ಬೆಂಗಳೂರು: ಮಗಳ ಮೇಲೆಯೇ ನಿರಂತರ ಅತ್ಯಾಚಾರ ಎಸಗಿದ ಪಾಪಿ ಮಲತಂದೆಯೋರ್ವನನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಶಬ್ಬೀರ್ ಬಂಧಿತ ಆರೋಪಿ. ಈತ ತನ್ನ 15 ವರ್ಷದ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿದ್ದು, ಪಾಪಿಯ ಕೃತ್ಯಕ್ಕೆ ಬಾಲಕಿ ಈಗ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ.
ಬಾಲಕಿಯ ತಾಯಿ ತನ್ನ ಮೊದಲ ಗಂಡನಿಗೆ ವಿಚ್ಛೇದನ ಕೊಟ್ಟು ಆರೋಪಿ ಶಬ್ಬೀರ್ನನ್ನು ವರಿಸಿದ್ದಳು. ಶಬ್ಬೀರ್ಗೂ ಇದು ಎರಡನೇ ಮದುವೆಯಾಗಿದೆ. ಈಕೆಗೆ ಮೂರು ಮಕ್ಕಳನ್ನು ಕರುಣಿಸಿರೋ ಶಬ್ಬೀರ್, ಸಂಪಿಗೆಹಳ್ಳಿ ಬಳಿ ಕೋಳಿ ವ್ಯಾಪಾರ ಮಾಡಿಕೊಂಡಿದ್ದ.
ಪತ್ನಿ ಮೂರನೇ ಮಗುವಿನ ಹೆರಿಗೆಗೆ ತವರಿಗೆ ಹೋದಾಗ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಮಲತಂದೆಯ ಈ ದೌರ್ಜನ್ಯದ ಬಗ್ಗೆ ತನ್ನ ಮೊದಲ ತಂದೆಗೆ ಬಾಲಕಿ ಫೋನ್ ಮಾಡಿ ತಿಳಿಸಿದ್ದಾಳೆ. ಬಳಿಕ ಆತ ಸ್ಥಳಕ್ಕೆ ತೆರಳಿ ಸ್ಥಳೀಯರೊಂದಿಗೆ ಸೇರಿ ಆರೋಪಿ ಶಬ್ಬೀರ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರಂತೆ.
ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಫೋಕ್ಸೊ ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.
ಇದನ್ನು ಓದಿ.. ಗುರುನಾನಕ್ ಭವನದ ವಿಶೇಷ ಕೋರ್ಟ್ ಹಾಲ್ನಲ್ಲಿ 'ಸಿಡಿ'ದ ಯುವತಿ ಹಾಜರು