ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎನ್ನುವುದಕ್ಕೆ ಸಚಿವ ಎಂ ಟಿ ಬಿ ನಾಗರಾಜ್ ಹೇಳಿಕೆಗಿಂತಲೂ ದೊಡ್ಡ ಸಾಕ್ಷಿ ಇನ್ನೇನು ಬೇಕು ಎಂದು ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಪ್ರಶ್ನಿಸಿದೆ.
ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 40% ಸರ್ಕಾರದಲ್ಲಿ ಎಲ್ಲವೂ ಪೇಮೆಂಟ್ ವ್ಯವಹಾರವೇ. ಪಿಎಸ್ಐ ನೇಮಕಾತಿಯಲ್ಲಿ, ಪೊಲೀಸರ ವರ್ಗಾವಣೆಯಲ್ಲಿ 70, 80 ಲಕ್ಷ ವ್ಯವಹಾರ ನಡೆದಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಒಪ್ಪಿಕೊಂಡಿದ್ದಾರೆ. ಇತ್ತ ಸರ್ಕಾರ ಪತ್ರಕರ್ತರಿಗೆ ಲಂಚ ನೀಡುತ್ತದೆ. ಪೇ ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಮುಗಿಲು ಮುಟ್ಟಿದ ಭ್ರಷ್ಟಾಚಾರಕ್ಕೆ ಇನ್ಯಾವ ಸಾಕ್ಷಿ ಬೇಕು. ಸೆ ಸಿಎಂ ಎಂದು ಒತ್ತಾಯಿಸಿದೆ.
ಪೊಲೀಸ್ ವರ್ಗಾವಣೆ ದಂದೆಯ ಕರಾಳ ಮುಖವಾಡವನ್ನು ಸ್ವತಃ ಎಂ ಟಿ ಬಿ ನಾಗರಾಜ್ ಒಪ್ಪಿಕೊಳ್ಳುವ ಮೂಲಕ ಬಯಲು ಮಾಡಿದ್ದಾರೆ. ಒಂದು ಪೋಲಿಸ್ ಇನ್ಸ್ಪೆಕ್ಟರ್ ಪೋಸ್ಟಿಂಗ್ಗೆ 70-80 ಲಕ್ಷ. ಇಂತಹ ಭ್ರಷ್ಟಾಚಾರದಿಂದ ಇನ್ನೆಷ್ಟು ಅಮಾಯಕರ ಬಲಿ ಪಡೆಯಬೇಕೋ ಈ 40 ಪರ್ಸೆಂಟ್ ಸರ್ಕಾರ. ಇದನ್ನು ತನಿಖೆ ಮಾಡಲು ತಾಕತ್ ಧಮ್ ಇದೆಯೇ ಪೇ-ಸಿಎಂ ಅವರೇ ಎಂದು ಪ್ರಶ್ನೆ ಮಾಡಿದೆ.
ಪಿಎಸ್‌ಐ ಅಕ್ರಮ, ಬೋರ್ ವೆಲ್ ಅಕ್ರಮ, ಕೆಪಿಟಿಸಿಎಲ್ ನೇಮಕಾತಿ ಅಕ್ರಮ, ಗಂಗಾ ಕಲ್ಯಾಣ ಹಗರಣ ನಡೆದಾಗ ಕಾಂಗ್ರೆಸ್‌ನದ್ದು ಗಾಳಿಯಲ್ಲಿ ಗುಂಡು ಎಂದಿತ್ತು ರಾಜ್ಯ ಬಿಜೆಪಿ. ನಂತರ ಎಲ್ಲದರ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಈಗ ಇದೂ ಬಯಲಾಗಲಿದೆ. ಗುಂಡು ಗಾಳಿಯನ್ನೇ ಸೀಳಿಕೊಂಡು ಮುನ್ನುಗ್ಗುತ್ತದೆ ನೆನಪಿರಲಿ ಎಂದು ಎಚ್ಚರಿಸಿದೆ.
ಇದನ್ನೂ ಓದಿ: ಸಿಎಂ ಗಮನಕ್ಕೆ ಬಾರದೆ ಪತ್ರಕರ್ತರ ಕೈ ಸೇರಿದ ಹಣ ಯಾರದ್ದು?: ಎಂ ಬಿ ಪಾಟೀಲ್