ETV Bharat / state

ಬಚ್ಚೇಗೌಡ ಸಂಪರ್ಕಕ್ಕೆ ಸಿಗುತ್ತಿಲ್ಲ.. ಪಕ್ಷ ವಿರುದ್ಧ ಹೋದ್ರೆ ಕ್ರಮ.. ಸಚಿವ ಆರ್.ಅಶೋಕ್

author img

By

Published : Nov 16, 2019, 8:02 PM IST

ಹೊಸಕೋಟೆ ವಿಧಾನಸಭೆ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಶರತ್ ಬಚ್ಚೇಗೌಡ ಅವರ ತಂದೆ ಸಂಸದ ಬಚ್ಚೇಗೌಡರು ತಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಆರ್.ಅಶೋಕ್

ಬೆಂಗಳೂರು: ನಾಮಪತ್ರ ವಾಪಸ್​ ಪಡೆಯುವ ತನಕ ಶರತ್​ಗೆ ಗಡುವು ಇದೆ. ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಮುಕ್ತಾಯದ ಬಳಿಕ ಕ್ರಮ ಗ್ಯಾರಂಟಿ ಎಂದು ಸಚಿವ ಆರ್‌.ಅಶೋಕ್ ಮತ್ತೆ ಎಚ್ಚರಿಕೆ ನೀಡಿದ್ದಾರೆ.

ಆರ್.ಅಶೋಕ್, ಸಚಿವ

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂಸದ ಬಚ್ಚೇಗೌಡರು ತಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಶರತ್ ಬಚ್ಚೇಗೌಡರ ನಾಮಪತ್ರ ಸಲ್ಲಿಕೆ ವೇಳೆಯೂ ಬಚ್ಚೇಗೌಡರ ಪತ್ನಿ ಭಾಗವಹಿಸಿದ್ದರು. ಇದೆಲ್ಲವನ್ನ ಗಮನಿಸಲಾಗಿದೆ. ಈ ಬಗ್ಗೆ ಎಲ್ಲರ ಮೇಲೂ ಕ್ರಮ ಕೈಗೊಳ್ಳಬೇಕಾ ಎಂಬ ಬಗ್ಗೆ ಪಕ್ಷ ನಿರ್ಧರಿಸುತ್ತದೆ‌ ಎಂದು ತಿಳಿಸಿದ್ದಾರೆ.

ಈಗಾಗಲೇ ಶರತ್ ಬಚ್ಚೇಗೌಡ ಜೊತೆ ಸಿಎಂ ಹಾಗೂ ನಾನು ಹಲವು ಬಾರಿ ಮಾತನಾಡಿದ್ದೇವೆ. ಈಗ ಅವರು ಏನೂ ಮಾತನಾಡುವುದು ಸರಿಯಲ್ಲ. ಹೊಸಕೋಟೆಗೆ ಸೋಮವಾರ ಹೋಗುತ್ತೇನೆ. ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆಲ್ಲ ಕ್ರಮ ಗ್ಯಾರಂಟಿ. ಪಕ್ಷಕ್ಕೆ ನಿಷ್ಟರಾಗಿದ್ದರೆ ನಾಮಪತ್ರ ವಾಪಸ್ ಪಡೆಯಬೇಕು. ಇಲ್ಲವಾದರೆ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.

ಯಶವಂತಪುರದಲ್ಲಿ ಜಗ್ಗೇಶ್ ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲ. ಯಶವಂತಪುರದಲ್ಲಿ ಜೆಡಿಎಸ್​ನ ನಾಯಕರು ದೊಡ್ಡ ಸಂಖ್ಯೆಯಲ್ಲಿ ಪಕ್ಷಕ್ಕೆ ಬರೋರು ಇದ್ದಾರೆ. ಬೇರೆ ಪಕ್ಷದ ಪ್ರಮುಖ ನಾಯಕರು ಭೇಟಿ ಮಾಡುವವರು ಇದ್ದಾರೆ. ನಾಳೆ ಆದರೆ ಸಿಎಂ ಭೇಟಿಯಾಗಿಸಿ ಪಕ್ಷ ಸೇರ್ಪಡೆ ಮಾಡಿಸುತ್ತೇನೆ ಎಂದು ತಿಳಿಸಿದರು.

ಹೊಸಕೋಟೆ ಬಿಟ್ಟರೆ ಬೇರೆ ಕ್ಷೇತ್ರದಲ್ಲಿ ಯಾವುದೇ ತೊಂದರೆ ಇಲ್ಲ. ಕೆಆರ್‌ಪುರಂ, ಯಶವಂತಪುರದಲ್ಲಿ 50 ಸಾವಿರಕ್ಕಿಂತ ಹೆಚ್ಚು ಲೀಡ್​ನಲ್ಲಿ ಗೆಲ್ಲುತ್ತೇವೆ. ಹಿಂದಿನ ಸರ್ಕಾರ ಜಗಳದ ಸರ್ಕಾರ. ಈ ಬಾರಿ ಉಪಚುನಾವಣೆಯಲ್ಲಿ 15 ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು.

Intro:Body:ಸಂಸದ ಬಚ್ಚೇಗೌಡರೂ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ; ಪಕ್ಷ ವಿರೋಧಿಸಿದರೆ ಕ್ರಮ: ಆರ್.ಅಶೋಕ್

ಬೆಂಗಳೂರು: ನಾಮಪತ್ರ ವಾಪಸು ಪಡೆಯುವ ತನಕ ಶರತ್ ಗೆ ಗಡುವು ಇದೆ. ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಮುಕ್ತಾಯ ಬಳಿಕ ಕ್ರಮ ಗ್ಯಾರಂಟಿ ಎಂದು ಸಚಿವ ಆರ್‌.ಅಶೋಕ್ ಮತ್ತೆ ಎಚ್ಚರಿಕೆ ನೀಡಿದರು.

ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾತನಾಡಿದ ಅವರು, ಸಂಸದ ಬಚ್ಚೇಗೌಡರು ಸಹ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಶರತ್ ಬಚ್ಚೇಗೌಡರ ನಾಮಪತ್ರ ಸಲ್ಲಿಕೆ ವೇಳೆಯೂ ಬಚ್ಚೇಗೌಡರ ಪತ್ನಿ ಭಾಗವಹಿಸಿದ್ದರು. ಇದೆಲ್ಲವನ್ನೂ ಗಮನಿಸಲಾಗಿದೆ. ಈ ಬಗ್ಗೆ ಎಲ್ಲರ ಮೇಲೂ ಕ್ರಮ ಕೈಗೊಳ್ಳಬೇಕಾ ಎಂಬ ಬಗ್ಗೆ ಪಕ್ಷ ನಿರ್ಧರಿಸುತ್ತದೆ‌ ಎಂದು ಇದೇ ವೇಳೆ ತಿಳಿಸಿದರು.

ಈಗಾಗಲೇ ಶರತ್ ಬಚ್ಚೇಗೌಡರ ಜತೆ ಸಿಎಂ ಹಾಗೂ ನಾನು ಹಲವು ಬಾರಿ ಮಾತನಾಡಿದ್ದೇವೆ. ಈಗ ಅವರು ಏನೇನು ಮಾತನಾಡುವುದು ಸರಿಯಲ್ಲ. ಹೊಸಕೋಟೆ ಗೆ ಸೋಮವಾರ ಹೋಗುತ್ತೇನೆ. ಪಕ್ಷ ವಿರೋಧಿ ಮಾಡೋರಿಗೆಲ್ಲ ಕ್ರಮ ಗ್ಯಾರಂಟಿ. ಪಕ್ಷಕ್ಕೆ ನಿಷ್ಟರಾಗಿದ್ರೆ ನಾಮಪತ್ರ ವಾಪಸ್ ಪಡೆಯಬೇಕು. ಇಲ್ಲವಾದ್ರೆ ಕ್ರಮ ಕೈಗೊಳ್ಳುತ್ತೇವೆ. ಜೆಡಿಎಸ್ ಗೆ15 ಕ್ಷೇತ್ರದಲ್ಲಿ ಗೊಂದಲ ಇದೆ. ಜೆಡಿಎಸ್ ಗೆ 15 ಕ್ಷೇತ್ರಗಳಲ್ಲಿ 15 ಗೊಂದಲ ಇದೆ ಎಂದು ಇದೇ ವೇಳೆ ಕಿಡಿ ಕಾರಿದರು.

ಯಶವಂತಪುರದಲ್ಲಿ ಜಗ್ಗೇಶ್ ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲ. ಯಶವಂತಪುರದಲ್ಲಿ ಜೆಡಿಎಸ್ ನ ನಾಯಕರು ದೊಡ್ಡ ಸಂಖ್ಯೆಯಲ್ಲಿ ಪಕ್ಷಕ್ಕೆ ಬರೋರು ಇದ್ದಾರೆ. ಇಂದು ಬೇರೆ ಪಕ್ಷದ ಪ್ರಮುಖ ನಾಯಕರು ಭೇಟಿ ಮಾಡುವವರು ಇದ್ದಾರೆ. ನಾಳೆ ಆದರೆ ಸಿಎಂ ಭೇಟಿಯಾಗಿಸಿ ಪಕ್ಷ ಸೇರ್ಪಡೆ ಮಾಡಿಸುತ್ತೇನೆ ಎಂದು ತಿಳಿಸಿದರು.

ಹೊಸಕೋಟೆ ಬಿಟ್ಟರೆ ಬೇರೆ ಕ್ಷೇತ್ರದಲ್ಲಿ ಯಾವುದೇ ತೊಂದರೆ ಇಲ್ಲ. ಕೆ.ಆರ್.ಪುರಂ, ಯಶವಂತಪುರದಲ್ಲಿ 50 ಸಾವಿರಕ್ಕಿಂತ ಹೆಚ್ಚು ಲೀಡ್ ನಲ್ಲಿ ಗೆಲ್ಲುತ್ತೇವೆ. ಹಿಂದಿನ ಸರ್ಕಾರ ಜಗಳದ ಸರ್ಕಾರ. ಈ ಬಾರಿ ಉಪಚುನಾವಣೆಯಲ್ಲಿ 15 ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.