ETV Bharat / state

Covid ಜಾಗೃತಿ ಮೂಡಿಸುವ "ಮುಖ ಮುಚ್ಕೊಳಿ..ಲಸಿಕೆ ಚುಚ್ಕೊಳಿ" ರ‍್ಯಾಪ್ ಸಾಂಗ್​ - ಪಲ್ಮೋನೋಲಜಿಸ್ಟ್ ಅಸೋಸಿಯೇಷನ್​

ಕೋವಿಡ್ ಜಾಗೃತಿ ಬಗ್ಗೆ ಸಂದೇಶ ಸಾರಲು "ಮುಖ ಮುಚ್ಕೊಳಿ, ಲಸಿಕೆ ಚುಚ್ಕೊಳಿ" ಎಂಬ ಹಾಡನ್ನು ರಚಿಸಲಾಗಿದೆ. ಪಲ್ಮೋನೋಲಜಿಸ್ಟ್ ಅಸೋಸಿಯೇಷನಲ್ಲಿ ಮೂಡಿ ಬಂದಿರುವ ಈ ಹಾಡು ಎಲ್ಲೆಡೆ ಸದ್ದು ಮಾಡುತ್ತಿದೆ.

rap-song
ಕೋವಿಡ್​ ಜಾಗೃತಿಗೆ ರ‍್ಯಾಪ್ ಸಾಂಗ್​
author img

By

Published : Jun 23, 2021, 7:09 PM IST

ಬೆಂಗಳೂರು: ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ 'ಮುಖ ಮುಚ್ಕೊಳಿ ಲಸಿಕೆ ಚುಚ್ಕೊಳಿ' ಎಂಬ ರ‍್ಯಾಪ್ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ಪಲ್ಮೋನೋಲಜಿಸ್ಟ್ ಅಸೋಸಿಯೇಷನಲ್ಲಿ ಮೂಡಿ ಬಂದಿರುವ ಈ ಹಾಡು, 'ಮುಖ ಮುಚ್ಕೊಂಡು ಬಾ, ಮುಖ ಮುಚ್ಕೊಂಡ್ ಹೋಗಲೇ ಅವನಜ್ಜಿ ಆ ಕೊರೊನಾ ಹೋಗಿಲ್ಲ, ನಮಗೆ ಬುದ್ದಿನೂ ಬಂದಿಲ್ಲ' ಎಂಬ ಸಾಲಿನಿಂದ ಪ್ರಾರಂಭವಾಗುತ್ತದೆ.

ಈ ರ‍್ಯಾಪ್ ಸಾಂಗ್ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಸಾಲುಗಳನ್ನು ಹೊಂದಿದೆ. ಒಟ್ಟು 1.40 ನಿಮಿಷ ಇರುವ ಈ ಹಾಡಿನಲ್ಲಿ ನಟ ಸಾಯಿಕುಮಾರ್, ರ‍್ಯಾಪರ್ ಅಲೋಕ್, ಅಶ್ವಿಥಿ ಶೆಟ್ಟಿ, ಅದ್ವಿತಿ ಶೆಟ್ಟಿ, ಡಾ. ವಿವೇಕ್ ಆನಂದ್ ಪಡೇಗಲ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

ಕೋವಿಡ್​ ಜಾಗೃತಿಗೆ ರ‍್ಯಾಪ್ ಸಾಂಗ್​

ರಾಜೇಶ್ ರಾಮಸ್ವಾಮಿಯವರ ಸಾಹಿತ್ಯ ಹಾಗೂ ದೀಪಕ್ ಅಲೆಕ್ಸಾಂಡರ್ ಅವರ ಸಂಗೀತ ಈ ಹಾಡಿಗಿದೆ. ಫೋರ್ಟಿಸ್ ಆಸ್ಪತ್ರೆಯ ಪಲ್ಮನರಿ ಮೆಡಿಸಿನ್ ವಿಭಾಗದ ಡಾ. ವಿವೇಶ್ ಆನಂದ್ ಮಾತನಾಡಿ, ಈ ಹಾಡಿನ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಅನ್‌ಲಾಕ್ ಮಾಡಿದ ಕೂಡಲೇ ಜನ ಗುಂಪುಗಟ್ಟಿ ಓಡಾಡುವ ಪ್ರವೃತ್ತಿ ತಪ್ಪಿಸಬೇಕು ಎಂದು ಈ ರೀತಿಯ ಸಂದೇಶವನ್ನು ಹಾಡಿನ ಮೂಲಕ ನಗರದ ಜನರಿಗೆ ಮುಟ್ಟಿಸುವ ಪ್ರಯತ್ನ ಶ್ಲಾಘನೀಯ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.