ಬೆಂಗಳೂರು: ರಾಜರತ್ನ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಕರ್ನಾಟಕ ಸರ್ಕಾರ ಗೌರವಿಸಿತು. ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು. ಆ ಮೂಲಕ ಅಭಿಮಾನಿಗಳ ನೆಚ್ಚಿನ ನಟ ಅಪ್ಪು ಕರ್ನಾಟಕ ರತ್ನರಾದರು.
ಧಾರಾಕಾರ ಮಳೆಯಲ್ಲಿ ವಿಧಾನಸೌಧ ಮುಂಭಾಗದಲ್ಲಿ ನಡೆದ ಕರ್ನಾಟಕದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕರ್ನಾಟಕ ಸರ್ಕಾರ, ಖ್ಯಾತ ನಟ ರಜನೀಕಾಂತ್, ಜೂ ಎನ್ಟಿಆರ್, ಸುಧಾಮೂರ್ತಿ ಹಾಗೂ ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು. ಕಾರ್ಯಕ್ರಮದಲ್ಲಿ ರಾಜಕುಮಾರ್ ಅವರ ಎಲ್ಲ ಕುಟುಂಬಸ್ಥರು ಕೂಡ ಹಾಜರಿದ್ದರು.
ಮತ್ತೊಮ್ಮೆ ಹುಟ್ಟಿ ಬಾ ಅಪ್ಪು: ಇದೇ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಿಮ್ಮ ಅಭಿಮಾನಿಗಳು ಎಷ್ಟು ಗಟ್ಟಿಯಾಗಿ ನಿಂತಿದ್ದಾರೆ. ಅಭಿಮಾನದ ಸಾಗರ ಹರಿದಿದೆ. ಈ ಪ್ರೀತಿ ವಿಶ್ವಾಸ ಇಲ್ಲಿದೆ. ಪುನೀತ್ ಮತ್ತೊಮ್ಮೆ ಹುಟ್ಟಿ ಬಾ ಎಂದು ಆಶಿಸಿದರು. ಅಪ್ಪು ಎಲ್ಲರ ಮನದಲ್ಲಿ ಇದ್ದಾರೆ. ಅಪ್ಪು ಕರ್ನಾಟಕ ರತ್ನರಾಗಿದ್ದಾರೆ, ಧ್ರುವ ತಾರೆಯಾಗಿ ನಮ್ಮೆಲ್ಲರಿಗೂ ಶುಭ ಕೋರಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಜ್ ಕುಮಾರ್ ಕುಟುಂಬ ಬಂದು ಕರ್ನಾಟಕ ರತ್ನ ಪ್ರಶಸ್ತಿ ಸ್ವೀಕಾರ ಮಾಡಿದ್ದಕ್ಕೆ ಧನ್ಯವಾದಗಳು ಎಂದರು.
-
ಇಂದಿನಿಂದ ನಮ್ಮ ಅಪ್ಪು "ಕರ್ನಾಟಕ ರತ್ನ" #PuneetRajkumar #ಕರ್ನಾಟಕರತ್ನ pic.twitter.com/FkVpZAiqMh
— Basavaraj S Bommai (@BSBommai) November 1, 2022 " class="align-text-top noRightClick twitterSection" data="
">ಇಂದಿನಿಂದ ನಮ್ಮ ಅಪ್ಪು "ಕರ್ನಾಟಕ ರತ್ನ" #PuneetRajkumar #ಕರ್ನಾಟಕರತ್ನ pic.twitter.com/FkVpZAiqMh
— Basavaraj S Bommai (@BSBommai) November 1, 2022ಇಂದಿನಿಂದ ನಮ್ಮ ಅಪ್ಪು "ಕರ್ನಾಟಕ ರತ್ನ" #PuneetRajkumar #ಕರ್ನಾಟಕರತ್ನ pic.twitter.com/FkVpZAiqMh
— Basavaraj S Bommai (@BSBommai) November 1, 2022
ದೇವರು ದೊಡ್ಡ ಪ್ರಮಾಣದಲ್ಲಿ ಆಶೀರ್ವಾದ ಮಾಡಿದ್ದಾರೆ. ಇದು ಕರ್ನಾಟಕ ಹೆಮ್ಮೆ ಪಡುವ, ನೀವೆಲ್ಲರೂ ಹೆಮ್ಮೆ ಪಡುವ ವಿಚಾರ. ಇದು ನಮ್ಮ ಸರ್ಕಾರದ ಪುಣ್ಯ ಭಾಗ್ಯವಾಗಿದೆ. ಅಪ್ಪು ಕರ್ನಾಟಕದ ಪ್ರತಿ ಗ್ರಾಮದಲ್ಲಿ ಇದ್ದಾರೆ, ಕಣ ಕಣದಲ್ಲಿ ಇದ್ದಾರೆ. ಕರ್ನಾಟಕ ರತ್ನ ನೀಡಿ ನಾವೆಲ್ಲರೂ ಧನ್ಯರಾಗಿದ್ದೇವೆ. ಅಪ್ಪು ಕನ್ನಡ ನಾಡಿನಲ್ಲಿ ಮತ್ತೆ ಹುಟ್ಟಿ ಬನ್ನಿ ಎಂದು ಪುನರುಚ್ಚರಿಸಿದರು
ಇದೇ ವೇಳೆ ಪ್ರಶಸ್ತಿ ಸ್ವೀಕರಿಸಿದ ಅಶ್ಚಿನಿ ಪುನೀತ್ ರಾಜಕುಮಾರ್ ರಾಜ್ಯ ಸರ್ಕಾರ ಹಾಗೂ ರಾಜ್ಯದ ಜನರಿಗೆ ಧನ್ಯವಾದ ತಿಳಿಸಿದರು. ನಟ ಶಿವರಾಜಕುಮಾರ್ ಸಹ ರಾಜ್ಯದ ಜನರ ಅಭಿಮಾನ ಹಾಗೂ ರಾಜ್ಯ ಸರ್ಕಾರದ ಕ್ರಮಕ್ಕೆ ಅಭಿನಂದನೆ ಹೇಳಿದರು.
(ಓದಿ: ಕರ್ನಾಟಕ ರತ್ನ ಅಪ್ಪು ದೇವರ ಮಗ, ಅವರ ನೆನಪು ನಿರಂತರ: ಸೂಪರ್ಸ್ಟಾರ್ ರಜನಿಕಾಂತ್)