ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಮುಚ್ಚಿದ ಲಕೋಟೆಯಲ್ಲಿ ನೀಡಿರುವ ಕೆಲ ಮಾಹಿತಿಗಳು ನಟಿಯರಾದ ಸಂಜನಾ ಹಾಗೂ ರಾಗಿಣಿಗೆ ಮುಳುವಾಗುವ ಸಾಧ್ಯತೆಯಿದೆ.
ಹೈಫೈ ಪಾರ್ಟಿ, ವೀಕೆಂಡ್ ಪಾರ್ಟಿ ಎಂದು ಎಂಜಾಯ್ ಮಾಡುತ್ತಿದ್ದ ನಟಿಮಣಿಯರಿಗೆ ಸದ್ಯ ಯಾವುದೇ ರಾಯಲ್ ಲೈಫ್ ಸೌಲಭ್ಯ ಸಿಗದೇ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗಿದೆ. ಇದರ ನಡುವೆ ಎನ್ಡಿಪಿಎಸ್ ಕಾಯ್ದೆಯಡಿ ಬಂಧನವಾದ ಕಾರಣ ಜೈಲಿನಿಂದ ಜಾಮೀನು ಪಡೆದು ಹೊರಬರಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ಜಾಮೀನು ಕೋರಿ ಸಿಟಿ ಸಿವಿಲ್ ಆವರಣದ ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಕೂಡ ಸಲ್ಲಿಕೆಯಾಗಿದೆ.
ಆದರೆ ನ್ಯಾಯಾಲಯದಲ್ಲಿ ಸಿಸಿಬಿ ಪರ ವಕೀಲರು ಆಕ್ಷೇಪಣೆ ಸಲ್ಲಿಕೆ ಮಾಡಿ ಪ್ರಬಲ ವಾದ ಮಂಡಿಸುತ್ತಿದ್ದಾರೆ. ನಾಳೆ ಆದೇಶ ಹೊರಬೀಳುತ್ತಿದ್ದು, ನ್ಯಾಯಾಧೀಶರು ನೀಡುವ ಆದೇಶದ ಮೇಲೆ ನಟಿಮಣಿಯರ ಭವಿಷ್ಯ ನಿಂತಿದೆ.