ETV Bharat / state

ಸಿಸಿಬಿ ಮುಂದೆ ರವಿ ಪೂಜಾರಿಯ ಹಲವು ರೋಚಕ ಸತ್ಯ ಬಿಚ್ಚಿಟ್ಟ ಶಿಷ್ಯ 'ಗುಲಾಮ’ - ರವಿ ಪೂಜಾರಿ ಶಿಷ್ಯ ಗುಲಾಮ

ಮಂಗಳೂರು ಮೂಲದ ಗುಲಾಮ ಖಾಲಿ ಜವಾನನಾಗಿದ್ದ, ನಂತರ ರವಿ ಪೂಜಾರಿ ಜೊತೆ ಸೇರಿಕೊಂಡು ಮಂಗಳೂರು ಸೇರಿ ಬೇರೆ ಬೇರೆ ಕಡೆಯ ಬ್ಯುಸಿನೆಸ್ ಮ್ಯಾನ್, ಚಿತ್ರನಟರು , ರಾಜಕಾರಣಿಗಳು, ಬಿಲ್ಡರ್ಸ್​ಗಳನ್ನ ಟಾರ್ಗೆಟ್ ಮಾಡಿ ಅವರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು.

ರವಿ ಪೂಜಾರಿ ಶಿಷ್ಯ ಗುಲಾಮ
ರವಿ ಪೂಜಾರಿ ಶಿಷ್ಯ ಗುಲಾಮ
author img

By

Published : Jun 16, 2020, 11:06 AM IST

Updated : Jun 16, 2020, 1:11 PM IST

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಜೊತೆ ಪ್ರಕರಣವೊಂದರಲ್ಲಿ ಸಂಪರ್ಕ ಹೊಂದಿದ್ದ ಮಂಗಳೂರು ಮೂಲದ ಗುಲಾಮ ಎನ್ನುವ ಆರೋಪಿಯನ್ನ ಸಿಸಿಬಿ ಬಂಧನ ಮಾಡಿದ ನಂತರ ಹಲವಾರು ರೋಚಕ ಸಂಗತಿಗಳು ಬಯಲಾಗಿವೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರವಿ ಪೂಜಾರಿಯನ್ನ ಮತ್ತೆ ವಶಕ್ಕೆ ಪಡೆಯಲು ಸಿಸಿಬಿ ನಿರ್ಧರಿಸಿದೆ.

ಆದರೆ, ಕೊರೊನಾ ಇರುವ ಕಾರಣ ಒಮ್ಮೆ ಜೈಲಿಗೆ ಕಳುಹಿಸಿದ ಆರೋಪಿಯನ್ನ ಮತ್ತೆ ವಶಕ್ಕೆ ಪಡೆದು ವಿಚಾರಣೆ ಮಾಡುವುದು ಕಷ್ಟಕರ. ಯಾಕಂದ್ರೆ ಈಗಾಗಲೇ ಸಿಸಿಬಿಯಲ್ಲಿ ಕೊರೊನಾ ಒಕ್ಕರಿಸಿದೆ. ಆದರೆ, ರವಿ ಪೂಜಾರಿಯನ್ನ ವಶಕ್ಕೆ ಪಡೆದು ತನಿಖೆ ಮಾಡೋದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ರವಿ ಪೂಜಾರಿ ಬೇರೆ ಪೊಲೀಸರ ಪಾಲಾಗ್ತಾನೆ. ಈತ ಮುಂಬೈ ಹಾಗೂ ಇನ್ನಿತರ ರಾಜ್ಯಗಳ ಪೊಲೀಸರಿಗೂ ಬೇಕಾಗಿದ್ದಾನೆ.

ಶೇ. 60/ಶೇ. 40 ಷೇರ್ ಲೆಕ್ಕದಲ್ಲಿ ಡೀಲಿಂಗ್​​​​​ :

ಮಂಗಳೂರು ಮೂಲದ ಗುಲಾಮ ಖಾಲಿ ಜವಾನನಾಗಿದ್ದ. ನಂತರ ರವಿ ಪೂಜಾರಿ ಜೊತೆ ಸೇರಿಕೊಂಡು ಮಂಗಳೂರು, ಬೇರೆ ಬೇರೆ ಕಡೆಯ ಬ್ಯುಸಿನೆಸ್ ಮ್ಯಾನ್, ಚಿತ್ರನಟರು , ರಾಜಕಾರಣಿಗಳು, ಬಿಲ್ಡರ್ಸ್​ಗಳನ್ನ ಟಾರ್ಗೆಟ್ ಮಾಡಿ ಅವರಿಗೆ ಬೇದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು. ರವಿ ಪೂಜಾರಿ ಹೆಸರು ಹೇಳಿಕೊಂಡು ಬೆದರಿಕೆ ಹಾಕುತ್ತಿದ್ದ. ಬಂದ ಹಣದಲ್ಲಿ ರವಿ ಪೂಜಾರಿಗೆ ಶೇ. 60 ಗುಲಾಮನಿಗೆ ಶೇ. 40 ರಷ್ಟು ಪಾಲುದಾರಿಕೆ ಇತ್ತು. ಹೀಗಾಗಿ ಮುರುಕಲು ಮನೆಯಲ್ಲಿದ್ದ ಗುಲಾಮ ಸದ್ಯ 8 ಕೋಟಿ ಒಡೆಯನಾಗಿ ರವಿ ಪೂಜಾರಿಯ ಹಾಗೆ ಆಸ್ತಿ , ಸೈಟ್ ಹೊಂದಿದ್ದಾನೆ.

ರವಿ ಪೂಜಾರಿ ಜೊತೆಗಿನ ನಂಟು ಬಿಚ್ಚಿಟ್ಟ ಗುಲಾಮ:

ಸಿಸಿಬಿ ವಶದಲ್ಲಿದ್ದಾಗ ರವಿ ಪೂಜಾರಿ ಜೊತೆಗಿನ ನಂಟು, ಭೂಗತ ಲೋಕದಲ್ಲಿ ರವಿ ಪೂಜಾರಿ ಮಾಡಿದ ಕೃತ್ಯ, ಹಾಗೆ ಈಗಾಗಲೇ ದಿವಂಗತ ರಾದ ಡಾನ್ ಮುತ್ತಪ್ಪ ರೈ ಹಾಗೂ ರವಿ ಪೂಜಾರಿ ನಡುವಿನ ಸಂಪರ್ಕ, ಮುತ್ತಪ್ಪ ರೈ , ರವಿ ಪೂಜಾರಿಗೆ ಸೈಟ್ ಹಾಗೂ ಬ್ಯುಸಿನೆಸ್ ವಿಚಾರದಲ್ಲಿ ಮಾಡಿರುವ ದೋಖಾದ ಬಗ್ಗೆ ತಿಳಿಸಿದ್ದಾನೆ. ಹಾಗೆ ರವಿ ಪೂಜಾರಿಯ ಅಪ್ಪಟ ಬಂಟನಾಗಿರುವ ವಿಚಾರ ಕೂಡ ಸಿಸಿಬಿಗೆ ತನಿಖೆಯಲ್ಲಿ ತಿಳಿದು ಬಂದಿದೆ.

ಕಳೆದ ವಿಚಾರಣೆ ವೇಳೆ ಸುಳ್ಳು ಹೇಳಿದ್ದ ಪೂಜಾರಿ:

ಗುಲಾಮ ತನಿಖೆ ನಡೆಸಿದ ಸಿಸಿಬಿ ಪೊಲೀಸರಿಗೆ ರವಿ ಪೂಜಾರಿ ತನಿಖೆ ವೇಳೆ ಸುಳ್ಳು ಹೇಳಿರುವ ವಿಚಾರ ಗೊತ್ತಾಗಿದೆ. ರವಿ ಬಂಟ ಗುಲಾಮ ಹೇಳಿಕೆಗೂ, ರವಿ ಪೂಜಾರಿಯ ಹೇಳಿಕೆಗೂ ವ್ಯತ್ಯಾಸ ಕಂಡು ಬಂದಿದೆ. ಈಗಾಗಲೆ ರವಿ ಪೂಜಾರಿಯ ಆಪ್ತರಿಂದ ಮಾಹಿತಿ ಕಲೆ‌ ಹಾಕಿ ನೋಡಿದಾಗ ರವಿ ಪೂಜಾರಿ ಸಿಸಿಬಿ ಪೊಲೀಸರು ನಡೆಸಿದ ವಿಚಾರಣೆ ವೇಳೆ ಬಹಳಷ್ಟು ಸುಳ್ಳು ಹೇಳಿರುವ ವಿಚಾರ ಬಯಲಾಗಿದೆ.

ಓದಿ: ’ನನ್ನನ್ನು ಕೊಲ್ಲಲು ಸುಪಾರಿ ನೀಡಲಾಗಿತ್ತು’: ಹರಿಹರ ಮಾಜಿ ಶಾಸಕ ಶಿವಶಂಕರ್ ದೂರು

ಈ ಎಲ್ಲಾ ವಿಚಾರ ಗಮನಿಸಿರುವ ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ಹೆಚ್ಚಿನ ಮಾಹಿತಿ ಕಲೆ ಹಾಕುವ ಸಾಧ್ಯತೆ ಇದೆ. ರವಿ ಪೂಜಾರಿ ಮೇಲೆ ಒಟ್ಟು 90 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಬೆಂಗಳೂರಿನಲ್ಲಿ 39 ಪ್ರಕರಣ, ಮಂಗಳೂರು 36, ಉಡುಪಿ 11 ಸೇರಿ ಬೇರೆ ಬೇರೆ ಜಿಲ್ಲೆ ಗಳ ಕೇಸ್ ಪೆಂಡಿಂಗ್ ಇವೆ‌. ಆದಷ್ಟು ಬೇಗ ತನಿಖೆಗೆ ತಾರ್ಕಿಕ ಅಂತ್ಯ ನೀಡಬೇಕಾದರೆ ರವಿ ಪೂಜಾರಿ ವಿಚಾರಣೆ ಅಗತ್ಯವಿದೆ.

Last Updated : Jun 16, 2020, 1:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.