ETV Bharat / state

ಸಿರಿವಂತರನ್ನು ನಡುಗಿಸಿದ ಡಾನ್​ ರವಿ ಪೂಜಾರಿಗೆ ಕಾಡುತ್ತಿದೆಯಂತೆ ಆ ಘಟನೆ: ಪೊಲೀಸರೆದುರು ಗಳಗಳನೆ ಅತ್ತಿದ್ದೇಕೆ?

ಬಾಂಬೆ ಪೊಲೀಸರ ವಶಕ್ಕೆ ತನ್ನನ್ನು ನೀಡದಂತೆ ಬಂಧನಕ್ಕೊಳಗಾಗಿರುವ ರವಿಪೂಜಾರಿ, ಸಿಸಿಬಿ ಅಧಿಕಾರಿಗಳ ಬಳಿ ಬೇಡಿಕೊಂಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ.

Ravi Pujari appeal to CCB police for Not handover to Mumbai police
ರವಿ ಪೂಜಾರಿ
author img

By

Published : Feb 28, 2020, 12:09 PM IST

ಬೆಂಗಳೂರು: ಬಾಂಬೆ ಪೊಲೀಸರ ವಶಕ್ಕೆ ತನ್ನನ್ನು ನೀಡದಂತೆ ಬಂಧನಕ್ಕೊಳಗಾಗಿರುವ ರವಿಪೂಜಾರಿ, ಸಿಸಿಬಿ ಅಧಿಕಾರಿಗಳ ಬಳಿ ಬೇಡಿಕೊಂಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ.

ನಗರದಲ್ಲಿ ನಡೆದ 47 ಪ್ರಕರಣಗಳ ಮಾಹಿತಿಯನ್ನ ಪೊಲೀಸರು ಕಲೆಹಾಕುತ್ತಿದ್ದಾರೆ. ಇನ್ನು ಪೂಜಾರಿಯನ್ನ ಬಾಂಬೆ ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಸಿಸಿಬಿ ಹಿರಿಯ ಅಧಿಕಾರಿಗಳ ಎದುರು ಕಣ್ಣೀರು ಹಾಕಿ, ನಿಮ್ಮ ಕಾಲಿಗೆ ಬೀಳ್ತೀನಿ ನನ್ನನ್ನು ಬಾಂಬೆ ಪೊಲೀಸರಿಗೆ ಕೊಡಬೇಡಿ. ಬಾಂಬೆಗೆ ಕಳಿಸಿದ್ರೆ ಅಲ್ಲಿಯ ಪೊಲೀಸರು ನನ್ನನ್ನು ಬಿಡುವುದಿಲ್ಲ. ಬಾಂಬೆಯಲ್ಲಿ ಸಿಕ್ಕ ಡಾನ್ ದಾವುದ್ ಹುಡುಗರಿಗೆಲ್ಲಾ ಹೊಡೆದಿದ್ದೆ. ಹೀಗಾಗಿ ಅಲ್ಲಿಗೆ ಕರೆದೊಯ್ದರೆ ಅವರು ನನ್ನನ್ನು ಬಿಡುವುದಿಲ್ಲ. ನನಗೆ ಜೀವ ಭಯವಿದೆ. ಜಾಸ್ತಿ ಸೆಕ್ಯುರಿಟಿ ಕೊಡಿ ಪ್ಲೀಸ್ ಎಂದು ಮನವಿ ಮಾಡಿಕೊಂಡಿರುವ ವಿಚಾರ ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ.

ಈತ ನಿನ್ನೆ ರಾತ್ರಿ ತನ್ನ ಮಕ್ಕಳನ್ನು ನೆನೆದು ಭಾವುಕನಾಗಿದ್ದಾನೆ ಎನ್ನಲಾಗಿದೆ. ಅಲ್ಲದೆ, 2007ರ ಶಬನಮ್ ಜ್ಯುವೆಲ್ಲರ್ಸ್ ಅಟ್ಯಾಕ್ ಬಗ್ಗೆ ಪಶ್ಚಾತಾಪ ಪಡುತ್ತಿರುವ ಪೂಜಾರಿ, ಅಲ್ಲಿ ಓರ್ವ ಹೆಣ್ಣು ಮಗಳ ಮೇಲೆ ನಮ್ಮವರು ಗುಂಡು ಹಾರಿಸಬಾರದಿತ್ತು , ಆ ಘಟನೆ ಆದ ದಿನದಿಂದಲೂ ನನಗೆ ಮಾನಸಿಕವಾಗಿ ಹಿಂಸೆ ಆಗುತ್ತಿದೆ. ಹೆಣ್ಣು ಮಗಳ ಹತ್ಯೆ ನನ್ನ ಮನಸ್ಸಲ್ಲಿ ಆಗಾಗ ನೆನೆಪಿಗೆ ಬಂದು ಪೀಡಿಸುತ್ತಿದೆ ಎಂದು ಮಡಿವಾಳ ಎಫ್​ಎಸ್​ಎಲ್ ಕಚೇರಿಯಲ್ಲಿ ಸಿಸಿಬಿ ಎದುರು ತನ್ನ ನೋವು ತೋಡಿಕೊಂಡಿದ್ದಾನಂತೆ.

ಸಿಸಿಬಿ ವಶದಲ್ಲಿರುವ ಪೂಜಾರಿಯನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.