ಬೆಂಗಳೂರು: ನೇಮಕಾತಿ ಪತ್ರಕ್ಕಾಗಿ ಆಗ್ರಹಿಸಿ ಉಪನ್ಯಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಈ ಸಂಬಂಧ ಇಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಪಿಯು ಬೋರ್ಡ್ ಗೆ ಭೇಟಿ ನೀಡಿದರು.
ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಆಯ್ಕೆಯಾಗಿ, ಕೌನ್ಸೆಲಿಂಗ್ ಮುಗಿದಿದ್ದರೂ ಇನ್ನೂ ನೇಮಕಾತಿ ಪತ್ರ ದೊರಕಿಲ್ಲ ಹೀಗಾಗಿ ಕೂಡಲೇ ನೇಮಕಾತಿ ಪತ್ರ ನೀಡುವಂತೆ ಉಪನ್ಯಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಭೇಟಿ ವೇಳೆ ಮಾತನಾಡಿದ ಅವರು, ಈಗಾಗಲೇ ಸರ್ಕಾರ ನೇಮಕಾತಿ ಆದೇಶ ಕೊಡಬೇಕಾಗಿತ್ತು. ನೇಮಕಾತಿ ಪ್ರಕ್ರಿಯೆ ಆರಂಭವಾಗಿ 6 ವರ್ಷ ಕಳೆದಿದ್ದು, ಬೆಂಗಳೂರು ಸೇರಿದಂತೆ ವಿವಿದೆಡೆ ಆಯ್ಕೆಯಾದ ಅಭ್ಯರ್ಥಿಗಳು ದೂರದ ಊರಿನಿಂದ ಬಂದು ಧರಣಿ ನಡೆಸುವುದು ನಿಜಕ್ಕೂ ದುರಾದೃಷ್ಟಕರ. ಸರ್ಕಾರ ತಡಮಾಡದೆ ನೇಮಕಾತಿ ಆದೇಶ ಪತ್ರ ಕೊಡಬೇಕು ಎಂದು ಈ ವೇಳೆ ಒತ್ತಾಯಿಸಿದರು.