ETV Bharat / state

ಫುಡ್​ ಡೆಲಿವರಿ ಬಾಯ್ ದ್ವಿಚಕ್ರ ವಾಹನದಲ್ಲಿ ರಾಹುಲ್ ಗಾಂಧಿ​ ಸಂಚಾರ.. ಸಂವಾದ

ಬೆಂಗಳೂರಿನ ಏರ್ಲೈನ್ಸ್ ಹೋಟೆಲ್​​ನಿಂದ ಶಾಂಗ್ರಿಲಾ ತನಕ ಬೈಕ್​​ನಲ್ಲಿ ಆಹಾರ ವಿತರಣಾ ಸಿಬ್ಬಂದಿ ಜೊತೆ ರಾಹುಲ್​ ಗಾಂಧಿ ಸಂಚಾರ ನಡೆಸಿದರು.

ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್​ ಗಾಂಧಿ
ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್​ ಗಾಂಧಿ
author img

By

Published : May 7, 2023, 5:37 PM IST

Updated : May 8, 2023, 9:17 AM IST

ಹಾಫ್ ಹೆಲ್ಮೆಟ್ ಧರಿಸಿ ರಾಹುಲ್ ಗಾಂಧಿ​ ಸಂಚಾರ

ಬೆಂಗಳೂರು : ರಾಜಧಾನಿಯಲ್ಲಿ ಭಾನುವಾರ ಆಹಾರ ವಿತರಣಾ ಸಿಬ್ಬಂದಿ ದ್ವಿಚಕ್ರ ವಾಹನದಲ್ಲಿ ಹಾಫ್ ಹೆಲ್ಮೆಟ್ ಧರಿಸಿ ಸಂಚರಿಸುವ ಮೂಲಕ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್​ ಗಾಂಧಿ ನೋಡುಗರನ್ನು ಅಚ್ಚರಿಗೊಳಿಸಿದ್ದಾರೆ. ನಗರದ ಏರ್ಲೈನ್ಸ್ ಹೋಟೆಲ್​​ನಿಂದ ಶಾಂಗ್ರಿಲಾ ತನಕ ಆಹಾರ ವಿತರಣಾ ಸಿಬ್ಬಂದಿ ಜೊತೆ ಸಂವಾದ ನಡೆಸುತ್ತ ಸಾಗಿದರು. ಆಹಾರ ವಿತರಣಾ ಸಿಬ್ಬಂದಿಯ ಕಷ್ಟ, ಸುಖಗಳ ವಿಚಾರ ಕೇಳಿದ ರಾಹುಲ್​ ಗಾಂಧಿ, ಸರಳತೆ ಮೆರೆದು ಕರ್ನಾಟಕ ಜನತೆಯ ಗಮನ ಸೆಳೆದರು.

ಆನ್​​ಲೈನ್ ಮೂಲಕ ಆರ್ಡರ್ ಪಡೆದು ಆಹಾರ ವಿತರಣೆ ಮಾಡುವ ಡಂಜೊ, ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಟ್ ಇತ್ಯಾದಿಗಳ ವಿತರಣಾ ಪಾಲುದಾರರೊಂದಿಗೂ ರಾಹುಲ್​ ಗಾಂಧಿ ಸುದೀರ್ಘ ಅವಧಿಯ ಸಂವಾದ ನಡೆಸಿದರು. ಒಂದು ಕಪ್ ಕಾಫಿ ಮತ್ತು ಮಸಾಲೆ ದೋಸೆಯ ಜೊತೆ ಅವರು ಈ ಸಂವಾದವನ್ನು ನಡೆಸಿದರು.

ಆಹಾರ ವಿತರಣಾ ಸಿಬ್ಬಂದಿಗಳೊಂದಿಗೆ ರಾಹುಲ್​ ಗಾಂಧಿ ಸಂವಾದ

ಆಹಾರ ವಿತರಣಾ ಸಿಬ್ಬಂದಿ ಜೀವನ, ಸ್ಥಿರ ಉದ್ಯೋಗದ ಕೊರತೆ ಮತ್ತು ಮೂಲ ಸರಕುಗಳ ಬೆಲೆ ಏರಿಕೆಯ ಬಗ್ಗೆ ಚರ್ಚಿಸಿದರು. ಈ ಯುವಕರು ಆನ್​​ಲೈನ್ ಮೂಲಕ ಬುಕ್ ಮಾಡಲಾದ ಆಹಾರವನ್ನು ವಿತರಿಸುವ ಉದ್ಯೋಗಗಳನ್ನು ಏಕೆ ತೆಗೆದುಕೊಂಡರು ಮತ್ತು ಅವರ ಕೆಲಸದ ಪರಿಸ್ಥಿತಿಗಳು ಹೇಗಿದ್ದವು ಎಂಬುದನ್ನು ರಾಹುಲ್​ ಗಾಂಧಿ ಕುತೂಹಲದಿಂದ ಆಲಿಸಿದರು.

ಬೆಂಗಳೂರಿನಲ್ಲಿ ಮಾತ್ರ 2 ಲಕ್ಷ ಮಂದಿಗೂ ಅಧಿಕ ಸಿಬ್ಬಂದಿ ಆಹಾರ ವಿತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಪಕ್ಷವು ಇಂಥವರ ಅನುಕೂಲಕ್ಕಾಗಿ ತನ್ನ ಪ್ರಣಾಳಿಕೆಯಲ್ಲಿ ನಿರ್ದಿಷ್ಟ ಭರವಸೆಗಳನ್ನು ನೀಡಿದೆ. ಮುಖ್ಯವಾಗಿ:

1. ₹ 3,000 ಕೋಟಿ ಕಾರ್ಪಸ್‌ನೊಂದಿಗೆ ಗಿಗ್ ವರ್ಕರ್ಸ್ ಕಲ್ಯಾಣ ಮಂಡಳಿಯನ್ನು ಸ್ಥಾಪಿಸುವುದು.

2. ಗಿಗ್ ಕೆಲಸಗಾರರು ಮತ್ತು ಅಸಂಘಟಿತ ವಲಯದ ಇತರ ಕಾರ್ಮಿಕರಿಗೆ ಕನಿಷ್ಠ ಗಂಟೆಯ ವೇತನವನ್ನು ಖಚಿತಪಡಿಸುವುದು.

ಬಿಜೆಪಿಯ ಭ್ರಷ್ಟಾಚಾರದಿಂದ ಕೂಡಿದ '40% ಕಮಿಷನ್ ಸರ್ಕಾರ' ಮತ್ತು ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳ ಪರಿಣಾಮಗಳ ಬಗ್ಗೆ ವಿತರಣಾ ಪಾಲುದಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ನಂತರ ಒಬ್ಬ ಆಹಾರ ವಿತರಕನ ವಾಹನದ ಹಿಂದಿನ ಸೀಟ್ ಅಲ್ಲಿ ಕುಳಿತು ಒಂದಿಷ್ಟು ದೂರ ಪ್ರಯಾಣಿಸಿದರು. ಈ ಸಂದರ್ಭ ಆತನ ಹಾಗೂ ಅವನ ರೀತಿಯಲ್ಲೇ ವಿತರಣಾ ಕೆಲಸದಲ್ಲಿ ನಿರತರವಾಗಿರುವ ಸಿಬ್ಬಂದಿಯ ಕಷ್ಟವನ್ನು ಕೇಳಿ ರಾಹುಲ್​ ಗಾಂಧಿ ತಿಳಿದುಕೊಂಡರು.

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಹುಲ್​ ಗಾಂಧಿ ಹಾಗೂ ಪ್ರಿಯಂಕಾ ಗಾಂಧಿ ಪ್ರಚಾರದಲ್ಲಿ ತೊಡಗಿದ್ದಾರೆ. ಸದ್ಯ ಆನೇಕಲ್ ನಲ್ಲಿ ಪ್ರಚಾರ ಸಭೆ ನಡೆಸಿರುವ ಅವರು, ಸಂಜೆ 5.30ಕ್ಕೆ ಪುಲಕೇಶಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. ಇದಾದ ಬಳಿಕ ಸೋದರಿ ಹಾಗೂ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಜತೆ ಶಿವಾಜಿ ನಗರದಲ್ಲಿ ಜಂಟಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದು. ಮಧ್ಯಾಹ್ನ 2:30 ಕ್ಕೆ ಮೂಡುಬಿದಿರೆಯಲ್ಲಿ ಪ್ರಚಾರ ನಡೆಸಿರುವ ಪ್ರಿಯಾಂಕಾ ಗಾಂಧಿ ಸಂಜೆ 5:30 ಕ್ಕೆ ಮಹದೇವಪುರ ದಲ್ಲಿ ಹಾಗೂ ಸಂಜೆ 7ಕ್ಕೆ ಬೆಂಗಳೂರು ದಕ್ಷಿಣದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ರಾತ್ರಿ ರಾಹುಲ್​ ಗಾಂಧಿ ಜತೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೋಮವಾರ ಬೃಹತ್ ಪ್ರಚಾರ : ಪ್ರಚಾರದ ಕೊನೆ ದಿನವಾದ ನಾಳೆ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಬಹುದೊಡ್ಡ ಪ್ರಚಾರಕ್ಕೆ ನಿರ್ಧಾರ ಮಾಡಲಾಗಿದೆ. ಬೆಂಗಳೂರಿನ 500 ಕಡೆ ಪ್ರಚಾರ ಮಾಡಲು ತೀರ್ಮಾನಿಸಿದ್ದಾರೆ. ಟ್ರಾಫಿಕ್ ಸಮಸ್ಯೆಗೆ ತೊಂದರೆ ಆಗದ ರೀತಿ ಪ್ರಚಾರ ಮಾಡಲು ಕೈ ನಾಯಕರು ನಿರ್ಧರಿಸಿದ್ದು, ಸಾವಿರಾರು ಕಾರ್ಯಕರ್ತರ, ಮುಖಂಡರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ : ಮುಸ್ಲಿಂ ಮತ ಬ್ಯಾಂಕ್ ಜೆಡಿಎಸ್​ಗೆ ಹೋಗದಂತೆ ಕಾಂಗ್ರೆಸ್ ರೂಪಿಸಿದೆಯೇ ಕಾರ್ಯತಂತ್ರ?

Last Updated : May 8, 2023, 9:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.