ETV Bharat / state

ನಾವು ಅಣಬೆ ರೀತಿ ಬೆಳೆದು ಬಂದಿಲ್ಲ: ಹೆಚ್​​ಡಿಕೆಗೆ ಅಶೋಕ್ ಟಾಂಗ್!

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯವರು ಮೋದಿ ಹೇಸರು ಹೇಳಿಕೊಂಡು ಗೆದ್ದಿದ್ದಾರೆ ಎಂಬ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಮೋದಿ ನಮ್ಮ ರಾಷ್ಟ್ರೀಯ ನಾಯಕ. ಅವರ ಹೆಸರು ಹೇಳಿರುವುದು ನಿಜ. ಅವರು ಸಾರ್ವಜನಿಕ ನಾಯಕರು. ಆದರೆ ಜೆಡಿಎಸ್​ನಲ್ಲಿ ಕುಟುಂಬ ರಾಜಕಾರಣ ಮಾತ್ರ ಇದೆ.ನಾವು ಅಣಬೆಗಳ ರೀತಿ ಬೆಳೆದು ಬಂದಿಲ್ಲ. ನಾವು ಹೋರಾಟದ ಮುಖಾಂತರ ಜೈಲು ಶಿಕ್ಷೆ ಅನುಭವಿಸಿ ಪಕ್ಷ ಕಟ್ಟಿ ಬೆಳೆಸಿ ಬಂದಿದ್ದೇವೆ ಎಂದಿದ್ದಾರೆ.

author img

By

Published : Nov 27, 2019, 12:51 PM IST

ಆರ್.ಅಶೋಕ್
R.Ashok

ಬೆಂಗಳೂರು: ನಾವು ಅಣಬೆಗಳ ರೀತಿ ಬೆಳೆದು ಬಂದಿಲ್ಲ, ವಂಶ ರಾಜಕಾರಣದ ಕುಡಿಯಾಗಿಯೂ ಬೆಳೆದು ಬಂದಿಲ್ಲ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಜೈಲು ಸೇರಿ ಪಕ್ಷ ಕಟ್ಟಿ ತಳಮಟ್ಟದಿಂದ ಬೆಳೆದು ಬಂದವರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಕಂದಾಯ ಸಚಿವ ಆರ್.ಅಶೋಕ್

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೋದಿ ನಮ್ಮ ರಾಷ್ಟ್ರೀಯ ನಾಯಕ. ಅವರ ಹೆಸರು ಹೇಳಿರುವುದು ನಿಜ. ಹಿಂದೆ ಅಡ್ವಾಣಿ, ವಾಜಪೇಯಿ, ದೀನದಯಾಳ್ ಹೆಸರೇಳಿದ್ದೇವೆ. ನಮಗೆ ಹಲವಾರು ನಾಯಕರಿದ್ದಾರೆ. ಆದರೆ ಕುಟುಂಬದ ನಾಯಕರಿಲ್ಲ. ನಮಗೆ ಸಾರ್ವಜನಿಕ ನಾಯಕರು, ಪಕ್ಷದ ನಾಯಕರು ಇದ್ದಾರೆ. ಪಕ್ಷದಲ್ಲಿ ಯಾರೇ ನಾಯಕರಾದರೂ ಅವರ ಹೆಸರನ್ನು ಹೇಳುತ್ತೇವೆ. ಆದರೆ, ಜೆಡಿಎಸ್​ನಲ್ಲಿ ಕುಟುಂಬ ರಾಜಕಾರಣ ಮಾತ್ರ ಇದೆ. ಆದರೆ, ನಾವು ಕುಟುಂಬದಿಂದ ಬಂದಿಲ್ಲ. ನಾವು ನೆಲಮಟ್ಟದಿಂದ ಬಂದಿದ್ದೇವೆ. ತುರ್ತುಸ್ಥಿತಿಯಲ್ಲಿ ನಮ್ಮ ಇಡೀ ಕುಟುಂಬ ಜೈಲುಪಾಲಾಗಿತ್ತು. ಅಯೋಧ್ಯ ವಿಚಾರದಲ್ಲೂ ಜೈಲಿಗೆ ಹೋಗಿದ್ದೇವೆ. ನಾವು ಅಣಬೆಗಳ ರೀತಿ ಬೆಳೆದು ಬಂದಿಲ್ಲ. ನಾವು ಹೋರಾಟದ ಮುಖಾಂತರ ಜೈಲು ಶಿಕ್ಷೆ ಅನುಭವಿಸಿ ಪಕ್ಷ ಕಟ್ಟಿ ಬೆಳೆದು ಬಂದಿದ್ದೇವೆ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಹೊಸಕೋಟೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಚುನಾವಣಾ ಕಣದಿಂದ ನಿವೃತ್ತಿಯಾಗಬೇಕು. ಕೇಂದ್ರ,ರಾಜ್ಯದ ನಾಯಕತ್ವಕ್ಕೆ ಬೆಲೆ ಕೊಟ್ಟು ನಿವೃತ್ತಿಯಾಗುವುದು ಒಳ್ಳೆಯದು. ಇನ್ನು ಸಮಯವಿದೆ ಅವರು ಯೋಚಿಸಬೇಕು. ಬಚ್ಚೇಗೌಡರ ಜೊತೆ ಸಿಎಂ ಮಾತನಾಡಿದ್ದಾರೆ. ಪ್ರಚಾರಕ್ಕೆ ಬರುವಂತೆ ಹೇಳಿದ್ದಾರೆ. ಕೇಂದ್ರ, ರಾಜ್ಯದ ನಾಯಕತ್ವಕ್ಕೆ ಗೌರವ ಕೊಟ್ಟು ಪಕ್ಷ ನಿಷ್ಟೆ ಮೆರೆಯಿರಿ ಎಂದು ಮನವಿ ಮಾಡುತ್ತಿದ್ದೇವೆ. ಅವರು ಪಕ್ಷದ ಶಿಸ್ತಿನ ಸಿಪಾಯಿ ಪ್ರಚಾರಕ್ಕೆ ಬರುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್,ಜೆಡಿಎಸ್ ನಾಯಕರು, ಕಾರ್ಯಕರ್ತರು ಭಾಗವಹಿಸುತ್ತಿಲ್ಲ. ಸಾಂಕೇತಿಕವಾಗಿ ಸಿದ್ದರಾಮಯ್ಯ, ಕುಮಾರಸ್ವಾಮಿ ಮಾತ್ರ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್​ನ ಸ್ಟಾರ್ ಪ್ರಚಾರಕರು ವಿದೇಶಕ್ಕೆ ಹೋಗಿ ಕುಳಿತಿದ್ದು, ಕಾರ್ಯಕರ್ತರು ಕಂಗಾಲಾಗಿದ್ದಾರೆ. ಇದು ಕಾಂಗ್ರೆಸ್ ಪರಿಸ್ಥಿತಿ. ಮೈತ್ರಿ ಸರ್ಕಾರ ಇದ್ದಾಗ ಹಾವು ಮುಂಗುಸಿ ರೀತಿ ಕಿತ್ತಾಡುತ್ತಿದ್ದವರು ಈಗ ಏಕಾಏಕಿ ಒಂದೇ ಬುಟ್ಟಿಯಲ್ಲಿ ಹಾವು ಮುಂಗುಸಿ ಪ್ರಯಾಣ ಮಾಡುವಂತೆ ಹೊರಟಿದ್ದಾರೆ. ಈ ಸರ್ಕಾರ ಬೀಳಿಸಲು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ, ಜನ ಬಿಜೆಪಿ ಸರ್ಕಾರ ಇರಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ ಎಲ್ಲಾ ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಎಂದರು.

ಕ್ರಿಕೆಟ್ ಬೆಟ್ಟಿಂಗ್, ಅನೈತಿಕ ದಂಧೆ ಮಾಡುವವರಿಂದ ಹಣ ಪಡೆದು ಆಪರೇಷನ್ ಕಮಲ ಮಾಡಿ ಶಾಸಕರಿಗೆ ಹಣ ಕೊಡಲಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಆದರೆ ಸಮ್ಮನೆ ಆಪಾದನೆ ಸಲ್ಲದು. ಯಾರು ಆ ಶಾಸಕ, ಮಂತ್ರಿ ಎಂದು ಹೇಳಬೇಕು. ಇಲ್ಲದಿದ್ದರೆ ಹಿಟ್ ಅಂಡ್ ರನ್ ಕೇಸ್ ಆಗಲಿದೆ. ಯಾರೂ ಇದರ ಹಿಂದೆ ಇದ್ದಾರೆ ಎಂದು ಹೇಳಲಿ ತನಿಖೆಗೆ ಸರ್ಕಾರ ಸಿದ್ದವಿದೆ. ನಮ್ಮ ಸರ್ಕಾರದಲ್ಲಿ ಇರುವವರು ಯಾರೂ ಕೂಡ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರಿಗೆ ಯಾವ ಕಾರಣಕ್ಕೆ ಬೆಂಗಲ,ಸಹಕಾರ ಕೊಡಲ್ಲ ಎಂದು ಸ್ಪಷ್ಟಪಡಿಸಿದರು.

ಹೊಸಕೋಟೆಯಲ್ಲಿ ಹಿಂದೆ ಕೂಡ ಹೊಡೆದಾಟ ಬಹಳ ನಡೆಯುತ್ತಿದ್ದವು. ಆದರೆ, ಎಂಟಿಬಿ ಬಂದ ನಂತರ ಅದೆಲ್ಲಾ ನಿಂತಿತ್ತು. ಈಗ ಮತ್ತೆ ರೌಡಿಸಂ ಪರಂಪರೆ ಶುರುವಾಗಿದೆ. ಈಗಲಾದರೂ ಹೊಸಕೋಟೆ ಜನ ಅರ್ಥಮಾಡಿಕೊಳ್ಳಬೇಕು. ಇನ್ನೂ ಮತದಾನವೇ ಆಗಿಲ್ಲ. ಫಲಿತಾಂಶ ಬಂದಿಲ್ಲ, ಈಗಲೇ ಹೊಡೆದಾಟ ಶುರವಾಗಿದೆ. ಮುಂದೆ ಹೊಸಕೋಟೆ ಯಾವ ರೀತಿ ಆಗಲಿದೆ ಎನ್ನುವುದನ್ನು ಯೋಚಿಸಿ ಮತದಾನ ಮಾಡಿ ಎಂದು ಮನವಿ ಮಾಡಿದರು.

Intro:

ಬೆಂಗಳೂರು:ನಾವು ಅಣಬೆಗಳ ರೀತಿ ಬೆಳೆದು ಬಂದಿಲ್ಲ, ವಂಶ ರಾಜಕಾರಣದ ಕುಡಿಯಾಗಿಯೂ ಬೆಳೆದು ಬಂದಿಲ್ಲ, ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಜೈಲು ಸೇರಿ ಪಕ್ಷ ಕಟ್ಟಿ ತಳಮಟ್ಟದಿಂದ ಬೆಳೆದು ಬಂದವರು ಎಂದು ಮೋದಿ ಹೆಸರೇಳಿ ಗೆದ್ದು ಬಂದಿದ್ದಾರೆ ಎನ್ನುವ ಟೀಕೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೋದಿ ನಮ್ಮ ರಾಷ್ಟ್ರೀಯ ನಾಯಕ, ಅವರ ಹೆಸರು ಹೇಳಿರುವುದು ನಿಜ, ಹಿಂದೆ ಅಡ್ವಾನಿ,ವಾಜಪೇಯಿ,ದೀನದಯಾಳ್ ಹೆಸರೇಳಿದ್ದೇವೆ,ನಮಗೆ ಹಲವಾರು ನಾಯಕರಿದ್ದಾರೆ ಆದರೆ ಕುಟುಂಬದ ನಾಯಕರಿಲ್ಲ, ನಮಗೆ ಸಾರ್ವಜನಿಕ ನಾಯಕರು, ಪಕ್ಷದ ನಾಯಕರು ಇದ್ದಾರೆ, ಪಕ್ಷದಲ್ಲಿ ಯಾರೇ ನಾಯಕರಾದರೂ ಅವರ ಹೆಸರನ್ನು ಹೇಳುತ್ತೇವೆ ಆದರೆ ಜೆಡಿಎಸ್ ನಲ್ಲಿ ಕುಟುಂಬ ರಾಜಕಾರಣ ಮಾತ್ರ ಇದೆ ಆದರೆ ನಾವು ಕುಟುಂಬದಿಂದ ಬಂದಿಲ್ಲ, ನಾವು ನೆಲಮಟ್ಟದಿಂದ ಬಂದಿದ್ದೇವೆ, ತುರ್ತುಸ್ಥಿತಿಯಲ್ಲಿ ನಮ್ಮ ಇಡೀ ಕುಟುಂಬ ಜೈಲುಪಾಲಾಗಿತ್ತು, ಅಯೋಧ್ಯ ವಿಚಾರದಲ್ಲೂ ಜೈಲಿಗೆ ಹೋಗಿದ್ದೇವೆ.ನಾವು ಅಣಬೆಗಳ ರೀತಿ ಬೆಳೆದು ಬಂದಿಲ್ಲ, ನಾವು ಹೋರಾಟದ ಮುಖಾಂತರ, ಜೈಲು ಶಿಕ್ಷೆ ಅನುಭವಿಸಿ ಪಕ್ಷ ಕಟ್ಟಿ ಬೆಳೆದು ಬಂದಿದ್ದೇವೆ ಕುಮಾರಸ್ವಾಮಿ ಅವರ ರೀತಿ ನಾವು ವಂಶದ ಕುಡಿಯಾಗಿ ಬೆಳೆದು ಬಂದಿಲ್ಲ ಎಂದು ಟಾಂಗ್ ನೀಡಿದರು.

ಹೊಸಕೋಟೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಚುನಾವಣಾ ಕಣದಿಂದ ನಿವೃತ್ತಿಯಾಗಬೇಕು, ಕೇಂದ್ರ,ರಾಜ್ಯದ ನಾಯಕತ್ವಕ್ಕೆ ಬೆಲೆ ಕೊಟ್ಟು ನಿವೃತ್ತಿಯಾಗುವುದು ಒಳ್ಳೆಯದು,ಇನ್ನು ಸಮಯವಿದೆ ಅವರು ಯೋಚಿಸಬೇಕು ಎಂದು ಸಲಹೆ ನೀಡಿದ ಅಶೋಕ್,ಬಚ್ಚೇಗೌಡರ ಜೊತೆ ಸಿಎಂ ಮಾತನಾಡಿದ್ದಾರೆ ಪ್ರಚಾರಕ್ಕೆ ಬರುವಂತೆ ಹೇಳಿದ್ದಾರೆ, ಕೇಂದ್ರ, ರಾಜ್ಯದ ನಾಯಕತ್ವಕ್ಕೆ ಗೌರವ ಕೊಟ್ಟು ಪಕ್ಷ ನಿಷ್ಟೆ ಮೆರೆಯಿರಿ ಎಂದು ಮನವಿ ಮಾಡುತ್ತಿದ್ದೇವೆ, ಅವರು ಪಕ್ಷದ ಶಿಸ್ತಿನ ಸಿಪಾಯಿ ಪ್ರಚಾರಕ್ಕೆ ಬರುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್,ಜೆಡಿಎಸ್ ನಾಯಕರು,ಕಾರ್ಯಕರ್ತರು ಭಾಗವಹಿಸುತ್ತಿಲ್ಲ, ಸಾಂಕೇತಿಕವಾಗಿ ಸಿದ್ದರಾಮಯ್ಯ, ಕುಮಾರಸ್ವಾಮಿ ಮಾತ್ರ ಪ್ರಚಾರ ಮಾಡುತ್ತಿದ್ದಾರೆ,ಕಾಂಗ್ರೆಸ್ ನ
ಸ್ಟಾರ್ ಪ್ರಚಾರಕರು ವಿದೇಶಕ್ಕೆ ಹೋಗಿ ಕುಳಿತಿದ್ದಾರೆ, ಕಾರ್ಯಕರ್ತರು ಕಂಗಾಲಾಗಿದ್ದಾರೆ,ಇದು ಕಾಂಗ್ರೆಸ್ ಪರಿಸ್ಥಿತಿ.ಮೈತ್ರಿ ಸರ್ಕಾರ ಇದ್ದಾಗ ಹಾವು ಮುಂಗುಸಿ ರೀತಿ ಕಿತ್ತಾಡುತ್ತಿದ್ದವರು ಈಗ ಏಕಾಏಕಿ ಒಂದೇ ಬುಟ್ಟಿಯಲ್ಲಿ ಹಾವು ಮುಂಗುಸಿ ಪ್ರಯಾಣ ಮಾಡುವಂತೆ ಹೊರಟಿದ್ದಾರೆ.ಈ ಸರ್ಕಾರ ಬೀಳಿಸಲು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಆದರೆ ಜನ ಬಿಜೆಪಿ ಸರ್ಕಾರ ಇರಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಹಾಗಾಗಿ ಎಲ್ಲಾ ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಎಂದರು.

ಕ್ರಿಕೆಟ್ ಬೆಟ್ಟಿಂಗ್, ಅನೈತಿಕ ದಂಧೆ ಮಾಡುವವರಿಂದ ಹಣ ಪಡೆದು ಆಪರೇಷನ್ ಕಮಲ ಮಾಡಿ ಶಾಸಕರಿಗೆ ಹಣ ಕೊಡಲಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ ಆದರೆ ಸಮ್ಮನೆ ಆಪಾದನೆ ಸಲ್ಲದು, ಯಾರು ಆ ಶಾಸಕ,ಮಂತ್ರಿ ಎಂದು ಹೇಳಬೇಕು, ಇಲ್ಲದಿದ್ದರೆ ಹಿಟ್ ಅಂಡ್ ರನ್ ಕೇಸ್ ಆಗಲಿದೆ, ಯಾರು ಇದರ ಹಿಂದೆ ಇದ್ದಾರೆ ಎಂದು ಹೇಳಲಿ ತನಿಖೆಗೆ ಸರ್ಕಾರ ಸಿದ್ದವಿದೆ, ನಮ್ಮ ಸರ್ಕಾರದಲ್ಲಿ ಇರುವವರು ಯಾರೂ ಕೂಡ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರಿಗೆ ಯಾವ ಕಾರಣಕ್ಕೆ ಬೆಂಗಲ,ಸಹಕಾರ ಕೊಡಲ್ಲ ಎಂದು ಸ್ಪಷ್ಟಪಡಿಸಿದರು.

ಹೊಸಕೋಟೆಯಲ್ಲಿ ಹಿಂದೆ ಕೂಡ ಹೊಡೆದಾಟ ಬಹಳ ನಡೆಯುತ್ತಿದ್ದವು, ಆದರೆ ಎಂಟಿಬಿ ಬಂದ ನಂತರ ಅದೆಲ್ಲಾ ನಿಂತಿತ್ತು, ಈಗ ಮತ್ತೆ ರೌಡಿಸಂ ಪರಂಪರೆ ಶುರರವಾಗಿದೆ ಈಗಲಾದರೂ ಹೊಸಕೋಟೆ ಜನ ಅರ್ಥಮಾಡಿಕೊಳ್ಳಬೇಕು, ಇನ್ನೂ ಮತದಾನವೇ ಆಗಿಲ್ಲ, ಫಲಿತಾಂಶ ಬಂದಿಲ್ಲ ಈಗಲೇ ಹೊಡೆದಾಟ ಶುರವಾಗಿದೆ, ಮುಂದೆ ಹೊಸಕೋಟೆ ಯಾವ ರೀತಿ ಆಗಲಿದೆ ಎನ್ನುವುದನ್ನು ಯೋಚಿಸಿ ಮತದಾನ ಮಾಡಿ ಎಂದು ಮನವಿ ಮಾಡಿದರು.

Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.