ETV Bharat / state

ಶ್ರೀನಿ 'ಓಲ್ಡ್​ ಮಾಂಕ್​​​'ಗೆ ಪವರ್​​ ತುಂಬಿದ ಪುನೀತ್​​​ ರಾಜ್​ಕುಮಾರ್​... ಟ್ರೈಲರ್​ ರಿಲೀಸ್​​​

author img

By

Published : Aug 26, 2021, 11:00 PM IST

ಓಲ್ಡ್ ಮಾಂಕ್ ಎಂದರೇ ಹಳೇ ಸನ್ಯಾಸಿ ಎಂದರ್ಥ, ಈ ಸಿನಿಮಾನದಲ್ಲಿ ಬ್ರಹ್ಮಾಚಾರಿಯೊಬ್ಬನ ಕಥೆ ಇದೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಓಲ್ಡ್ ಮಾಂಕ್ ಸಿನಿಮಾದ ಟ್ರೈಲರ್​ನ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅನಾವರಣ ಮಾಡಿದರು.

puneeth rajkumar released old monk film trailer
ಒಲ್ಡ್​ ಮಾಂಕ್

ಸ್ಯಾಂಡಲ್​​ವುಡ್​ನಲ್ಲಿ 'ಶ್ರೀನಿವಾಸ ಕಲ್ಯಾಣ', 'ಬೀರ್​ಬಲ್' ಅಂತಹ ವಿಶಿಷ್ಟ ಸಿನಿಮಾಗಳನ್ನ ನಿರ್ದೇಶನ ಮಾಡಿ, ನಾಯಕನಾಗಿ ಗಮನ ಸೆಳೆದ ನಟ ಶ್ರೀನಿವಾಸ್ 'ಶ್ರೀನಿ' ಸದ್ಯ 'ಓಲ್ಡ್ ಮಾಂಕ್' ವಿಶಿಷ್ಟ ಟೈಟಲ್​ ಇಟ್ಕೊಂಡು ಸಿನಿಮಾ ಮಾಡ್ತೀರುವ ವಿಚಾರ ಎಲ್ಲರಿಗೂ ಗೊತ್ತಿದೆ. ಸದ್ಯ ಒಲ್ಡ್​ ಮಾಂಕ್​ ಸಿನಿಮಾಗೆ ಪವರ್​ ಸ್ಟಾರ್​​ ಪುನೀತ್​ ರಾಜ್​ಕುಮಾರ ಸಾಥ್​ ನೀಡಿದ್ದು, ಚಿತ್ರದ ಟ್ರೈಲರ್​ ಬಿಡುಗಡೆ ಮಾಡಿದ್ದಾರೆ. ಇದರ ವೀಕ್ಷಣೆ ಮಾಡಿರುವ ಪವರ್​ ಸ್ಟಾರ್​ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.

ಶ್ರೀನಿ 'ಒಲ್ಡ್​ ಮಾಂಕ್​​​'ಗೆ ಪವರ್​​ ತುಂಬಿದ ಪುನೀತ್​​​ ರಾಜ್​ಕುಮಾರ್​..!

ಚಿತ್ರದಲ್ಲಿ ಬ್ರಹ್ಮಚಾರಿಯಾಗಿ ಕಾಣಿಸಿಕೊಂಡಿರುವ ಶ್ರೀನಿ ಜೋಡಿಯಾಗಿ ಅದಿತಿ ಪ್ರಭುದೇವ್ ಆಕ್ಟ್​ ಮಾಡಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್, ಅರುಣಾ ಬಾಲರಾಜ್ , ಸಿಹಿಕಹಿ ಚಂದ್ರು, ಸುಜಯ್ ಶಾಸ್ತ್ರಿ, ಎಕ್ಸ್​​ಕ್ಯೂಜ್ ಮಿ ಖ್ಯಾತಿಯ ಸುನೀಲ್ ಸೇರಿದಂತೆ ಸಾಕಷ್ಟು ಕಲಾವಿದರು ನಟನೆ ಮಾಡಿದ್ದಾರೆ.

ಶ್ರೀನಿ 'ಒಲ್ಡ್​ ಮಾಂಕ್​​​' ಮಾತು

ಪುರಾಣಗಳಲ್ಲಿ ಕೇಳಿ ಬರುವ ಬಾಲ ಬ್ರಹ್ಮಚಾರಿ ಕಥೆಯೆ ಚಿತ್ರದ ಮೂಲ. ಸದ್ಯ ಅದಕ್ಕೆ ಮಾಡರ್ನ್​​ ಲುಕ್ ನೀಡಲಾಗಿದೆ. ಸಮಾಜದಲ್ಲಿ ಸನ್ಯಾಸಿಯೊಬ್ಬರ ಬಗ್ಗೆ ಉಂಟಾಗುವ ಗಾಸಿಪ್​ ಜೊತೆಗೆ ಆತ ಹೇಗೆ ಪ್ರೀತಿಯಲ್ಲಿ ಬೀಳುತ್ತಾನೆ ಎಂಬುದೇ ಚಿತ್ರದ ಸ್ವಾರಸ್ಯಕರ​ ಮ್ಯಾಟರ್​​.

ಭರತ್ ಪರಶುರಾಮ್ ಈ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿದ್ದು, ಯುವ ಸಂಗೀತಗಾರದ ಸೌರಬ್, ವೈಭವ್ ಸಂಗೀತ ನೀಡಿದ್ದಾರೆ. 'ಓಲ್ಡ್ ಮಾಂಕ್' ಸಿನಿಮಾದ‌ ಕಥೆಯನ್ನ ಶೃತಿ, ನಂದಕುಮಾರ್ ಹಾಗೂ ಪ್ರಸನ್ನ ಜೊತೆಗೆ ಶ್ರೀನಿ ಬರೆದು ನಿರ್ದೇಶನ ಮಾಡಿದ್ದಾರೆ. 'ಶ್ರೀನಿವಾಸ ಕಲ್ಯಾಣ', 'ಬೀರ್​ಬಲ್' ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಪ್ರಸನ್ನ, ಈ ಓಲ್ಡ್ ಮಾಂಕ್ ಸಿನಿಮಾಗೆ ಡೈಲಾಗ್ ಬರೆದಿದ್ದಾರೆ. ಸದ್ಯ ಓಲ್ಡ್ ಮಾಂಕ್ ಸಿನಿಮಾದ ಟ್ರೈಲರ್​​ ಬಿಡುಗಡೆ ಆಗಿದ್ದು, ಕೊರೊನಾ ಕಡಿಮೆ ಆದ್ಮಲೇ ಸಿನಿಮಾವನ್ನ ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.