ಬೆಂಗಳೂರು: ರಾತ್ರಿಯೆಲ್ಲಾ ಓದುವಾಗ ನನ್ನ ಅಮ್ಮ ಜೊತೆಗೆ ಇದ್ದು ಧೈರ್ಯ ತುಂಬುತ್ತಿದ್ದರು. ಅವರ ಸಹಕಾರ ಇಲ್ಲದೆ ಇದ್ದಿದ್ದರೆ ನಾನು ಟಾಪರ್ ಆಗಲು ಸಾಧ್ಯವಾಗುತ್ತಿರಲಿಲ್ಲ ಎಂದು ವಿಜ್ಞಾನ ವಿಭಾಗದಲ್ಲಿ ಟಾಪರ್ ಆಗಿರುವ ಪ್ರೇರಣಾ ಹೇಳಿದ್ದಾರೆ.
ಟಾಪರ್ ಬರುವ ಕನಸು ಎಂದೂ ಕಂಡಿರಲಿಲ್ಲ. ಆದರೆ ಒಳ್ಳೆಯ ಅಂಕ ಗಳಿಸುವೆ ಎಂಬ ನಂಬಿಕೆ ಇತ್ತು. ಈಗ ರಾಜ್ಯಕ್ಕೆ ಟಾಪರ್ ಆಗಿರುವುದು ಖುಷಿ ನೀಡಿದೆ ಎಂದಿದ್ದಾರೆ.
ನಗರದ ಶ್ರೀರಾಂಪುರ ನಿವಾಸಿಯಾಗಿರುವ ಪ್ರೇರಣಾ, ಮಲ್ಲೇಶ್ವರಂನ ವಿದ್ಯಾಮಂದಿರ ಕಾಲೇಜಿನ ವಿದ್ಯಾರ್ಥಿನಿ. ಈ ಬಾರಿ ವಿಜ್ಞಾನ ವಿಭಾಗದಲ್ಲಿ ಫಸ್ಟ್ ರ‍್ಯಾಂಕ್ ಪಡೆದಿದ್ದಾರೆ.
ಪ್ರೇರಣಾ 600ಕ್ಕೆ 596 ಅಂಕ ಪಡೆದಿದ್ದಾರೆ. ಸಂಸ್ಕೃತ 100ಕ್ಕೆ 100, ಇಂಗ್ಲಿಷ್ 97, ಗಣಿತ 99, ರಾಸಾಯನ ಶಾಸ್ತ್ರ 100, ಜೀವಶಾಸ್ತ್ರ 100, ಭೌತಶಾಸ್ತ್ರ 100 ಅಂಕ ಗಳಿಸಿದ್ದಾರೆ. ಮನೆಯವರು ಹಾಗೂ ಶಿಕ್ಷಕರಿಗೆ ಧನ್ಯವಾದ ಹೇಳಿದ್ದಾರೆ.