ETV Bharat / state

ಫೆರಿಫೆರಲ್ ರಿಂಗ್ ರಸ್ತೆ ಯೋಜನೆ: ಪರಿಹಾರ ಕೊಡಿ, ಇಲ್ಲ ಯೋಜನೆ ಕೈ ಬಿಡುವಂತೆ ಪ್ರತಿಭಟನೆ

author img

By

Published : Jul 12, 2022, 9:12 PM IST

ಫೆರಿಪೆರಲ್ ರಿಂಗ್ ರಸ್ತೆಗೆ ಭೂ ಸ್ವಾಧೀನ ಸೇರಿ ಒಟ್ಟಾರೆ ರಸ್ತೆ ನಿರ್ಮಿಸಲು ಕನಿಷ್ಠ 37,500 ಕೋಟಿ ರೂ ಅಗತ್ಯವಿದೆ. ಆದರೆ ಇದಕ್ಕಾಗಿ ಸರ್ಕಾರ ಸೂಕ್ತ ರೀತಿಯಲ್ಲಿ ಹಣಕಾಸಿನ ವ್ಯವಸ್ಥೆ ಮಾಡಿಕೊಂಡಿಲ್ಲ. ಯೋಜನೆಯ ರೂಪುರೇಷೆಗಳಿಗೆ ಅಂತಿಮ ಅನುಮೋದನೆ ಪಡೆದುಕೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

protest-against-land-acquisition-for-peripheral-ring-road-project-in-bengaluru
ಫೆರಿಫೆರಲ್ ರಿಂಗ್ ರಸ್ತೆ ಯೋಜನೆ :ಭೂ ಸ್ವಾಧೀನಕ್ಕೆ ಪರಿಹಾರ ನೀಡಲು ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು: ನಗರದ ಸಂಚಾರ ದಟ್ಟಣೆ ನಿವಾರಣೆಗಾಗಿ ಜಾರಿಗೊಳಿಸುತ್ತಿರುವ ಪೆರಿಫೆರಲ್ ರಿಂಗ್ ರಸ್ತೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಕೂಡಲೇ ಪರಿಹಾರ ನೀಡಿ, ಇಲ್ಲವಾದಲ್ಲಿ ಯೋಜನೆಯನ್ನೇ ರದ್ದುಗೊಳಿಸಿ ಎಂದು ಫೆರಿಫೆರಲ್ ರಸ್ತೆ ಭೂಸ್ವಾಧೀನದ ವಿರುದ್ಧ ರೈತರು ಹೋರಾಟ ಸಮಿತಿ ನಡೆಸಿದೆ. ಬಿಡಿಎ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ ರೈತ ಹೋರಾಟಗಾರರು ಭೂ ವಶಪಡಿಸಿಕೊಳ್ಳಲು ಹೊರಡಿಸಿರುವ ಅಂತಿಮ ಅಧಿಸೂಚನೆ ಅನ್ವಯ ಪರಿಹಾರ ಕೊಡಿ, ಇಲ್ಲವಾದಲ್ಲಿ ಅಧಿಸೂಚನೆಯಿಂದ ಭೂಮಿಯನ್ನು ಕೈಬಿಡಿ ಎಂದು ಪ್ರತಿಭಟಿಸಿದ್ದಾರೆ.

2013ರ ಭೂಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಯಡಿ ಜಮೀನು ನೀಡಲು ರೈತರು ಸಿದ್ಧರಿದ್ದು, ಕಾಲಮಿತಿಯೊಳಗೆ ಯೋಜನೆಯನ್ನು ಕಾರ್ಯಗತಗೊಳಿಸಲು ಯಾವುದೇ ಗಟ್ಟಿಯಾದ ಕ್ರಮಗಳನ್ನು ಸರ್ಕಾರಗಳು ಕೈಗೊಂಡಿಲ್ಲ. ಇಚ್ಛಾಶಕ್ತಿ ಇಲ್ಲದಿದ್ದರೆ ಭೂಸ್ವಾಧೀನ ಮಾಡಿಕೊಂಡು ರೈತರಿಗೆ ಯಾಕೆ ತೊಂದರೆ ನೀಡುತ್ತೀರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

37,500 ಕೋಟಿ ವೆಚ್ಚದಲ್ಲಿ ರಿಂಗ್ ರಸ್ತೆ: ಫೆರಿಪೆರಲ್ ರಿಂಗ್ ರಸ್ತೆಗೆ ಭೂ ಸ್ವಾಧೀನ ಸೇರಿ ಒಟ್ಟಾರೆ ರಸ್ತೆ ನಿರ್ಮಿಸಲು ಕನಿಷ್ಠ 37,500 ಕೋಟಿ ರೂ ಅಗತ್ಯವಿದೆ. ಆದರೆ ಇದಕ್ಕಾಗಿ ಸರ್ಕಾರ ಸೂಕ್ತ ರೀತಿಯಲ್ಲಿ ಹಣಕಾಸಿನ ವ್ಯವಸ್ಥೆ ಮಾಡಿಕೊಂಡಿಲ್ಲ. ಯೋಜನೆಯ ರೂಪುರೇಷೆಗಳಿಗೆ ಅಂತಿಮ ಅನುಮೋದನೆ ಪಡೆದುಕೊಂಡಿಲ್ಲ. ಸರ್ಕಾರದ ಅನಿಶ್ಚಿತತೆಯಿಂದಾಗಿ ರೈತರು ಆತಂತ್ರಗೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಓದಿ :ಬಕ್ರೀದ್ ಹಬ್ಬ: 707 ಜಾನುವಾರು ರಕ್ಷಣೆ, 67 ಮಂದಿ ಬಂಧನ- ಸಚಿವ ಪ್ರಭು ಚವ್ಹಾಣ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.