ETV Bharat / state

ದಲಿತ ನಾಯಕ ಖರ್ಗೆ ಸಾವು ಬಯಸಿದ ನಿಮ್ಮ ಶಾಸಕನ ವಿರುದ್ಧ ಕ್ರಮವಿಲ್ಲವೇ?: ಮೋದಿಗೆ ಸುರ್ಜೇವಾಲಾ ಪ್ರಶ್ನೆ - election news

ಬಿಜೆಪಿಯ ಸ್ನೇಹಿತರಿಗೆ ಹನುಮಾನ್ ಚಾಲೀಸಾ ಓದಲು ಬರುವುದಿಲ್ಲ. ಅವರಿಗೆ 'ಚಾಲೀಸ್ ಪರ್ಸೆಂಟ್' ಕಮಿಷನ್ ಮಾತ್ರ ಬರುತ್ತದೆ. ಸಾಕಷ್ಟು ಮಂದಿ ಬಜರಂಗದಳದ ಸದಸ್ಯರ ಸಾವು - ನೋವುಗಳು ಸಂಭವಿಸಿವೆ. ಆಗ ಬಾರದ ಕಾಳಜಿ ಚುನಾವಣಾ ಸಂದರ್ಭದಲ್ಲೇ ಯಾಕೆ ಬಂದಿದೆ ಎಂದು ರಣದೀಪ್​​ ಸಿಂಗ್​ ಸುರ್ಜೇವಾಲಾ ಪ್ರಶ್ನಿಸಿದರು.

randeep-singh-surjewala-question-to-prime-minister-modi
ದಲಿತ ನಾಯಕ ಖರ್ಗೆ ಸಾವು ಬಯಸಿದ ನಿಮ್ಮ ಶಾಸಕನ ವಿರುದ್ಧ ಕ್ರಮವಿಲ್ಲವೇ?: ಮೋದಿಗೆ ಸುರ್ಜೇವಾಲಾ ಪ್ರಶ್ನೆ
author img

By

Published : May 3, 2023, 7:45 PM IST

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸುದ್ದಿಗೋಷ್ಟಿ

ಬೆಂಗಳೂರು: ಕಾಂಗ್ರೆಸ್ ನಾಯಕರನ್ನು ತೆಗಳುವುದೇ ಬಿಜೆಪಿ ನಾಯಕರ ಕೆಲಸವಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಚಾರವಾಗಿ ರಾಜಸ್ಥಾನ ಬಿಜೆಪಿ ಶಾಸಕ ನೀಡಿರುವ ಅವಹೇಳನಕಾರಿ ಹೇಳಿಕೆ ಇದಕ್ಕೆ ತಾಜಾ ಉದಾಹರಣೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪವನ್ ಖೇರಾ ಜತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂದರ್ಭ ರಾಜಸ್ಥಾನ ಬಿಜೆಪಿ ಎಂಎಲ್ಎ ಹೇಳಿಕೆ ವೀಡಿಯೋ ಪ್ರದರ್ಶನ ಮಾಡಿದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಿಗೆ 80ವರ್ಷ ಆಗಿದೆ ಭಗವಂತ ಅವರನ್ನ ಬೇಗ ಕರೆದುಕೊಳ್ಳಲಿ. ಮಲ್ಲಿಕಾರ್ಜುನ ಖರ್ಗೆಯವರನ್ನು ದೇವರು ಯಾವಾಗ ಬೇಕಾದರೂ ಮೇಲಕ್ಕೆ ಕರೆದುಕೊಳ್ಳಬಹುದು ಎಂಬ ಮಾತನ್ನು ಬಿಜೆಪಿ ಶಾಸಕ ಆಡಿದ್ದು ಆ ವಿಡಿಯೋ ಪ್ರದರ್ಶನ ಮಾಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ ರಾಜಸ್ಥಾನ ಬಿಜೆಪಿ ಶಾಸಕನ ನಿಲುವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದು ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಉದಾಹರಣೆ. ಖರ್ಗೆ ದೇಶದ ಅತ್ಯುನ್ನತ ದಲಿತ ನಾಯಕ. ಖರ್ಗೆ ಸೋಲಿಲ್ಲದ ಸರದಾರ. ಬಿಜೆಪಿ 40 ಸೀಟಿಗೆ ಸೀಮಿತವಾಗುತ್ತದೆ ಎಂಬ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆಯವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿದರು. ನಿಮ್ಮ ಶಾಸಕರು ಖರ್ಗೆಯವರ ಸಾವು ಬಯಸುತ್ತಿದ್ದಾರೆ. ಮೋದಿಯವರೇ ಯಾಕೆ ಬಿಜೆಪಿಯ ಜನರಲ್ ಸೆಕ್ರೆಟರಿ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಅವರು ಖರ್ಗೆಯ ಸಾವು ಬಯಸಿದ್ದರೂ ಏಕೆ ಮೌನವಾಗಿದ್ದಾರೆ?. ಕಾಂಗ್ರೆಸ್ ನಾಯಕರನ್ನು ತೆಗಳುವುದೇ ಬಿಜೆಪಿ ನಾಯಕರಿಗೆ ಹವ್ಯಾಸ ಆಗಿದೆ. ಅಶ್ವತ್ಥ ನಾರಾಯಣ ಸಚಿವರು ಮಂಡ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಕೊಲೆ ಮಾಡಲು ಕರೆ ನೀಡಿದ್ದರು. ಇದೀಗ ಅತ್ಯುನ್ನತ ದಲಿತ ನಾಯಕನ ಸಾವು ಬಯಸುತ್ತಿದ್ದೀರಿ. ಪ್ರಧಾನಿಯವರೇ ನೀವು ಕೇವಲ ಅಳುಮುಂಜಿ ಮಗು 'ಕ್ರೈ ಬೇಬಿ' ಆಗುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.

ಬಜರಂಗದಳ ಹಾಗೂ ಹನುಮಂತನನ್ನು ಹೋಲಿಕೆ ಮಾಡುವುದು ಹನುಮನ ಭಕ್ತರಿಗೆ ಮಾಡುವ ಅವಮಾನ. ಹನುಮನ ಹೆಸರಲ್ಲಿ ಸಂಘಟನೆಯವರು ಮಾಡುವ ಕ್ರೌರ್ಯ ದೇವರಿಗೆ ಮಾಡುವ ಅವಮಾನವಾಗುತ್ತದೆ. 200 ವರ್ಷಗಳ ಹಳೆಯ ನಂಜನಗೂಡು ಹನುಮಾನ್ ದೇವಸ್ಥಾನವನ್ನು ಒಡೆದು ಹಾಕಿದ್ದು ಯಾರು? ಇದೇ ಬಿಜೆಪಿ ಸರ್ಕಾರವೇ ಅಲ್ಲವೇ? ಇದಕ್ಕೆ ಪ್ರಧಾನಿ ಮೋದಿ ಉತ್ತರ ನೀಡಲಿ ಎಂದರು.

ಮೆಟ್ರೋ ನಿರ್ಮಾಣಕ್ಕಾಗಿ ಬೆಂಗಳೂರಿನ ಹನುಮಂತನ ದೇವಸ್ಥಾನ ಒಡೆದು ಹಾಕಿಲ್ವಾ? ಇದಕ್ಕೆ ಸಿಎಂ ಬೊಮ್ಮಾಯಿ ಕ್ಷಮೆ ಕೇಳಿದ್ರಾ?. ಶಿವಮೊಗ್ಗದ ಹಳೆಯ ಆಂಜನೇಯನ ದೇವಸ್ಥಾನವನ್ನು ಒಡೆದು ಹಾಕಿದ್ದಕ್ಕೆ ಯಾರಾದರೂ ಹೋರಾಟ ಮಾಡಿದ್ರಾ?. ಚಿತ್ರದುರ್ಗ ಹೊಳಲ್ಕೆರೆಯ ಹನುಮಂತನ ದೇವಸ್ಥಾನ ಒಡದು ಹಾಕಿದರು. ಬಜರಂಗದಳ ವಿಶ್ವ ಹಿಂದೂ ಪರಿಷತ್​​ ಹೋರಾಟ ನಡೆಸಿದ್ರಾ?. ನಂಜನಗೂಡಿನಲ್ಲಿ ಹನುಮಂತನ ದೇಗುಲ ಒಡೆದಿದ್ದೇಕೆ?. 350 ವರ್ಷ ಇತಿಹಾಸವಿರುವ ದೇಗುಲ ಒಡೆದಿದ್ದೇಕೆ? ಇದರ ಬಗ್ಗೆ ಮೊದಲು ಬಿಜೆಪಿ ಉತ್ತರಿಸಲಿ ಎಂದು ಹೇಳಿದರು.

ಸುಮಾರು 1500 ದೇಗುಲಗಳನ್ನ ಒಡೆದು ಹಾಕಲಾಗಿದೆ. ಯಾಕೆ ಇದರ ಬಗ್ಗೆ ಬಿಜೆಪಿ ಮಾತನಾಡ್ತಿಲ್ಲ. ಹಿಂದುತ್ವದ ಬಗ್ಗೆ ಮಾತನಾಡುವವರು ಯಾಕೆ ಧ್ವನಿ ಎತ್ತಲಿಲ್ಲ. ಒಡೆದ ದೇಗುಲ ಯಾಕೆ ಮರು ನಿರ್ಮಾಣ ಮಾಡಲಿಲ್ಲ. ಬನ್ನಿ ನನ್ನ ಕ್ಷೇತ್ರದಲ್ಲಿ ದೇಗುಲ ಜೀರ್ಣೋದ್ಧಾರ ಮಾಡಿದ್ದೇವೆ. ಹನುಮಂತನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದೇವೆ ಎಂದು ಗುಡುಗಿದರು. ಬಿಜೆಪಿಯ ಸ್ನೇಹಿತರಿಗೆ ಹನುಮಾನ್ ಚಾಲೀಸಾ ಓದಲು ಬರುವುದಿಲ್ಲ. ಅವರಿಗೆ ಬರೀ 'ಚಾಲೀಸ್ ಪರ್ಸೆಂಟ್' ಕಮಿಷನ್ ಮಾತ್ರ ಬರುತ್ತದೆ. ಸಾಕಷ್ಟು ಮಂದಿ ಬಜರಂಗದಳದ ಸದಸ್ಯರ ಸಾವುನೋವುಗಳು ಸಂಭವಿಸಿವೆ. ಆಗ ಬಾರದ ಕಾಳಜಿ ಚುನಾವಣಾ ಸಂದರ್ಭದಲ್ಲೇ ಯಾಕೆ ಬಂದಿದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಕಾಂಗ್ರೆಸ್-ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು : ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.