ETV Bharat / state

ಸರ್ವರ್ ಹ್ಯಾಕ್ ಆದ್ರೆ ದೂರು ಕೊಡಿ, ಮೋದಿ ಕಡೆ ಬೆರಳು ಮಾಡಬೇಡಿ : ಸಚಿವ ಸತೀಶ್ ಜಾರಕಿಹೊಳಿಗೆ ರವಿಕುಮಾರ್ ತಿರುಗೇಟು

ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ರವಿಕುಮಾರ್ ಪ್ರತಿಕ್ರಿಸಿದ್ದಾರೆ.

author img

By

Published : Jun 20, 2023, 7:55 PM IST

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗದೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಬೆರಳು ಮಾಡುತ್ತಿತ್ತು. ಇದೀಗ ಸರ್ವರ್ ಹ್ಯಾಕ್ ಮಾಡಿ ಗೃಹ ಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಕೆ ವಿಳಂಬವಾಗುವಂತೆ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಬಿಜೆಪಿ ಮೇಲೆ ಮಾಡಿ ಕುಣಿಯಲಾಗದವರಿಗೆ ನೆಲ ಡೊಂಕು ಎನ್ನುವಂತೆ ಸರ್ಕಾರ ವರ್ತಿಸುತ್ತಿದೆ. ಸರ್ವರ್ ಹ್ಯಾಕ್ ಆದರೆ ದೂರು ಕೊಡಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್​. ರವಿಕುಮಾರ್ ಅವರು ಸಚಿವ ಸತೀಶ್ ಜಾರಕಿಹೊಳಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಅಪ್ಲಿಕೇಶನ್ ವಿಳಂಬಕ್ಕೆ ಕಾರಣ ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಕುಣಿಯಲಾಗದವರಿಗೆ ನೆಲ ಡೊಂಕು ಅಂತ ರಾಜ್ಯ ಸರ್ಕಾರದ ಬಗ್ಗೆ, ಸಿದ್ದರಾಮಯ್ಯ ಬಗ್ಗೆ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇವರಿಗೆ ಕುಣಿಯೋಕೆ ಆಗುತ್ತಿಲ್ಲ. ಹಾಗಾಗಿ ನೆಲ ಡೊಂಕು ಅಂತಿದ್ದಾರೆ. ಸರ್ವರ್ ಡೌನ್ ಅಂತ ಹೇಳಿದ್ದಾರೆ. ನಿಮ್ಮ ಹುಳುಕನ್ನ ಮುಚ್ಚಿಕೊಳ್ಳಲು ಯಾಕೆ ಸುಳ್ಳು ಹೇಳ್ತೀರಾ.? ಹುಳುಕು ಇವರಲ್ಲಿ ಇರೋದು ಎಂದು ಕಿಡಿಕಾಡಿದರು.

ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ತೊಂದರೆಗೂ ಕೇಂದ್ರದ ಮೇಲೆ ಯಾಕೆ ಬೊಟ್ಟು ಮಾಡಿ ತೋರಿಸ್ತೀರಾ.? ಅಕ್ಕಿ ವಿಚಾರದಲ್ಲೂ ಹಾಗೆ ಮಾಡುತ್ತಿದ್ದಾರೆ. ಎಲ್ಲಾದಕ್ಕೂ ಕೇಂದ್ರ ಸರ್ಕಾರ ಕಾರಣ ಅಂತ ಹೇಳುತ್ತಿದ್ದಾರೆ. ಸರ್ವರ್ ಹ್ಯಾಕ್ ಮಾಡಿದ್ದಾರೆ ಅಂದ್ರೆ ಹ್ಯಾಕ್ ಮಾಡಿರೋರ ಬಗ್ಗೆ ದೂರು ನೀಡಿ. ಹಾಗೆಲ್ಲ ಸರ್ವರ್ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ. ಕೇಂದ್ರ ಅಕ್ಕಿ ಕೊಡಲಿಲ್ಲ ಅಂತಿದ್ದಾರೆ. ಕೇಂದ್ರ ಹೇಗೆ ಕೊಡುತ್ತದೆ.? ಸಿದ್ದರಾಮಯ್ಯ 40 ವರ್ಷದಿಂದ ರಾಜಕಾರಣ ಮಾಡುತ್ತಿದ್ದಾರೆ. 2.2ಲಕ್ಷ ಮೆಟ್ರಿಕ್ ಟನ್ ಹೇಗೆ ಕೊಡಲು ಸಾಧ್ಯ.? ಎಂದು ರವಿಕುಮಾರ್​ ಪ್ರಶ್ನಿಸಿದರು.

ನಿರುದ್ಯೋಗಿ ಪದವೀಧರರಿಗೆ ಹಣ ಕೊಡಲಾಗದ್ದಕ್ಕೆ ಕೇಂದ್ರ ಕಾರಣ ಎನ್ನುತ್ತೀರಲ್ಲ. ಈಗ ಪಾಸ್ ಆದವರು ನಿರುದ್ಯೋಗಿ ಹೇಗೆ ಆಗುತ್ತಾರೆ? ನಿಮ್ಮ ಯಾವ ಯೋಜನೆ ಸರಿಯಾಗಿದೆ ಹೇಳಿ. ಬಸ್ ಪಂಚರ್ ಆದರೂ ಕೇಂದ್ರ ಕಾರಣ ಎನ್ನಬೇಡಿ. ರಾಜ್ಯದಲ್ಲಿ ಸರಿಯಾದ ಬಸ್ ವ್ಯವಸ್ಥೆ ಇಲ್ಲ ಅದನ್ನು ಸರಿಪಡಿಸಿಕೊಳ್ಳಿ. ನಮಗೆ ಕೆಲಸ ಮಾಡಲು ಆಗುತ್ತಿಲ್ಲ ಅಂತ ಒಪ್ಪಿಕೊಳ್ಳಿ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ರವಿಕುಮಾರ್​ ವಾಗ್ದಾಳಿ ನಡೆಸಿದರು.

ನಾಳೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್​ ದೆಹಲಿಯಲ್ಲಿ ಕೇಂದ್ರ ಆಹಾರ ಮಂತ್ರಿ ಭೇಟಿ ವಿಚಾರ ಭೇಟಿ ಮಾಡಲಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಭೇಟಿ ಮಾಡಿ ಕೇಳಲಿ. ಆದರೆ ಕೇಂದ್ರದ ಮೇಲೆ ಆರೋಪ ಮಾಡುವ ನಿಮ್ಮ ಈ ರೀತಿ ಧೋರಣೆ ಸರಿಯಲ್ಲ. ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡೋದು ಎಷ್ಟರಮಟ್ಟಿಗೆ ಸರಿ? ಅಕ್ಕಿ ನೀಡುವುದರ ಬಗ್ಗೆ ಮೊದಲೇ ಆಹಾರ ಸಚಿವರ ಜೊತೆ ಮಾತನಾಡಬೇಕಿತ್ತು. ಎಫ್​ಸಿಐ ಜೊತೆಯಲ್ಲ ಎಂದು ರವಿಕುಮಾರ್​ ಟಾಂಗ್ ಕೊಟ್ಟರು.

ವಿದ್ಯುತ್ ದರ ಬಹಳಷ್ಟು ಹೆಚ್ಚಳ ಮಾಡಿದ್ದಾರೆ. ಒಂದು ಕಡೆ ಉಚಿತ ವಿದ್ಯುತ್ ಎಂದು ಹೇಳಿ ಮತ್ತೊಂದು ಕಡೆ ದರ ಹೆಚ್ಚಳ ಮಾಡಿದ್ದಾರೆ. ರಾಜ್ಯದ ಎಲ್ಲಾ ಕಡೆ ತೀವ್ರ ಗೊಂದಲವಾಗಿದೆ. ಜನರಿಂದ ವಿದ್ಯುತ್ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿದೆ. ಹಾಗಾಗಿ ಕೂಡಲೇ ವಿದ್ಯುತ್ ದರ ಸರಿಪಡಿಸದಿದ್ದರೆ ಕೆಇಆರ್​ಸಿಗೆ ಮುತ್ತಿಗೆ ಹಾಕುತ್ತೇವೆ ಎಂದು ರವಿಕುಮಾರ್​ ಎಚ್ಚರಿಕೆ ರವಾನಿಸಿದರು.

ನಾರಾಯಣಸ್ವಾಮಿ ಹೇಳಿಕೆ : ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಸತೀಶ್ ಜಾರಕಿಹೊಳಿ ಅವರು, ಸಾಫ್ಟ್‌ವೇರ್ ಎಲ್ಲಿದು ಅಂತಲೂ ಅವರಿಗೆ ಗೊತ್ತಿಲ್ಲ. ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ,. ಹಾಗಾಗಿ ಸರ್ವರ್ ಡೌನ್ ಆಗಿದೆ ಅಂತ ಹೇಳಿದ್ದಾರೆ. ಇದು ಹಾಸ್ಯಾಸ್ಪದ ವಿಚಾರ. ಇದು ಅವರ ಬುದ್ಧಿವಂತಿಕೆ ಪ್ರಚಾರ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಅವರೇ ಈ ರೀತಿ ಅಪಹಾಸ್ಯದ ಹೇಳಿಕೆ ನೀಡಬೇಡಿ. ನೀವು ಸರ್ಕಾರದ ಮಂತ್ರಿ ಇದ್ದೀರಿ. ಇದರಿಂದ ನಿಮ್ಮ ಘನತೆ ಕಮ್ಮಿ ಆಗಲಿದೆ. ಯಾಕೆ ಹ್ಯಾಕ್ ಆಗಿದೆ ಅಂತ ನೀವು ಕೊಟ್ಟಿರುವ ಏಜೆನ್ಸಿ ಕೇಳಿ. ನೀವು ಕೊಟ್ಟಿರೋ ಅಪ್ಲಿಕೇಶನ್ ಸರಿಯಾದ ಸಮಯಕ್ಕೆ ಆಗದಿರಲಿ ಅಂತ, ಹ್ಯಾಕ್ ಆಗುವಂತೆ ನೀವು ಮಾಡಿದ್ದೀರಿ ಎಂದು ಗುಡುಗಿದರು.

10 ಕೆಜಿ ಅಕ್ಕಿ ಫ್ರೀ ಅಂದ್ರಿ. ಪ್ರಧಾನಮಂತ್ರಿ ಮೋದಿ ಅವರು ಕೊಟ್ಟ 5 ಕೆಜಿ ಮಾತ್ರ ಜನರಿಗೆ ತಲುಪುತ್ತಿದೆ. ನೀವು ಹೇಳಿರೋ 10 ಕೆಜಿ ಅಕ್ಕಿ ಅಲ್ಲ. ಸಿದ್ದರಾಮಯ್ಯ ಅವರೇ ನಿಮಗೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇದೆಯಾ? ವ್ಯವಸ್ಥೆ ಬಗ್ಗೆ ನಿಮಗೆ ಗೊತ್ತಿದ್ದರೆ ಯಾರನ್ನು ನೀವು ಅಕ್ಕಿ ಕೇಳಬೇಕು. ಎಫ್​ಸಿಐ ಅವರನ್ನಲ್ಲ. ಹೀಗಾಗಿ ನಿಮ್ಮ ಉದ್ಧಟತನದಿಂದ ಅಕ್ಕಿ ಸಿಗಲಿಲ್ಲ. 1 ಕೆಜಿ ಅಕ್ಕಿಯನ್ನೂ ನಿಮಗೆ ಕೊಡಲು ಆಗುತ್ತಿಲ್ಲ. ವಿದ್ಯುತ್ ಫ್ರೀ ಎಂದು ಈಗ ಕಂಡೀಷನ್ ಹಾಕುತ್ತಿದ್ದೀರ. 70ಪೈಸೆ ಹೆಚ್ಚಳ ಮಾಡಿದಿರಿ. ನಿಮ್ಮ ವಿರುದ್ಧ ಜನ ಮಾತನಾಡುತ್ತಿದ್ದಾರೆ.

ನೇಕಾರರಿಗೆ 20 ಹೆಚ್ಪಿ ವರೆಗೂ ಉಚಿತ ಎಂದು ನೀವು ಹೇಳಿದ್ದು ವಿಡಿಯೋ ಬಿಡುಗಡೆ ಮಾಡಲಾ.? ಅಂಗನವಾಡಿ ಕಾರ್ಯಕರ್ತರಿಗೆ 15 ಸಾವಿರ ವೇತನ ಕೊಡೋದಾಗಿ ಹೇಳಿದ್ರಿ ಕೊಟ್ರಾ.? ಸಾವಿರ ಸುಳ್ಳು ಹೇಳಿದ್ರೂ ಸರಿ. ಅನ್ಯಾಯ ಮಾಡಿದ್ರೂ ಸರಿ. ಸರ್ಕಾರ ಮಾಡಬೇಕು ಅಂತ ಪೈಪೋಟಿಗೆ ಬಿದ್ರಿ. ಎಲ್ಲಿ ಹೋದ್ರು ಸುಳ್ಳು ಹೇಳಿದವರೆಲ್ಲಾ. ಸುಳ್ಳು ಹೇಳೋದನ್ನು ಪ್ರಾಕ್ಟೀಸ್ ಮಾಡಿಕೊಂಡಿದ್ದೀರಾ. ಮಹಿಳೆಯರು ಪ್ರಯಾಣ ಮಾಡಲು ಶಕ್ತಿ ಯೋಜನೆ ಕೊಟ್ರಿ. ಡೋರ್ ಕಿತ್ತಾಕುವಷ್ಟು ಶಕ್ತಿ ಬಂದಿದೆ. ಈ ಯೋಜನೆ ಕೈ ಬಿಟ್ರೆ, ನಿಮಗೆ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ನಾರಾಯಣಸ್ವಾಮಿ ಹೇಳಿದರು.

ಇದನ್ನೂ ಓದಿ : ಛತ್ತೀಸಗಢ ಅಕ್ಕಿ ಮೂಲಕ ಕಾಂಗ್ರೆಸ್ ಸರ್ಕಾರ ತನ್ನ ಜೇಬಿಗೆ ಹಣ ಹಾಕಿಕೊಳ್ಳುತ್ತಿದೆ: ಎನ್. ರವಿಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.