ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವಾಗ ಎಸಿಬಿ ಜಾರಿಗೆ ತಂದಿದ್ದರು. ಹಾಗಾಗಿ, ಬಿಜೆಪಿಗೆ ಯಾವುದೇ ಹಿನ್ನಡೆ ಆಗಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಆರಗ ಜ್ಞಾನೇಂದ್ರ ಇದೇ ವಿಚಾರವಾಗಿ ಮಾತನಾಡಿ, ಹೈಕೋರ್ಟ್ ಎಸಿಬಿ ರದ್ದು ಮಾಡಿರುವುದು ಹಾಗೂ ಲೋಕಾಯುಕ್ತಕ್ಕೆ ಅಧಿಕಾರ ಕೊಟ್ಟಿರೋದನ್ನು ಗಮನಿಸಿದ್ದೇನೆ. ಈ ಬಗ್ಗೆ ಸಿಎಂ ಪರಿಶೀಲನೆ ನಡೆಸುತ್ತಾರೆ. ಇಂದು ಕ್ಯಾಬಿನೆಟ್ನಲ್ಲಿ ಕೂಡ ಇದರ ಬಗ್ಗೆ ಚರ್ಚೆ ನಡೆಯಬಹುದು ಎಂದು ಹೇಳಿದರು.
ಕೊಪ್ಪಳದಲ್ಲಿ ನಡೆದ ಘಟನೆ ಕುರಿತು ಮಾತನಾಡಿದ ಸಚಿವರು, ಈಗಾಗಲೇ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ನಡೆಯುತ್ತಿದೆ ಎಂದರು. ಪ್ರವೀಣ್ ನೆಟ್ಟಾರು ಹತ್ಯೆ ಕುರಿತು ಪ್ರಕರಣದ ತನಿಖೆಗೆ ಎನ್ಐಎ ಬಂದಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ ಮೂವರ ಬಂಧನವೂ ಆಗಿದೆ. ಆರೋಪಿಗಳು ಪದೇ ಪದೇ ಜಾಗ ಬದಲಿಸುತ್ತಿದ್ದರು ಎಂದು ಮಾಹಿತಿ ನೀಡಿದರು.
ಶಿವಮೊಗ್ಗ ಸುಬ್ಬಣರ ಅಂತ್ಯಸಂಸ್ಕಾರ: ಖ್ಯಾತ ಸುಗಮ ಸಂಗೀತಗಾರ ಶಿವಮೊಗ್ಗ ಸುಬ್ಬಣ್ಣ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಲಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು. ಸುಬ್ಬಣ್ಣ ಅವರ ಕಾಡು ಕುದುರೆ ಓಡಿಬಂದಿತ್ತಾ ಹಾಡು ಜನಪ್ರಿಯವಾಗಿದೆ. ಅವರು ಸಂಗೀತಕ್ಕೆ ವಿಶೇಷ ಒತ್ತು ಕೊಟ್ಟವರು. ಹೈಕೋರ್ಟ್ನಲ್ಲಿ ವಕೀಲರಾಗಿದ್ದ ಸುಬ್ಬಣ್ಣ, ಜಾನಪದ ಹಾಡುಗಳಿಗೆ ಮೇರು ವ್ಯಕ್ತಿತ್ವ ಕೊಟ್ಟವರು ಎಂದು ಸ್ಮರಿಸಿದರು.
ಇದನ್ನೂ ಓದಿ:ಎಸಿಬಿ ರದ್ದು.. ಸಂಪುಟ ಸಭೆಯಲ್ಲಿ ಚರ್ಚೆ: ಸಿಎಂ ಬಸವರಾಜ ಬೊಮ್ಮಾಯಿ