ಬೆಂಗಳೂರು: ಇಂದು ರಕ್ಷಾ ಬಂಧನ ಹಬ್ಬದ ಹಿನ್ನೆಲೆ, ಸಿಎಂ ಯಡಿಯೂರಪ್ಪಗೆ ತಮ್ಮ ನಿವಾಸದಲ್ಲಿ ಮಕ್ಕಳು ರಕ್ಷಾಬಂಧನ ಕಟ್ಟಿದರು.
ಬೆಂಗಳೂರಿನ ಎಸ್ಒಎಸ್ ಚಿಲ್ಡ್ರನ್ಸ್ ವಿಲೇಜ್ ಸಂಸ್ಥೆಯ ಮಕ್ಕಳು ಸಿಎಂ ನಿವಾಸದಲ್ಲಿ ರಕ್ಷಾ ಬಂಧನ ಆಚರಿಸಿದರು. ವಿದ್ಯಾರ್ಥಿಗಳು, ತಾಯಂದಿರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಖಿ ಕಟ್ಟಿ ಆರತಿ ಬೆಳಗಿದರು.
ನಗರ ಆಯುಕ್ತರಿಗೆ ರಾಖಿ ಕಟ್ಟಿದ ಮಹಿಳೆಯರು
ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಹಿಂದೂ ಜಾಗರಣ ವೇದಿಕೆ ಮಹಿಳೆಯರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ರಕ್ಷಾ ಬಂಧನ ಕಟ್ಟಿ ಶುಭಾಶಯ ತಿಳಿಸಿದ್ರು. ಜೊತೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಸಿಹಿ ಹಂಚಿ ಸಂಭ್ರಮ ಪಟ್ಟರು.