ETV Bharat / state

ಸಮಗ್ರ ಆಂಧ್ರ ಅಭಿವೃದ್ಧಿಗೆ 'ಪಬ್ಲಿಕ್ ಪ್ರೈವೇಟ್ ಪೀಪಲ್ಸ್ ಪಾಲಿಸಿ' ಅಗತ್ಯ: ಚಂದ್ರಬಾಬು ನಾಯ್ಡು - ತೆಲುಗು ದೇಶಂ ಪಕ್ಷ

ಸಮಗ್ರ ಆಂಧ್ರಪ್ರದೇಶ ಅಭಿವೃದ್ಧಿಗೆ 3ಪಿ ಬದಲು 4ಪಿ ಸೂತ್ರ ಅಳವಡಿಕೆ ಅಗತ್ಯವಾಗಿದೆ ಎಂದು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು
ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು
author img

By ETV Bharat Karnataka Team

Published : Dec 28, 2023, 10:25 PM IST

Updated : Dec 28, 2023, 10:59 PM IST

ಟಿಡಿಪಿ ಸಮಾವೇಶದಲ್ಲಿ ಚಂದ್ರಬಾಬು ನಾಯ್ಡು ಭಾಗಿ

ಬೆಂಗಳೂರು: ನಾನು ಮುಖ್ಯಮಂತ್ರಿಯಾಗಿದ್ದಾಗ ತೆಗೆದುಕೊಂಡಿದ್ದ ಪಬ್ಲಿಕ್ ಪ್ರೈವೇಟ್ ಪಾಲಿಸಿಯಿಂದ (3ಪಿ) ರಸ್ತೆ, ಮೂಲಸೌಕರ್ಯ ಹಾಗೂ ತಂತ್ರಜ್ಞಾನದಿಂದಾಗಿ ಆಂಧ್ರಪ್ರದೇಶ ಅಭಿವೃದ್ದಿಯಾಗಿದೆ. ಭವಿಷ್ಯದಲ್ಲಿ ಇನ್ನಷ್ಟು ಪ್ರಗತಿ ಹೊಂದಬೇಕಾದರೆ 3ಪಿ ಬದಲು 4ಪಿ ಯಾದ ಪಬ್ಲಿಕ್ ಪ್ರೈವೇಟ್ ಪೀಪಲ್ಸ್ ಪಾಲಿಸಿಯ ಸೂತ್ರ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತೆಲುಗು ದೇಶಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟರು. ಟಿಡಿಪಿಯ ಬೆಂಗಳೂರು ಘಟಕದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದಕ್ಕೂ ಮುನ್ನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಪಕ್ಷದ ಪದಾಧಿಕಾರಿಗಳು ಸ್ವಾಗತಿಸಿ ಬರಮಾಡಿಕೊಂಡರು. ಕಾರ್ಯಕರ್ತರು ಹಾಗೂ ಪಕ್ಷದ ಬೆಂಬಲಿಗರು ನಾಯ್ಡು ಅವರನ್ನು ನೋಡಲು ಮುಗಿಬಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾಯ್ಡು, ನಾನು 20 ವರ್ಷಗಳ ಹಿಂದೆ ವಿಷನ್ 2020ರಡಿ ಪಬ್ಲಿಕ್ ಪ್ರೈವೇಟ್ ಪೀಪಲ್ಸ್ (ಪಿಪಿಪಿ) ಮಾದರಿಯಲ್ಲಿ ಐಟಿ, ಬಿಟಿ, ಮೂಲಸೌಕರ್ಯ ಸೇರಿದಂತೆ ವಿವಿಧ ವಲಯಗಳಲ್ಲಿ ತೆಗೆದುಕೊಂಡ ಅಭಿವೃದ್ಧಿ‌ ಕ್ರಮಗಳಿಂದಾಗಿ‌ ಐಟಿಯಲ್ಲಿ ಇಂದು ಬೆಂಗಳೂರು ಜೊತೆಗೆ ಹೈದರಾಬಾದ್ ಗುರುತಿಸಿಕೊಂಡಿದೆ. 2047ರಲ್ಲಿ ವಿಶ್ವದ ಭೂಪಟದಲ್ಲಿ ಭಾರತ ಅಭಿವೃದ್ದಿ ಹೊಂದಿದ ರಾಷ್ಟವಾಗಬೇಕಾದರೆ 3ಪಿ ಜೊತೆಗೆ 4 ಪಿಯಾಗಿ ಕೆಲಸ ಮಾಡಬೇಕಿದೆ. ಪಬ್ಲಿಕ್ ಪ್ರೈವೇಟ್ ಪೀಪಲ್ಸ್ ಪಾಲಿಸಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.

ನನಗೆ ಕಷ್ಟಬಂದಾಗ ಎಲ್ಲರೂ ಬೆಂಬಲ ನೀಡಿದ್ದೀರಿ. ಸುಮಾರು 70-80 ದೇಶಗಳಲ್ಲಿ ನೆಲೆಸಿರುವ ತೆಲುಗಿನ ಉದ್ಯಮಿಗಳು ಸರ್ಪೋಟ್ ಮಾಡಿರುವುದಕ್ಕೆ ಆಭಾರಿಯಾಗಿದ್ದೇನೆ. ಬೆಂಗಳೂರು ಸೇರಿದಂತೆ ವಿಶ್ವದ ನಾನಾ ಕಡೆಗಳಲ್ಲಿ ತೆಲುಗಿನವರಿದ್ದಾರೆ. ಐಟಿ ಕ್ಷೇತ್ರದಲ್ಲಿ ಮೂವರು ಭಾರತೀಯರಲ್ಲಿ ಅದರಲ್ಲಿ ಓರ್ವ ತೆಲುಗಿನವನು ಆಗಿರುತ್ತಾನೆ. ಇದು ಗರ್ವ ಪಡಬೇಕಾದ ಸಂಗತಿ. ಇದಕ್ಕೆ ಕಾರಣ ನಾನು ಅಂದು ತೆಗೆದುಕೊಂಡ ಕ್ರಮಗಳು ಎನ್ನುವುದಕ್ಕೆ ಖುಷಿಯಾಗುತ್ತದೆ ಎಂದು ಹೇಳಿದರು.

ನಾನು ಸಿಎಂ ಆದಾಗ ಬಹುತೇಕರು ಕೇವಲ ಕೃಷಿಕರಾಗಿದ್ದರು. ರೈತನ ಮಗ ರೈತನಾಗೇ ಯಾಕೆ ಉಳಿಯಬೇಕು, ಆತ ಸಹ ಎಲ್ಲಾ ಕ್ಷೇತ್ರಗಳಲ್ಲಿ ಮಿಂಚಬೇಕೆಂಬ ಉದ್ದೇಶದಿಂದ ನಾಲೇಜ್ ಎಕಾನಮಿ ಬಗ್ಗೆ ಪ್ರಸ್ತಾಪಿಸಿದಾಗ ಎಲ್ಲರೂ ನನ್ನನ್ನು 420 ಎಂದು ಬೈದಿದ್ದರು. ಈ ಬಗ್ಗೆ ತಲೆಕೆಡಿಸಿಕೊಳ್ಳದೆ ವಿಷನ್ 2020ರಡಿ ಜಾರಿಯಿಂದ ಇಂದು ಐಟಿ ಬೆಳೆದಿದೆ. ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸಿ ಮಹಿಳಾ‌ ಸಬಲೀಕರಣ ಮಾಡಿದ್ದೆ. ಉದ್ಯೋಗ ನೀಡುವುದರ ಜೊತೆಗೆ ಉದ್ಯಮಿಗಳನ್ನು ಗುರುತಿಸುವ ಕೆಲಸ ಆಗುವಂತೆ ಮಾಡಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ಥಿಂಕ್ ಗ್ಲೋಬಲಿ ಎಂಬ ಚಿಂತನೆಯಡಿ ನೆಟ್ ವರ್ಕ್ ಸೃಷಿಸುವ ಸಾಮರ್ಥ್ಯ ತೆಲುಗಿನವರಿಗಿದೆ. ಜಾಗತೀಕರಣದ ಬಳಿಕ ಎಲ್ಲಾ ರಂಗಗಳಲ್ಲೂ ದೇಶ ಅಭಿವೃದ್ಧಿಗೆ ನಾಂದಿ ಹಾಡಿತ್ತು. ಸೇವಾ ವಲಯದಲ್ಲಿ ತೆಲುಗಿನವರು ಮುಂದಿದ್ದು‌ ಈ ಶತಮಾನ ತೆಲುಗಿನವರದ್ದೇ ಪ್ರಾಬಲ್ಯವಾಗಲಿದೆ ಎಂದು ಭವಿಷ್ಯ ನುಡಿದರು.

ಸಂಘಟಿತರಾಗಿರುವ ಬೆಂಗಳೂರು ಟಿಡಿಪಿ ಫೋರಂಗೆ ಸಲಹೆ‌ ನೀಡಿದ ನಾಯ್ಡು, ಇನ್ನು 100 ದಿನಗಳಲ್ಲಿ ಪ್ರಣಾಳಿಕೆ ಸಿದ್ದಪಡಿಸಬೇಕು. ವ್ಯವಸ್ಥಿತವಾಗಿ ಯೋಜನೆಯಡಿ ನೆಟ್‌ವರ್ಕ್ ರೀತಿಯಲ್ಲಿ ಪಕ್ಷದ ಬಗ್ಗೆ ಸಾಮಾನ್ಯ ಜನರಿಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ.‌ ಕಾಲ್ ಸೆಂಟರ್ ತರ ಮಾಡಿ ಪ್ರತಿದಿನ ಮೊಬೈಲ್ ಮೂಲಕ ಪಕ್ಷದ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಬೇಕು ಎಂದರು.

ಇದನ್ನೂ ಓದಿ: ಫೆ.28ರೊಳಗೆ ನಾಮಫಲಕಗಳಲ್ಲಿ 60% ಕನ್ನಡ ಕಡ್ಡಾಯ: ಸಿಎಂ ಸಿದ್ದರಾಮಯ್ಯ

Last Updated : Dec 28, 2023, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.