ETV Bharat / state

ಬೆಂಗಳೂರು: ರಾಂಬೊ ಸರ್ಕಸ್ ಕಲಾವಿದರಿಂದ ಮತದಾನ ಜಾಗೃತಿ - voting Awareness

ರಾಂಬೊ ಸರ್ಕಸ್ ಕಲಾವಿದರ ತಂಡದಿಂದ ನಗರದಲ್ಲಿಂದು ಮತದಾನದ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

Etv Bharatrambo-circus-performed-on-voting-awareness
ಬೆಂಗಳೂರು:ಮತದಾನ ಜಾಗೃತಿ ಮೂಡಿಸಿದ ರಾಂಬೊ ಸರ್ಕಸ್ ಕಲಾವಿದರು
author img

By

Published : Apr 14, 2023, 6:10 PM IST

ಬೆಂಗಳೂರು: ರಾಂಬೊ ಸರ್ಕಸ್ ಕಲಾವಿದರು ವಿಶಿಷ್ಟ ಮತದಾನ ಜಾಗೃತಿ ಕಾರ್ಯಕ್ರಮವನ್ನು ಇಂದು (ಶುಕ್ರವಾರ) ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್‌ ಎದುರಿನ ಸೆಂಟ್ ಜಾನ್ಸ್ ಸಭಾಂಗಣದಲ್ಲಿ ನಡೆಸಿಕೊಟ್ಟರು. ಜನರು ತಮ್ಮ ಹಕ್ಕು ಚಲಾಯಿಸುವಂತೆ ಜನರಿಗೆ ಮನವಿ ಮಾಡಲು, ಭಿತ್ತಿಪತ್ರ ಮತ್ತು ಪೋಸ್ಟರ್‌ಗಳನ್ನು ಬಳಸಿ ಚುನಾವಣೆಯ ಜಾಗೃತಿ ಮೂಡಿಸಿದರು.

ಈ ಅಭಿಯಾನದಿಂದ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಉಸಿರು ಬಿಗಿ ಹಿಡಿದುಕೊಳ್ಳುವಂತೆ ಮಾಡುವ ಅದ್ಬುತ ಪ್ರದರ್ಶನಗಳೊಂದಿಗೆ ಶನಿವಾರ “ವಿಶ್ವ ಸರ್ಕಸ್ ದಿನ” ವನ್ನು ಕೂಡ ರಾಂಬೋ ಸರ್ಕಸ್ ತಂಡ ಆಚರಿಸಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸುಜಿತ್ ದಿಲೀಪ್ ತಿಳಿಸಿದರು. ಮುಂಬೈ, ಗೋವಾ, ವಿಶಾಖಪಟ್ಟಣಂ ಮತ್ತು ಸೂರತ್​ನಲ್ಲಿ ಅಭೂತಪೂರ್ವ ಯಶಸ್ವಿ ಪ್ರದರ್ಶನಗಳ ನಂತರ, ಏಪ್ರಿಲ್ ತಿಂಗಳ 3ನೇ ಶನಿವಾರ ಆಚರಿಸಲ್ಪಡುವ ‘ವಿಶ್ವ ಸರ್ಕಸ್ ದಿನ’ ಆಚರಿಸಲು ‘ರಾಂಬೋ ಸರ್ಕಸ್’ ಮೊದಲ ಬಾರಿಗೆ ಬೆಂಗಳೂರು ನಗರಕ್ಕೆ ಆಗಮಿಸಿದೆ ಎಂದರು.

ನಾವು ಭರವಸೆ ನೀಡಿದಂತೆ ನಗರದಲ್ಲಿ ಮೊದಲ ಬಾರಿಗೆ ರಾಂಬೊ ಸರ್ಕಸ್ ಅನ್ನು ರಷ್ಯಾ, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ಇಥಿಯೋಪಿಯಾ ಮತ್ತು ಭಾರತದ ಅಂತಾರಾಷ್ಟ್ರೀಯ ಕಲಾವಿದರೊಂದಿಗೆ 120 ನಿಮಿಷಗಳ ಕಾಲ ಸಮ್ಮೋಹನಗೊಳಿಸುವ ಮತ್ತು ನೋಡುಗರು ಉಸಿರು ಬಿಗಿ ಹಿಡಿಯುವಂತೆ ಮಾಡುವ ಪ್ರದರ್ಶನ ನೀಡಲು ಸಜ್ಜಾಗಿದ್ದೇವೆ. ರಾಂಬೊ ತಂಡವು ಏರಿಯಲ್ ರಿಂಗ್, ಹ್ಯಾಂಡ್ ಟು ಹ್ಯಾಂಡ್, ಸ್ಲಿಂಯ್, ಬಬಲ್ ಆಕ್ಟ್, ಬೌನ್ಸಿಂಗ್ ಬಾಲ್, ಲೇಸರ್, ರೊಲ್ಲಾ ಬೊಲ್ಲಾ, ಹುಲಾ ಹೂಪ್ ಮತ್ತು ಏರಿಯಲ್ ರೋಪ್ನೊಂದಿಗೆ ಬಂದಾಗ ನಿಮಗೆ ಸಿಗುವ ಮನರಂಜನೆಯನ್ನು ವರ್ಣಿಸಲು ಅಸಾಧ್ಯ ಎಂದು ಸುಜಿತ್ ದಿಲೀಪ್ ಮಾಹಿತಿ ನೀಡಿದರು.

rambo-circus-performed-on-voting-awareness
ರಾಂಬೊ ಸರ್ಕಸ್ ಕಲಾವಿದರಿಂದ ಮತದಾನದ ಜಾಗೃತಿ

ಸರ್ಕಸ್ ಸಂಚಾಲಕ ಹರೀಶ್ ಮಾತನಾಡಿ, ವಿಶ್ವ ಸರ್ಕಸ್ ದಿನವು ವಿಶ್ವದಾದ್ಯಂತ ಜನಪ್ರಿಯವಾಗಿರುವ ದಿನವಾಗಿದೆ. ಜಾಗತಿಕ ಸರ್ಕಸ್ ಸಮುದಾಯ ಸರ್ಕಸ್ ಕಲೆಗಳನ್ನು ಪ್ರಚುರಪಡಿಸಲು ಈ ಅಂತಾರಾಷ್ಟ್ರೀಯ ದಿನಾಚರಣೆ ಮಾಡುತ್ತಿದೆ. 2009 ರಲ್ಲಿ ಫೆಡರೇಶನ್ ಮೊಂಡಿಯೇಲ್ ಡು ಸರ್ಕ್ಯು ನಿಗದಿಪಡಿಸಿದ ಈ ದಿನವು ಪ್ರಪಂಚದಾದ್ಯಂತ ಸಾಂಪ್ರದಾಯಿಕ ಸರ್ಕಸ್ ಕಲೆಗಳ ಶ್ರೇಷ್ಠತೆಯನ್ನು ಸಾರಿ ಹೇಳುವ ದಿನವಾಗಿ ಘೋಷಣೆಯಾಗಿದೆ. ರಾಂಬೊ ಸರ್ಕಸ್ ಈ ಹಬ್ಬದ ಭಾಗ. ಏಕೆಂದರೆ, ಸರ್ಕಸ್ ಕಲೆಯ ಪ್ರಚಾರ, ಪುನರುತ್ಥಾನದಲ್ಲಿ ಸಂಸ್ಥೆ ಬಹುಮುಖ್ಯ ಪಾತ್ರ ವಹಿಸಿದೆ ಎಂದು ಹೇಳಿದರು.

ಸರ್ಕಸ್ ಕ್ಷೇತ್ರ ಎದುರಿಸಿದ ಅತ್ಯಂತ ಸವಾಲಿನ ದಿನಗಳೆಂದರೆ ಅದು ಕೋವಿಡ್ ಸಮಯ. ಆದರೆ, ಜನರ ಬೆಂಬಲದೊಂದಿಗೆ, ರಾಂಬೊ ಸರ್ಕಸ್ ಸವಾಲಿನ ದಿನಗಳ ಅಗ್ನಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತನ್ನ ಅಸ್ತಿತ್ವ ಉಳಿಸಿಕೊಂಡಿತು. ರಾಂಬೊ ಸರ್ಕಸ್ ಗೆ ಜನರ ಅಚಲ ಬೆಂಬಲವೇ ಶ್ರೀ ರಕ್ಷೆ. ಕೋವಿಡ್ ಸಂದರ್ಭದಲ್ಲಿ ಹಲವಾರು ಸರ್ಕಸ್ ಸಂಸ್ಥೆಗಳು ಮುಚ್ಚಿದವು. ಆದರೆ, ಜನರ ನಂಬಿಕೆಯೇ ನಮ್ಮನ್ನು ಮುಂದುವರೆಯುವಂತೆ ಮಾಡಿತು ಎಂದರು.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಪೌಟ್-ಫೇಸ್ ಸೆಲ್ಫಿ: ಚಂದ್ರನಿಗೆ ಹೋಲಿಸಿದ ಅಭಿಮಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.