ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬೆಂಬಲಿಗರ ಪ್ರತಿಭಟನಾ ರ‍್ಯಾಲಿ ಚಾಲನೆ ಪಡೆದಿದ್ದು, ಭಾರಿ ಜನಸ್ತೋಮದಿಂದಾಗಿ ಗಮನ ಸೆಳೆದಿದೆ.
ಪ್ರತಿಭಟನಾ ರ್ಯಾಲಿ ಈಗಾಗಲೇ ನ್ಯಾಷನಲ್ ಕಾಲೇಜು ಆವರಣದಿಂದ ಹೊರಟು ಫ್ರೀಡಂ ಪಾರ್ಕ್ ತಲುಪಿದ್ದು, ಮಾರ್ಗದುದ್ದಕ್ಕೂ ಅವರ ಅಭಿಮಾನಿಗಳು ಜಯಘೋಷ ಕೂಗುತ್ತಾ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಷನಲ್ ಕಾಲೇಜು ಆವರಣದಲ್ಲಿ ಡಿ.ಕೆ.ಶಿವಕುಮಾರ್ ಅಭಿಮಾನಿಗಳು, ಅವರ ಸಂಬಂಧಿಗಳು, ಆಪ್ತರು ಹಾಗೂ ಸ್ನೇಹಿತರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು.