ಬೆಂಗಳೂರು: ಡ್ರಗ್ಸ್ ಡೀಲ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿಯ ವೈದ್ಯಕೀಯ ತಪಾಸಣೆಯ ನಂತರ ಸಿಸಿಬಿ ಅಧಿಕಾರಿಗಳು ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ.
ರಾಗಿಣಿ ಬಂಧನಕ್ಕೂ ಮುನ್ನ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ, ನಾಲ್ಕು ಮೊಬೈಲ್ಗಳನ್ನು ಜಪ್ತಿ ಮಾಡಿಕೊಂಡು ಪರಿಶೀಲಿಸಿದಾಗ ವಾಟ್ಸಾಪ್ ಸಂದೇಶ ಹಾಗೂ ಪೋಟೋಗಳು ಡಿಲಿಟ್ ಆಗಿರುವುದು ಕಂಡು ಬಂದಿತ್ತು. ಈ ಸಂಬಂಧ ಸಿಸಿಬಿ ತನಿಖಾಧಿಕಾರಿಗಳು ರಾಗಿಣಿ ಬಳಸುತ್ತಿದ್ದ ಮೊಬೈಲ್ಗಳನ್ನು ರಿಟ್ರೀವ್ ಮಾಡಲು ಎಫ್ಎಸ್ಎಲ್ಗೆ ಕಳುಹಿಸಿದ್ದರು. ಸದ್ಯ ಡಿಲಿಟ್ ಮಾಡಿದ್ದ ವಾಟ್ಸಾಪ್ ಸಂದೇಶಗಳನ್ನು ರಿಟ್ರೀವ್ ಮಾಡಿ ಸಿಸಿಬಿಗೆ ಎಫ್ಎಸ್ಎಲ್ ತಜ್ಞರು ವರದಿ ಸಲ್ಲಿಸಿದ್ದಾರೆ.
ಡಿಲಿಟ್ ಮಾಡಿರುವ ಎಲ್ಲಾ ಮೆಸೇಜ್ಗಳು ಸಿಸಿಬಿಗೆ ಲಭ್ಯವಾಗಿದ್ದು, ಟೆಕ್ನಿಕಲ್ ಸಾಕ್ಯ್ಯಾಧಾರಗಳ ಮೇಲೆ ರಾಗಿಣಿಯನ್ನು ವಿಚಾರಣೆ ನಡೆಸಲಿದ್ದಾರೆ.
ನಟಿ ರಾಗಿಯ ವಿಚಾರಣೆ ಹೇಗಿರುತ್ತೆ ಗೊತ್ತಾ..?
ಡಿಲಿಟ್ ಮಾಡಿ ರಿಟ್ರೀವ್ ಮಾಡಿದ ಎಲ್ಲಾ ಮೆಸೇಜ್ಗಳನ್ನ ಜೆರಾಕ್ಸ್ ತೆಗೆದುಕೊಳ್ಳಲಿದ್ದಾರೆ. ಜೆರಾಕ್ಸ್ ಕಾಪಿಯೊಂದನ್ನು ನಟಿ ರಾಗಿಣಿಗೆ ಕೊಟ್ಟು ಓದುವಂತೆ ಸಮಯ ನೀಡಲಿದ್ದಾರೆ. ನಟಿ ರಾಗಿಣಿ ಮೆಸೇಜ್ಗಳನ್ನು ಓದಿ, ಓಕೆ ಅಂದ ಬಳಿಕ ಪ್ರಶ್ನೆ ಕೇಳಲು ಸಿದ್ಧತೆ ನಡೆಸುವ ಸಾಧ್ಯತೆ ಇದೆ.
ನಾಲ್ಕು ಮೊಬೈಲ್ಗಳ ಪೈಕಿ ಒಂದು ಮೊಬೈಲ್ನಲ್ಲಿರುವ ವಾಟ್ಸಾಪ್ ಅನ್ನೇ ಪೂರ್ಣವಾಗಿ ಡಿಲಿಟ್ ಮಾಡಿರುವ ಸಾಧ್ಯತೆಯಿದೆ. ಬಹುತೇಕ ಅದೇ ವಾಟ್ಸಾಪ್ ಮೂಲಕ ಪಾರ್ಟಿಗಳ ಬಗ್ಗೆ ಚರ್ಚೆ ನಡೆದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಅಲ್ಲದೆ ಹಲವರ ಜೊತೆ ರಾಗಿಣಿ ಪಾರ್ಟಿಗಳಲ್ಲಿ ತೆಗೆದುಕೊಂಡ ಪೋಟೋಗಳ ಜೊತೆಗೆ ಕೆಲವು ಪಾರ್ಟಿ ನಡೆದ ಜಾಗದ ಲೋಕೇಶನ್ಗಳನ್ನೂ ರಿಟ್ರೀವ್ ಮಾಡಿದ್ದಾರೆ. ಸದ್ಯ ಈ ಎಲ್ಲಾ ಪಾಯಿಂಟ್ಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.