ETV Bharat / state

ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಸಿಇಟಿ ಅಂಕ ಮಾತ್ರ ಪರಿಗಣನೆ: ಡಿಸಿಎಂ ಅಶ್ವತ್ಥ ನಾರಾಯಣ - ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಸಿಇಟಿ ಅಂಕ ಮಾತ್ರ ಪರಿಗಣನೆ

ಸಿಇಟಿ ಪರೀಕ್ಷೆಯನ್ನು ರಾಜ್ಯಾದ್ಯಂತ ಸುಮಾರು 500ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಆಗಸ್ಟ್ 28, 29 ಹಾಗೂ 30ರಂದು ನಡೆಸಲಾಗುವುದು. ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಪಿಯುಸಿ ಮಾರ್ಕ್ಸ್ ಈ ಬಾರಿ ಪರಿಗಣಿಸಲ್ಲ. ಕೇವಲ ಸಿಇಟಿ ಅಂಕ ಮಾತ್ರ ಪರಿಗಣಿಸಲು ನಿರ್ಧರಿಸಲಾಗಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಡಿಸಿಎಂ ಅಶ್ವತ್ಥ ನಾರಾಯಣ
ಡಿಸಿಎಂ ಅಶ್ವತ್ಥ ನಾರಾಯಣ
author img

By

Published : Jun 8, 2021, 12:58 PM IST

Updated : Jun 8, 2021, 2:27 PM IST

ಬೆಂಗಳೂರು: ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಪಿಯುಸಿ ಮಾರ್ಕ್ಸ್ ಈ ಬಾರಿ ಪರಿಗಣಿಸಲ್ಲ. ಕೇವಲ ಸಿಇಟಿ ಅಂಕ ಮಾತ್ರ ಪರಿಗಣಿಸಲು ನಿರ್ಧರಿಸಲಾಗಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಡಿಸಿಎಂ ಅಶ್ವತ್ಥ ನಾರಾಯಣ

ವಿಕಾಸೌಧದಲ್ಲಿ ಸಿಇಟಿ ಪರೀಕ್ಷೆ ವಿಚಾರದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸಚಿವ ಸುರೇಶ್ ಕುಮಾರ್ ಸಲಹೆಯನ್ನು ಪರಿಗಣಿಸಿ ಚರ್ಚೆ ಮಾಡಿದ್ದೇವೆ. ಸಿಇಟಿ ರ್‍ಯಾಂಕ್​ಗೆ ಪಿಯುಸಿ ಅಂಕ‌ ಪರಿಗಣಿಸೋದು ಬೇಡ ಅಂತ ಇಲಾಖೆಯವರು ಸಲಹೆ ಕೊಟ್ಟಿದ್ದಾರೆ. ಬಹಳಷ್ಟು ಚರ್ಚೆ ಮಾಡಿ ಸಂಬಂಧಪಟ್ಟ ಎಲ್ಲ ಕೌನ್ಸಿಲ್​ಗಳಿಗೂ ಪತ್ರ ಬರೆದು ಈ ವಿಚಾರ ಗಮನಕ್ಕೆ ತರುತ್ತೇವೆ ಎಂದರು.

ಪಿಯುಸಿ ಮಾರ್ಕ್ಸ್ ಈ ಬಾರಿ ಪರಿಗಣಿಸಲ್ಲ. ಕೇವಲ ಸಿಇಟಿ ರ್‍ಯಾಂಕ್ ಮಾತ್ರ ಪರಿಗಣಿಸುತ್ತೇವೆ. ನಿಗದಿತ ದಿನಾಂಕದಂತೆ ಸಿಇಟಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸಿಇಟಿ ಪರೀಕ್ಷೆಯನ್ನು ರಾಜ್ಯಾದ್ಯಂತ ಸುಮಾರು 500ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಆಗಸ್ಟ್ 28, 29 ಹಾಗೂ 30ರಂದು ನಡೆಸಲಾಗುವುದು. ಆಗಸ್ಟ್ 28ರಂದು ಜೀವಶಾಸ್ತ್ರ, ಗಣಿತ, ಆಗಸ್ಟ್ 29‌ಕ್ಕೆ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಆಗಸ್ಟ್ 30ಕ್ಕೆ ಗಡಿನಾಡು, ಹೊರನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಸಲಾಗುತ್ತದೆ. ಜೂನ್ 15ರಿಂದ ನೋಂದಣಿ ಪ್ರಾರಂಭವಾಗಲಿದೆ. ಪ್ರತಿ ಸಬ್ಜೆಕ್ಟ್​ಗೂ 60 ಮಾರ್ಕ್ಸ್ ಇರಲಿದೆ‌ ಎಂದು ತಿಳಿಸಿದರು.

ಸಿಇಟಿಯಲ್ಲಿ ನೀಟ್ ತರಹ ಮಿನಿಮಮ್ ಮಾರ್ಕ್ಸ್ ಪರಿಗಣಿಸಬಹುದಾ ಅಂತ ನಿರ್ಧಾರ ಮಾಡ್ತೇವೆ. ಸ್ಕ್ರೀನಿಂಗ್ ಮೆಥಡ್ ಪಾಲಿಸುವುದಕ್ಕೆ ಚರ್ಚೆ ಮಾಡ್ತಿದ್ದೇವೆ. 100% ಪಿಯುಸಿಯಲ್ಲಿ ಪಾಸಾಗ್ತಾರೆ. 6.5 ಲಕ್ಷ ವಿದ್ಯಾರ್ಥಿಗಳು ಪಿಯುಸಿಯಿಂದ ಡಿಗ್ರಿಗೆ ಬರುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಸ್ ಔಟ್ ಆಗ್ತಿರೋದ್ರಿಂದ ಪದವಿ ಕೋರ್ಸ್ ಹೇಗೆ ಹೆಚ್ಚಿಸಬೇಕು? ಹೇಗೆ ಇಲಾಖೆ ತಯಾರಾಗಬೇಕು ಅಂತಲೂ ಯೋಚನೆ ಮಾಡ್ತಿದ್ದೇವೆ ಎಂದರು.

ಪದವಿ ವಿದ್ಯಾರ್ಥಿಗಳಿಗೆ ಎಲ್ಲ ಕ್ಯಾಲೆಂಡರ್ ಆಫ್ ಇವೆಂಟ್ಸ್ ಈಗಾಗಲೇ‌ ಮಾಡಿದ್ದೇವೆ. ಅನ್​ಲಾಕ್ ಆದ ತಕ್ಷಣ ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡುವ ಕೆಲಸವೂ ಆಗಲಿದೆ. ಪದವಿ ವಿದ್ಯಾರ್ಥಿಗಳ ಸಮಸ್ಯೆ ವಿಚಾರದ ಬಗ್ಗೆ ಸವಿಸ್ತಾರವಾಗಿ ಮತ್ತೊಂದು ದಿನ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡ್ತೇವೆ ಎಂದರು.

Last Updated : Jun 8, 2021, 2:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.