ಬೆಂಗಳೂರು: ಕಳೆದ ಒಂದು ತಿಂಗಳಿಂದ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎಂದು ಗೊತ್ತಿಲ್ಲ, ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನನ್ನ ಸಹೋದರ ಬರಲಿ ಎಂಬುದೇ ನಮ್ಮ ಆಸೆ. ಆದರೆ ಅವರು ಇಂದು ಅಧಿವೇಶನಕ್ಕೆ ಬರುತ್ತಿಲ್ಲ. ಅವರು ಇಂದಿನ ಅಧಿವೇಶನಕ್ಕೆ ಗೈರಾಗಲಿದ್ದಾರೆ. ಈ ಕುರಿತಂತೆ ಸ್ಪೀಕರ್ಗೆ ಪತ್ರ ಬರೆದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ರಮೇಶ್ ಕುಟುಂಬದ ಸದಸ್ಯರ ಸಂಪರ್ಕಕ್ಕೂ ಅವರು ಸಿಕ್ಕಿಲ್ಲ. ಅವರು ನಮ್ಮೊಂದಿಗಿರಲಿ ಎಂಬುದು ನಮ್ಮ ಆಸೆ. ಅವರು ಬರುವ ವಿಶ್ವಾಸವಿದೆ, ಕಾದು ನೋಡೋಣ. ಇನ್ನೂ ಹತ್ತು ದಿನ ಅಧಿವೇಶನ ಇದೆ. ಅಷ್ಟರಲ್ಲಿ ಬರಬಹುದು ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.