ETV Bharat / state

ಗೋಹತ್ಯೆ ನಿಷೇಧದ ಬಳಿಕ ಹಳ್ಳಿ ರೈತರ ಪಾಡೇನು? ರಮೇಶ್ ಕುಮಾರ್ ಭಾವುಕ ಪ್ರಶ್ನೆ - winter assembly 2020

ಕ್ರಾಸ್ ಬೀಡ್ ಹಸುಗಳಿಗೆ ಗಂಡು ಕರು ಹುಟ್ಟಿದರೆ ಅದನ್ನು ಸಾಕುವುದು ಯಾರು? ಹಾಗೆ ಸಾಕುವುದಕ್ಕೆ ಅವು ಜಿಂಕೆ ಮರಿಯಲ್ಲ. ಇದೆಲ್ಲಾ ಇವರು ಹೇಳುತ್ತಿರುವಷ್ಟು ಸರಳವಿಲ್ಲ. ಇದರಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ, ಇವರಿಗೆ ಇದು ಕೇವಲ ಕಾಯ್ದೆ ಕಾನೂನು ಅಷ್ಟೇ. ಹಸು ಎಮ್ಮೆ ದನ ಸಾಕುವ ಕಷ್ಟ ಗೊತ್ತಿಲ್ಲ ಎಂದು ರಮೇಶ್​ ಕುಮಾರ್ ಗದ್ಗದಿತರಾದರು.

ramesh kumar
ರಮೇಶ್ ಕುಮಾರ್
author img

By

Published : Dec 10, 2020, 4:40 AM IST

Updated : Dec 10, 2020, 6:12 AM IST

ಬೆಂಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಜಾರಿ ಮಾಡುವ ಮೂಲಕ ಬಿಜೆಪಿ ಸರ್ಕಾರ ಬಡ ರೈತರು, ಹಳ್ಳಿಗಾಡು ಜನರ ಆರ್ಥಿಕತೆಯನ್ನೇ ಬುಡಮೇಲು ಮಾಡಲು ಮುಂದಾಗಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗದ್ಗದಿತರಾದ ಘಟನೆ ನಡೆಯಿತು.

ವಿಧಾನಸೌಧದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧದ ನಡುವೆ ಗೋಹತ್ಯೆ ನಿಷೇಧ ವಿಧೇಯಕ ತಂದಿದ್ದಾರೆ. ಹೀಗೆ ಮಾಡುತ್ತಾ ಹೋದರೆ ನಾಳೆಯಿಂದ ಕೆಎಂಎಫ್ ಬೇಡ, ಮಿಲ್ಕ್ ಫೆಡರೇಷನ್ ಬೇಡ, ಏನೂ ಬೇಡ ಎನ್ನುತ್ತಾರೆ ಎಂದು ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರ: ಬಿಜೆಪಿಗೆ ಮಾನ ಮರ್ಯಾದೆ ಇದೆಯಾ? ಮಹದೇವಪ್ಪ ಕಿಡಿ

ಮನುಷ್ಯನಿಗೆ ಹೃದಯ ಇರಬೇಕು, ಜಾನುವಾರುಗಳ ಆಧಾರದ ಮೇಲೆ ಬದುಕುತ್ತಾ ಇರುವ ಜನರ ಆರ್ಥಿಕ ಪರಿಸ್ಥಿತಿ ಏನು ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಕ್ರಾಸ್ ಬೀಡ್ ಹಸುಗಳಿಗೆ ಗಂಡು ಕರು ಹುಟ್ಟಿದರೆ ಅದನ್ನು ಸಾಕುವುದು ಯಾರು? ಹಾಗೆ ಸಾಕುವುದಕ್ಕೆ ಅವು ಜಿಂಕೆ ಮರಿಯಲ್ಲ. ಇದೆಲ್ಲಾ ಇವರು ಹೇಳುತ್ತಿರುವಷ್ಟು ಸರಳವಿಲ್ಲ. ಇದರಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ, ಇವರಿಗೆ ಇದು ಕೇವಲ ಕಾಯ್ದೆ ಕಾನೂನು ಅಷ್ಟೇ. ಹಸು ಎಮ್ಮೆ ದನ ಸಾಕುವ ಕಷ್ಟ ಗೊತ್ತಿಲ್ಲ ಎಂದು ಭಾವುಕರಾದರು.

Last Updated : Dec 10, 2020, 6:12 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.