ಬೆಂಗಳೂರು: ಅಪಾರ್ಟ್ಮೆಂಟ್ ನಿವಾಸಿಗಳ ಸಮಸ್ಯೆಗಳ ಪರಿಹಾರಕ್ಕೆ ಅಪಾರ್ಟ್ಮೆಂಟ್ ಸೆಲ್ ಸ್ಥಾಪನೆ ಮಾಡುತ್ತೇವೆ ಎಂದು ಎಐಸಿಸಿ ಸಂಶೋಧನ ವಿಭಾಗದ ಮುಖ್ಯಸ್ಥರಾದ ಪ್ರೋ. ರಾಜೀವ್ ಗೌಡ ಅಭಿಪ್ರಾಯ ಪಟ್ಟಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಐಸಿಸಿ ಕಾರ್ಯಾದರ್ಶಿ ಅಭಿಷೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಅಪಾರ್ಟ್ಮೆಂಟ್ ನಿವಾಸಿಗಳ ಸಮಸ್ಯೆಗೆ ಶಾಶ್ವತ ಸೆಲ್ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ.
ಅಪಾರ್ಟ್ಮೆಂಟ್ ನಿವಾಸಿಗಳ ಅಸೋಸಿಯೇಶನ್ ಒಳಗೊಂಡು ಸೆಲ್ ಸ್ಥಾಪನೆ ಆಗಲಿದೆ. ಬರೀ ಐಟಿ - ಬಿಟಿ ಅಲ್ಲ ನಾಟಿ ಜನರ ಬಗ್ಗೆಯೂ ನಾವು ಗಮನ ಕೊಡ್ತೇವೆ. ಅಪಾರ್ಟ್ಮೆಂಟ್ ನಿವಾಸಿಗಳ ಸಮಸ್ಯೆಗಳ ಪರಿಹಾರಕ್ಕೆ ಈ ಸೆಲ್ ಸ್ಥಾಪನೆ ಮಾಡುತ್ತಿದ್ದೇವೆ ಎಂದು ವಿವರಿಸಿದರು. ಅದಕ್ಕಿಂತ ಮೊದಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಅಪಾರ್ಟ್ಮೆಂಟ್ ಅಸೋಸಿಯೇಷನ್ ಹಾಗೂ ನಿವಾಸಿಗಳೊಂದಿಗೆ ಸಮಾವೇಶ ಮಾಡುತ್ತೇವೆ. ಆ ಬಳಿಕ ಅವರೊಂದಿಗೆ ಚರ್ಚಿಸಿ ಸೆಲ್ ಸ್ಥಾಪನೆ ಮಾಡಲಿದ್ದೇವೆ. ಯಾರದ್ದೊ ತಪ್ಪಿಗೆ ಅಪಾರ್ಟ್ಮೆಂಟ್ ನಿವಾಸಿಗಳು ಪ್ರವಾಹ ಪೀಡಿತಕ್ಕೆಒಳಗಾಗಿದ್ದಾರೆ. ಈ ಸೆಲ್ ಚುನಾವಣೆ ದೃಷ್ಟಿಯಿಂದ ರಚನೆ ಮಾಡುತ್ತಿಲ್ಲ. ಇದು ಶಾಶ್ವತವಾಗಿ ಅಪಾರ್ಟ್ಮೆಂಟ್ ನಿವಾಸಿಗಳ ಬಗ್ಗೆ ಗಮನ ಕೊಡಲಿದೆ ಎಂದು ವಿವರಿಸಿದರು.
ಪ್ರವೀಣ ಪೀಟರ್, ಗಂಗಾಂಬಿಕೆ ಆ ಕಮಿಟಿಯಲ್ಲಿ ಇರುತ್ತಾರೆ. ದೊಡ್ಡ ಅಭಿಯಾನ ಮಾಡುತ್ತಿದ್ದೇವೆ. ಪ್ರತಿಯೋಂದು ವಿಧಾನಸಭಾ ಕ್ಷೇತ್ರದಲ್ಲಿ ಮೀಟಿಂಗ್ ನಡೆಸುತ್ತೇವೆ. ಅಲ್ಲಿ ಅವರ ಬೇಡಿಕೆಗಳು ಅವರ ಸಮಸ್ಯೆಗಳನ್ನ ಆಲಿಸುತ್ತಿವೆ. ಅಪಾರ್ಟ್ಮೆಂಟ್ ಮಾಲೀಕರು ನಾವು ತಬ್ಬಲಿಗಳು ಎಂದು ತಿಳಿದುಕೊಳ್ಳಬಾರದು. ಅವರ ಸಮಸ್ಯೆಗಳೇನು ಅವರ ಪರವಾಗಿ ಕಾಂಗ್ರೆಸ್ ಪಕ್ಷ ಇದೆ ಸರ್ಕಾರ ಯೋಚನೆ ಮಾಡದಿದ್ರು ನಾವು ಮಾಡುತ್ತಿದ್ದೇವೆ. ಬಿಜೆಪಿ ಸರ್ಕಾರ ತ್ರಿಬಲ್ ಇಂಜಿನ ಸರ್ಕಾರ ಏನು ಮಾಡುತ್ತಿಲ್ಲ. ಅದಕ್ಕೆ ನಾವು ಮಾಡುತ್ತಿದ್ದೇವೆ. ಇದು ಚುನಾವಣೆಗೋಸ್ಕರ ಏನು ಅಲ್ಲ ಎಂದು ತಿಳಿಸಿದರು.
ಸಮಸ್ಯೆ ಕೇಳುವವರಿಲ್ಲ: ಈ ಬಗ್ಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಅಪಾರ್ಟ್ಮೆಂಟ್ ಸಂಸ್ಕೃತಿ 20 ವರ್ಷಗಳ ನಂತರ ಇತ್ತೀಚೆಗೆ ಶುರುವಾಗಿದೆ. ಸಣ್ಣ ದೊಡ್ಡ ಅಪಾರ್ಟ್ಮೆಂಟ್ ಗಳಿವೆ. 10-12 ಮನೆಗಳಿಂದ ಹಿಡಿದು ದೊಡ್ಡ ಅಪಾರ್ಟ್ಮೆಂಟ್ ಗಳು ಈಗ ಆಗುತ್ತಿವೆ. ಕಳೆದ 4-5 ವರ್ಷಗಳಿಂದ ಅಪಾರ್ಟ್ಮೆಂಟ್ ನಿವಾಸಿಗಳ ಸಮಸ್ಯೆ ಕೇಳುವವರೇ ಇಲ್ಲ. ಕಟ್ಟಡ ನಿರ್ಮಾಣ ಕಾನೂನು ಉಲ್ಲಂಘನೆ ನಮಗೆ ಸಂಬಂಧವಿಲ್ಲ.
ಇನ್ಮುಂದೆ ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಸಂಸ್ಕೃತಿ ಮತ್ತಷ್ಟು ಹೆಚ್ಚಾಗಲಿದೆ. ನಿಯಮ ಉಲ್ಲಂಘಿಸಿ ಅಪಾರ್ಟ್ಮೆಂಟ್ ಕಟ್ಟಡಗಳ ನಿರ್ಮಾಣ ನಮಗೆ ಸಂಬಂಧವಿಲ್ಲ. ಆದರೆ, ಅಪಾರ್ಟ್ಮೆಂಟ್ ನಿವಾಸಿಗಳ ಮೂಲ ಸೌಕರ್ಯಗಳ ಕುರಿತು ನಾವು ಗಮನ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಮೆಟ್ರೊ ಪಿಲ್ಲರ್ ದುರಂತದಲ್ಲಿ ತಾಯಿ-ಮಗು ಸಾವಿನ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿ, ಅವಘಡದಲ್ಲಿ ತಾಯಿ ಮಗು ತೀರಿ ಹೋಗಿದ್ದಾರೆ. ಇದಕ್ಕೆ ಸರ್ಕಾರವೇ ನೇರವಾಗಿ ಕಾರಣ.
ಧಮ್ -ತಾಕತ್ ಇದ್ದರೆ ಗುಣಮಟ್ಟದ ಕೆಲಸ ಮಾಡಲಿ: ಎಷ್ಟು ಕೋಟಿ ಕೊಟ್ಟರೆ ಆ ಮಗುವಿನ ಪ್ರಾಣ ಬರುತ್ತದೆ. ಸಿಎಂ ಬಸವರಾಜ್ ಬೊಮ್ಮಾಯಿ ಮಾತೆತ್ತಿದರೆ ಧಮ್ಮು ತಾಕತ್ತು ಅಂತಾ ಮಾತನಾಡುತ್ತಾರೆ. ಅವರಿಗೆ ಧಮ್-ತಾಕತ್ ಇದ್ದರೆ ಗುಣಮಟ್ಟದ ಕೆಲಸ ಮಾಡಿಸಲಿ ಎಂದು ಸಲಹೆ ನೀಡಿದರು. ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಮಾತನಾಡಿ, ಸಿದ್ದರಾಮಯ್ಯ ನಮ್ಮ ನಾಯಕರು. 224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ನಿಲ್ಲಬಹುದು. ಸಿದ್ದರಾಮಯ್ಯ ಹರಕೆ ಕುರಿ ಮಾಡುತ್ತಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು ಬಿಜೆಪಿ ಅವರಿಗೆ ಏಕೆ ನಮ್ಮ ವಿಚಾರ. ಮೊದಲ ತಮ್ಮ ಮನೆಯಲ್ಲಿ ಏನು ಆಗುತ್ತಾ ಇದೆ ಅನ್ನೋದನ್ನ ನೋಡಿಕೊಳ್ಳಲಿ ಎಂದು ತಿಳಿಸಿದರು.
ಸ್ಯಾಂಟ್ರೋ ರವಿ ವಿಚಾರ ಮಾತನಾಡಿ, ಕಾನೂನು ಸುವ್ಯವಸ್ಥೆ ಇದೆಯಾ ರಾಜ್ಯದಲ್ಲಿ ಇದೇಯಾ? ಗೃಹ ಮಂತ್ರಿಗಳು ಕಾನುನೂ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಮಾಧುಸ್ವಾಮಿ ಅವರು ಹೇಳಿದ್ದಾರಾಲ್ಲ ಹಾಗೆ ಏನೋ ತಳ್ಳೊಕೊಂಡು ಹೋಗುತ್ತಿದ್ದಾರೆ ಅಷ್ಟೇ. ಕಾಂಗ್ರೆಸ್ ಸರ್ಕಾದಲ್ಲಿಯೇ ಸ್ಯಾಂಟ್ರೋ ರವಿ ಬೆಳೆದಿದ್ದು ಗೃಹ ಸಚಿವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಮ್ಮ ಕಾಲದಲ್ಲಿ ಆಗಿದ್ದರೆ ಮಾಧ್ಯಮದಲ್ಲಿ ಬರಬೇಕಾಗಿತ್ತು ಸುದ್ದಿ ಆಗಬೇಕಾಗಿತ್ತು. ಸ್ಯಾಂಟ್ರೋ ರವಿ ಬಿಜೆಪಿ ಪಕ್ಷದವನು ಎಂದರು.
ಇದನ್ನೂ ಓದಿ: ಸರ್ಕಾರವು ರಾಜ್ಯದ ಜನತೆಗೆ ಏರೋಪ್ಲೇನ್ ತೋರಿಸುತ್ತಿದೆ: ಮಧು ಬಂಗಾರಪ್ಪ ವ್ಯಂಗ್ಯ