ETV Bharat / state

ಸಿಎಂ ಹುಟ್ಟುಹಬ್ಬಕ್ಕೆ ರೈಲ್ವೆ ಗಿಫ್ಟ್: ಶಿವಮೊಗ್ಗ - ಚೆನ್ನೈ ರೈಲು ಎರಡು ದಿನಕ್ಕೆ ವಿಸ್ತರಣೆ

ಶಿವಮೊಗ್ಗ ಟೌನ್- ಚೈನ್ನೈ- ಶಿವಮೊಗ್ಗ ಟೌನ್ ತತ್ಕಾಲ್ ಎಕ್ಸ್​​ಪ್ರೆಸ್ ದ್ವೈ - ಸಾಪ್ತಾಹಿಕ ರೈಲು ಸೇವೆಗೆ ಸಿಎಂ ಬಿ.ಎಸ್​. ಯಡಿಯೂರಪ್ಪ ಹಸಿರು ನಿಶಾನೆ ನೀಡಿದ್ರು.

Railway Gift for people by CM
ಟೌನ್- ಚೆನ್ನೈ ತತ್ಕಾಲ್ ಎಕ್ಸ್ ಪ್ರೆಸ್ ರೈಲು
author img

By

Published : Feb 27, 2020, 4:50 PM IST

ಬೆಂಗಳೂರು: ಶಿವಮೊಗ್ಗ- ಚೆನ್ನೈ ನಡುವೆ ವಾರದಲ್ಲಿ ಎರಡು ಆವೃತ್ತಿಯ ರೈಲ್ವೆ ಸಂಚಾರಕ್ಕೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು.

ಶಿವಮೊಗ್ಗ ಟೌನ್- ಚೈನ್ನೈ- ಶಿವಮೊಗ್ಗ ಟೌನ್ ತತ್ಕಾಲ್ ಎಕ್ಸ್​​ಪ್ರೆಸ್ ದ್ವೈ - ಸಾಪ್ತಾಹಿಕ ರೈಲು ಸೇವೆಗೆ ಹಸಿರು ನಿಶಾನೆ ನೀಡಲಾಯಿತು. ನೈರುತ್ಯ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಬಿಎಸ್​ವೈ, ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಚಾಲನೆ ನೀಡಿದರು.

ಈ ರೈಲ್ವೆ ಸೇವೆ 28-2-2020 ರಿಂದ ಪ್ರತಿ ಸೋಮವಾರ ಮತ್ತು ಶುಕ್ರವಾರದಂದು ಶಿವಮೊಗ್ಗದಿಂದ ಹಾಗೂ ದಿನಾಂಕ 29 -2- 20 ರಿಂದ ಪ್ರತಿ ಮಂಗಳವಾರ ಮತ್ತು ಶನಿವಾರದಂದು ಚೆನ್ನೈನಿಂದ ಶಿವಮೊಗ್ಗ ಟೌನ್- ಚೆನ್ನೈ ತತ್ಕಾಲ್ ಎಕ್ಸ್ ಪ್ರೆಸ್ ರೈಲು ಸಂಚರಿಸಲಿದೆ.

ಶಿವಮೊಗ್ಗ-ಚೆನ್ನೈ ರೈಲು ಎರಡು ದಿನಕ್ಕೆ ವಿಸ್ತರಣೆ

2019 ರಲ್ಲಿ ಶಿವಮೊಗ್ಗ-ಚೆನ್ನೈ ನಡುವೆ ಸಪ್ತಾಹಿಕ ರೈಲು ಸೇವೆ ಆರಂಭವಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ಮತ್ತೊಂದು ಟ್ರೈನ್​​ಗೆ ರೈಲ್ವೆ ಇಲಾಖೆ ಚಾಲನೆ ನೀಡಿದೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಪ್ರಯತ್ನದಿಂದ ವಾರಕ್ಕೆ ಎರಡು ರೈಲು ಸೇವೆ ಆರಂಭವಾಗಿದೆ.

ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಶಿವಮೊಗ್ಗ ಕಳೆದ ಒಂದು ದಶಕದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ರೈಲ್ವೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡಿದೆ. ಶಿವಮೊಗ್ಗದಿಂದ ಚೈನ್ನೈಗೆ ವಾರದಲ್ಲಿ ಎರಡು ದಿನ ಈ ಸೇವೆ ವಿಸ್ತರಿಸಲಾಗಿದೆ. ಈ ಯೋಜನೆಯನ್ನ ಶಿವಮೊಗ್ಗದ ಜನ ಸದುಪಯೋಗಪಡಿಸಿಕೊಳ್ಬೇಕು. ಈ ವಿಸ್ತರಣೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅಪಾರವಾಗಿ ಶ್ರಮಿಸಿದ್ದಾರೆ. ಈ ಯೋಜನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದರು.

ಇನ್ನು ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಮಾತನಾಡಿ, ಶಿವಮೊಗ್ಗಕ್ಕೆ ಪ್ರತಿದಿನ ರೈಲು ಸಂಚಾರ ಆರಂಭಿಸಲು ಮುಖ್ಯಮಂತ್ರಿಗಳು ಬೇಡಿಕೆ ಇಟ್ಟಿದ್ದರು. ಆದ್ರೆ ಸಧ್ಯ ವಾರಕ್ಕೆ ಎರಡು ದಿನ ರೈಲನ್ನು, ಅವರ ಹುಟ್ಟುಹಬ್ಬದ ದಿನ ಶಿವಮೊಗ್ಗ ಜನಕ್ಕೆ ಕೊಡುಗೆ ನೀಡಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.