂಶಗಳಿವೆ. ಫಲಿತಾಂಶ ಪಡೆಯಲು ಯೋಜನೆ, ಕ್ರಿಯೆ ಹಾಗೂ ಗುರಿ ಇರಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲವು ಸವಾಲುಗಳಿವೆ. ಆದರೆ ಆರ್ಥಿಕತೆಯನ್ನು ಸರಿದೂಗಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಕೋವಿಡ್ ನಂತರದಲ್ಲಿ ಆರ್ಥಿಕತೆಯಲ್ಲಿ ಪುಟಿದೆದ್ದಿರುವ ಕೆಲವೇ ರಾಷ್ಟಗಳಲ್ಲಿ ನಮ್ಮ ದೇಶವೂ ಒಂದು. ಪ್ರಧಾನಮಂತ್ರಿಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಆರ್ಥಿಕತೆಗೆ ವೇಗ ನೀಡಿದ್ದಾರೆ. ಜನರ ಆಶೋತ್ತರಗಳನ್ನು ಈಡೇರಿಸಲು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ.

ಸಾಮಾಜಿಕ ನ್ಯಾಯ ದೊರಕಿಸಲು ಆರ್ಥಿಕತೆ ಪ್ರಮುಖ ಪಾತ್ರ: ಆರ್​ಬಿಐ ಭಾರತದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವಹಿಸಿದೆ. ಸಾಮಾಜಿಕ ನ್ಯಾಯ ದೊರಕಿಸಲು ಆರ್ಥಿಕತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಂಬೇಡ್ಕರ್ ಅವರು ಅರಿತೇ ಇದನ್ನು ಹುಟ್ಟುಹಾಕಿದರು. ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ವಿಶ್ವದಲ್ಲಿಯೇ ನಂಬರ್ 1 ದೇಶವಾಗುವತ್ತ ನಾವು ಶ್ರಮಿಸಬೇಕು ಎಂದು ತಿಳಿಸಿದರು.

ಸಂವಿಧಾನದಿಂದ ಶಕ್ತಿ: ಆರ್​ಬಿಐ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಉನ್ನತ ಮಟ್ಟದ ಧ್ಯೇಯ, ತತ್ವವನ್ನಿಟ್ಟುಕೊಂಡು ಕಾನೂನು ಮತ್ತು ಸಂವಿಧಾನದ ಅನುಗುಣವಾಗಿ ಕೆಲಸ ಮಾಡುತ್ತಿರುವುದರಿಂದ ಭಾರತ ದೇಶದ ಆರ್ಥಿಕತೆ ಸದೃಢವಾಗಿ ಬೆಳೆಯುತ್ತಿದೆ. ಇದು ನಮ್ಮ ಸಂವಿಧಾನದಿಂದ ಸಾಧ್ಯವಾಗಿದೆ.

ಸಂವಿಧಾನ ದಿನಾಚರಣೆ ಕಾರ್ಯಕ್ರಮ
ಸಂವಿಧಾನ ದಿನಾಚರಣೆ ಕಾರ್ಯಕ್ರಮ

ಕಾರ್ಯಾಂಗ, ನ್ಯಾಯಾಂಗ ಯಾವುದೇ ರಂಗವಿದ್ದರೂ ಸಂವಿಧಾನಬದ್ಧವಾಗಿ ನಡೆದುಕೊಂಡಾಗ ಮಾತ್ರ ನ್ಯಾಯ ನೀತಿಯಿಂದ ಇರುತ್ತದೆ. ಸಂವಿಧಾನ ಶ್ರೇಷ್ಠ ಗ್ರಂಥ. ಜಗತ್ತಿನ ಎಲ್ಲಾ ತತ್ವಗಳನ್ನು ಆಯ್ದು ಅದರ ಉತ್ಕೃಷ್ಟ ಗುಣಗಳನ್ನು ಸೇರಿಸಿ ನಮ್ಮ ಸಂವಿಧಾನ ರಚಿಸಲಾಗಿದೆ. ಸಮಾನ ಅವಕಾಶಗಳನ್ನು ನೀಡುವ ಸಂವಿಧಾನದಿಂದಲೇ ಸ್ವತಂತ್ರ ಭಾರತ ತನ್ನ ಶಕ್ತಿಯನ್ನು ಪಡೆಯುತ್ತದೆ ಎಂದು ತಿಳಿಸಿದರು.

ಜೀವಂತ ಸಂವಿಧಾನ: ಅಂಬೇಡ್ಕರ್ ಅವರ ಬದುಕಿನ ಪಯಣ ನೋವಿನಿಂದ ಕೂಡಿದ್ದರೂ ತಮ್ಮ ಜನಾಂಗದವರಿಗೆ ಪರಿಹಾರ ಹಾಗೂ ನ್ಯಾಯ ಒದಗಿಸಲು ಶ್ರಮಿಸಿದರು. ನಮ್ಮ ಸಂವಿಧಾನ ಅತ್ಯಂತ ಜೀವಂತವಾಗಿರುವ ಸಂವಿಧಾನ. ಸಂವಿಧಾನವನ್ನು ಕಾಲಕಾಲಕ್ಕೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ. ಅತಿಹೆಚ್ಚು ತಿದ್ದುಪಡಿಗಳಾಗಿರುವ ಸಂವಿಧಾನ ವಿಶ್ವದಲ್ಲಿಯೇ ಅತ್ಯುತ್ತಮ ಸಂವಿಧಾನ ಎಂದು ಗುರುತಿಸಲಾಗಿದೆ. ಆದ್ದರಿಂದಲೇ 130 ಕೋಟಿ ಜನರಿರುವ ದೇಶ ಒಂದು ರಾಷ್ಟ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ.

ಉತ್ತಮ ಆರ್ಥಿಕತೆ ಪ್ರಗತಿಯ ಸಂಕೇತ: ಆರ್ಥಿಕತೆ ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಆರ್ಥಿಕತೆ ವ್ಯಕ್ತಿಯ ಪ್ರಗತಿಗೂ ಕಾರಣವಾಗುತ್ತದೆ ಎಂದರು. ಆದ್ದರಿಂದ ಆರ್.ಬಿ.ಐ ಆರ್ಥಿಕತೆಯನ್ನು ಮುನ್ನಡೆಸುವ ನಾಯಕ. ಪಾಶ್ಚಿಮಾತ್ಯ ಆರ್ಥಿಕತೆ ಹಣದುಬ್ಬರ ಹಾಗೂ ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿದೆ. ಆದರೆ ನಮ್ಮಲ್ಲಿ ಆರ್.ಬಿ.ಐ ಸಂಸ್ಥೆಯ ಆರ್ಥಿಕ ನಿರ್ವಹಣೆಯಿಂದ ಉತ್ತಮ ಆರ್ಥಿಕ ವ್ಯವಸ್ಥೆ ಇದೆ. ಇಡೀ ಪ್ರಪಂಚ ಆರ್ಥಿಕ ಹಿಂಜರಿತ ಅನುಭವಿಸುತ್ತಿದ್ದರೆ, ನಮ್ಮಲ್ಲಿ ಶೇ 7 ರಷ್ಟು ಬೆಳವಣಿಗೆಯಾಗಿದೆ ಸಿಎಂ ಬೊಮ್ಮಾಯಿ ಹೇಳಿದರು.

ದೇಶದ ಗುರಿ ಸಾಧನೆಗೆ ಉತ್ತಮ ಸಂಬಂಧ ಅಗತ್ಯ: ಸರ್ಕಾರ, ಆರ್.ಬಿ.ಐ ಸಂಬಂಧ ಅತ್ಯಗತ್ಯವಾಗಿದ್ದು, ದೇಶ ತನ್ನ ಗುರಿ ಸಾಧಿಸಲು ಇದು ಮುಖ್ಯ. ಆರ್.ಬಿ.ಐ ಯಾವಾಗಲೂ ಸರ್ಕಾರದ ಗುರಿ ಸಾಧನೆಗೆ ಬೆನ್ನೆಲುಬಾಗಿ ನಿಂತಿದೆ. ಇದರಿಂದಾಗಿ ಆರ್ಥಿಕತೆಯೂ ಬಹಳ ಗಟ್ಟಿಯಾಗಿದೆ ಎಂದರು.

Last Updated : Nov 28, 2022, 4:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.