ETV Bharat / state

ಏಪ್ರಿಲ್ 16ಕ್ಕೆ ಕೋಲಾರಕ್ಕೆ ರಾಹುಲ್ ಗಾಂಧಿ: ಡಿಕೆಶಿ - stayameva jayate program at kolar

ರಾಹುಲ್ ಗಾಂಧಿಯವರಿಗೆ ನೀಡಿದ ಶಿಕ್ಷೆ ಸರಿಯಲ್ಲ. ಕೋಲಾರದಲ್ಲಿ ಏಪ್ರಿಲ್​ 16ರಂದು ಸಭೆ ನಡೆಸುವ ಮೂಲಕ ಇಡೀ ರಾಜ್ಯಕ್ಕೆ ಒಂದು ಹೊಸ ಶಕ್ತಿ ಕೊಡುವ ಪ್ರಯತ್ನ ಮಾಡಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ತಿಳಿಸಿದರು.

rahul-gandhi-is-coming-to-the-state-on-april-16-dk
ಏಪ್ರಿಲ್ 16ಕ್ಕೆ ರಾಜ್ಯಕ್ಕೆ ರಾಹುಲ್ ಗಾಂಧಿ: ಡಿಕೆಶಿ
author img

By

Published : Apr 8, 2023, 4:36 PM IST

Updated : Apr 8, 2023, 5:07 PM IST

ಬೆಂಗಳೂರು: ಕೋಲಾರದಲ್ಲಿ ನಡೆಯಲಿರುವ ಸತ್ಯಮೇವ ಜಯತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಏಪ್ರಿಲ್ 16ರಂದು ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕದ ಬೆಳಗಾವಿಗೆ ಬಂದು ವಿದ್ಯಾನಿಧಿ ಯೋಜನೆಯನ್ನು ರಾಹುಲ್ ಗಾಂಧಿ ಘೋಷಿಸಿ ತೆರಳಿದ 24 ಗಂಟೆಯಲ್ಲೇ ಅವರ ಜನಪ್ರಿಯತೆಯನ್ನು ಸಹಿಸದೆ ಬಿಜೆಪಿ ಸರ್ಕಾರ ಅನರ್ಹತೆಗೆ ಮುಂದಾಯಿತು. ಯಾರು ದೂರು ಸಲ್ಲಿಸದೇ ಆಕ್ಷೇಪವನ್ನು ತೆಗೆಯದೆ ಕೇವಲ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಸಂಸತ್ತು ಸ್ಥಾನವನ್ನು ವಜಾ ಮಾಡಿರುವುದು ಇಡೀ ಪ್ರಜಾಪ್ರಭುತ್ವಕ್ಕೆ ದೊಡ್ಡ ಅವಮಾನ. ಇಂತಹ ಸಾಕಷ್ಟು ಸನ್ನಿವೇಶಗಳು ಸೃಷ್ಟಿಯಾಗಿ ಅದು ಬಿಜೆಪಿಗೆ ವ್ಯತಿರಿಕ್ತವಾಗಿ ಪರಿಣಮಿಸಿದ್ದನ್ನು ನೋಡಿದ್ದೇವೆ. ನಮ್ಮ ಮನವಿ ಮೇರೆಗೆ ರಾಹುಲ್​​ ಗಾಂಧಿ ಅವರು ತಮ್ಮ ಕಾರ್ಯಕ್ರಮವನ್ನು ಒಂದು ವಾರ ಮುಂದೂಡಿದ್ದಾರೆ.

ಅವರ ಆಗಮನ ದಿನವೇ ನಾವು ಇಂದಿರಾಗಾಂಧಿ ಜಯಂತಿ ಕಾರ್ಯಕ್ರಮವನ್ನು ಸಹ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ. ರಾಹುಲ್ ಗಾಂಧಿಯವರಿಗೆ ನೀಡಿದ ಶಿಕ್ಷೆ ಸರಿಯಲ್ಲ. ಕೋಲಾರದಲ್ಲಿ ಅಂದು ಸಭೆ ನಡೆಸುವ ಮೂಲಕ ಇಡೀ ರಾಜ್ಯಕ್ಕೆ ಒಂದು ಹೊಸ ಶಕ್ತಿ ಕೊಡುವ ಪ್ರಯತ್ನ ಮಾಡಲಿದ್ದೇವೆ ಎಂದು ವಿವರಿಸಿದ್ದರು. ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ತನ್ನ ಬದ್ಧತೆಯನ್ನು ವ್ಯಕ್ತಪಡಿಸುತ್ತ ಬಂದಿದೆ ಎಂದರು.

ಮೀಸಲಾತಿಯಿಂದ ಹಿಡಿದು ಅವರಿಗೆ ಆರ್ಥಿಕ ನೆರವು ನೀಡುವವರೆಗಿನ ಎಲ್ಲ ಕ್ರಮ ಕಾನೂನನ್ನೇ ತಂದು ಕ್ರಮ ಕೈಗೊಂಡಿದೆ. ಮೀಸಲಾತಿಯನ್ನು ಸಹ ತುಂಬಾ ತಡವಾಗಿ ತಂದು ಕೇಂದ್ರದಲ್ಲಿ 9ನೇ ಶೆಡ್ಯೂಲ್ ಮೂಲಕ ಅನುಮೋದನೆ ಪಡೆಯುವುದಕ್ಕೂ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿಲ್ಲ ಇದರಿಂದ ನಾವು ಈ ಸಮಾಜದ ಮುಖಂಡರಿಗೆ ವಿಶೇಷ ಮನ್ನಣೆ ನೀಡಿ ಅವರಿಗೆ ಟಿಕೆಟ್ ಘೋಷಿಸುತ್ತಿದ್ದೇವೆ.

ಇಂದು ನಾವು ಸುಧಾಂ ದಾಸ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇವೆ. ಇವರ ಜೊತೆ ಒಂದಿಷ್ಟು ಬೆಂಬಲಿಗರು ಸೇರಿದ್ದು ಮುಂಬರುವ ದಿನಗಳಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಈ ಸಮುದಾಯದವರಿಗೆ ಹೆಚ್ಚಿನ ಸ್ಥಾನಮಾನ ಕಲ್ಪಿಸುತ್ತೇವೆ. ಪಕ್ಷದಲ್ಲಿಯೂ ಅವರನ್ನು ಹೆಚ್ಚು ಬಳಕೆ ಮಾಡಿಕೊಳ್ಳಲು ಇಚ್ಚಿಸಿದ್ದೇವೆ. ಈ ವಿಧಾನಸಭೆ ಚುನಾವಣೆಯಲ್ಲಿ ಹಿಂದುಳಿದ ವರ್ಗದವರನ್ನು ಸಕ್ರಿಯವಾಗಿ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇಂದು ನಾವು ವಿಶೇಷ ಕ್ರಮ ಕೈಗೊಂಡಿದ್ದು, ಪ್ರಚಾರ ಸಮಿತಿ ಉಪಾಧ್ಯಕ್ಷರನ್ನಾಗಿ ಸುಧಾಂ ದಾಸರನ್ನು ನೇಮಿಸಿಕೊಂಡಿದ್ದೇವೆ. ಇವರಿಗೆ ಪಕ್ಷದ ಇತರೆ ನಾಯಕರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ವಿವರಿಸಿದ್ದರು.

ಹೆಚ್ ವಿಶ್ವನಾಥ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಮೂರನೇ ಪಟ್ಟಿ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿ, ಪಕ್ಷದಲ್ಲಿ ಹೊಸದಾಗಿ ಸಾಕಷ್ಟು ಮಂದಿ ಸೇರ್ಪಡೆ ಆಗುತ್ತಿದ್ದಾರೆ. ಸಹಜವಾಗಿ ಸಾಕಷ್ಟು ಒತ್ತಡ ನಮ್ಮ ಮೇಲೆ ಇದೆ. ಆದಷ್ಟು ಬೇಗ ಎಲ್ಲವನ್ನೂ ನಿವಾರಿಸಿಕೊಂಡು ಮೂರನೇ ಪಟ್ಟಿ ಬಿಡುಗಡೆ ಮಾಡುತ್ತೇವೆ. ಸೋಮವಾರ ಮಧ್ಯಾಹ್ನದ ನಂತರ ಮಾಜಿ ಸಚಿವ ಹೆಚ್ ವಿಶ್ವನಾಥ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ನಾವು ರಾಹುಲ್ ಗಾಂಧಿ ಆಗಮಿಸಿದ ದಿನದಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಸಹ ಕೈಗೊಂಡಿದ್ದೇವೆ ಎಂದು ಡಿಕೆಶಿ ವಿವರಿಸಿದರು.

ಇದನ್ನೂ ಓದಿ: ಸುದೀಪ್ ಟೀಕಿಸುವ ಮೂಲಕ ಕನ್ನಡಿಗರಿಗೆ ಕಾಂಗ್ರೆಸ್, ಜೆಡಿಎಸ್ ಅಪಮಾನ ಮಾಡಿದೆ: ಗೌರವ್ ಭಾಟಿಯಾ

Last Updated : Apr 8, 2023, 5:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.