ETV Bharat / state

ರಾಗಿಣಿ ನಟಿ ಅಂತಾ ಪ್ರಚಾರಕ್ಕೆ ಕರೆದಿದ್ವಿ, ಡ್ರಗ್ಸ್ ಹುಡುಗಿ ಎಂದಲ್ಲ: ಸಚಿವ ರಮೇಶ್ ಜಾರಕಿಹೊಳಿ - ಸಚಿವ ರಮೇಶ್ ಜಾರಕಿಹೊಳಿ

ಈ ಹಿಂದೆ ಬಿಜೆಪಿ ಪರ ನಟಿ ರಾಗಿಣಿ ಪ್ರಚಾರ ಮಾಡಿದ ಬಗ್ಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ, ರಾಗಿಣಿ ಅಂತ ಪ್ರಚಾರಕ್ಕೆ ಕರೆದಿದ್ವಿ, ಡ್ರಗ್ಸ್ ಹುಡುಗಿ ಅಂತಾ ಅಲ್ಲವೆಂದು ಸ್ಪಷ್ಟನೆ ನೀಡಿದರು.

Ramesh jarakiholi reaction on drug case
ರಾಗಿಣಿ ಅಂತಾ ಪ್ರಚಾರಕ್ಕೆ ತಗೊಂಡಿದ್ವಿ, ಡ್ರಗ್ಸ್ ಹುಡುಗಿ ಎಂದಲ್ಲ: ಸಚಿವ ರಮೇಶ್ ಜಾರಕಿಹೊಳಿ
author img

By

Published : Sep 10, 2020, 2:07 PM IST

ಬೆಂಗಳೂರು: ರಾಗಿಣಿ ನಟಿ ಅಂತ ಪ್ರಚಾರಕ್ಕೆ ಕರೆದಿದ್ವಿ, ಅವರೊಬ್ಬ ಡ್ರಗ್ಸ್ ಹುಡುಗಿ ಅಂತ ಅಲ್ಲವೆಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ಈ ಹಿಂದೆ ಬಿಜೆಪಿ ಪರ ರಾಗಿಣಿ ಪ್ರಚಾರ ಮಾಡಿದ ಬಗ್ಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಆಕೆಯ ಫೋಟೋ ಎಲ್ಲರ ಜೊತೆ ಇರಬಹುದು. ಡಿ.ಕೆ. ಶಿವಕುಮಾರ್ ಜೊತೆಯೂ ಫೋಟೋ ಇದೆ. ನನ್ನ ಜೊತೆಯೂ ಇರಬಹುದು. ಕುಮಾರಸ್ವಾಮಿ ಜೊತೆಯೂ ಇರಬಹುದು. ಈಗ ಅದರ ಬಗ್ಗೆ ಮಾತನಾಡಲ್ಲ. ತನಿಖೆ ನಡೆಯುತ್ತಿದ್ದು, ಎಷ್ಟೇ ಪ್ರಭಾವಿಗಳಿದ್ರೂ ಸಹ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಆಗಲಿದೆ ಎಂದರು.

ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ

ವಲಸಿಗರ ಸಂಪುಟ ಸೇರ್ಪಡೆ ವಿಚಾರವಾಗಿ ಮಾತನಾಡಿದ ಸಚಿವ ಜಾರಕಿಹೊಳಿ, ಕಾಯಬೇಕು, ನಾವು 14 ತಿಂಗಳು ಕಾಯಲಿಲ್ವಾ? ಕೋರ್ಟ್ ಕಚೇರಿಗೆಲ್ಲಾ ಅಲೆಯಲಿಲ್ವಾ? ನಮ್ಮ ಸಿಎಂ ಇದ್ದಾರೆ, ಹೈಕಮಾಂಡ್ ಇದೆ. ಎಲ್ಲವನ್ನು ಅವರು ನೋಡಿಕೊಳ್ತಾರೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ‌ ವಿಚಾರವಾಗಿ ಪ್ರತಿಕ್ರಿಯಿಸಿ, ವಿಜಯೇಂದ್ರ ಅವರು ಕೆಲಸ ಮಾಡೋದು‌ ಹೆಮ್ಮೆಯ ವಿಚಾರ. ಅವರು ಯುವ ನಾಯಕರು. ಅವರು ಸಹ ಯಡಿಯೂರಪ್ಪರ ರೀತಿಯೇ ಒಳ್ಳೆಯ ನಾಯಕರಾಗಿ ಬೆಳೆಯುತ್ತಾರೆ. ಬಿಜೆಪಿಯವರಿಗೆ ವಿಜಯೇಂದ್ರ ಎಂದರೆ ಹೆಮ್ಮೆ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.