ETV Bharat / state

ಈ ಪ್ರತಿಭಟನೆ ಹಿಂದೆ ಕಾಂಗ್ರೆಸ್​ ಕೈವಾಡವಿದೆ: ಸಿಎಂ ಬಿಎಸ್​ವೈ

ಸಿಎಎ ಕಾಯ್ದೆ ಅನುಷ್ಠಾನದಿಂದ ಯಾರಿಗೂ ಯಾವುದೇ ತೊಂದರೆ ಆಗಲ್ಲ. ಅದಕ್ಕೆ ನಾನು ಭರವಸೆ ನೀಡುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

author img

By

Published : Dec 19, 2019, 10:43 AM IST

Updated : Dec 19, 2019, 11:09 AM IST

bng
ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು.

ಬೆಂಗಳೂರು: ಮುಸ್ಲಿಂ ಬಾಂಧವರಿಗೆ ಸಿಎಎ ಕಾಯ್ದೆಯಿಂದ ಯಾವುದೇ ತೊಂದರೆ ಇಲ್ಲ. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಅಲ್ಪಸಂಖ್ಯಾತರ ಸಂಪೂರ್ಣ ರಕ್ಷಣೆ ಹೊಣೆ ನಮ್ಮದು. ಶಾಂತಿ ಸುವ್ಯವಸ್ಥೆಗೆ ಸಹಕರಿಸಿ ಸಿಎಂ ಬಿ.ಎಸ್​.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪ

ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, 144 ಸೆಕ್ಷನ್ ಜಾರಿ ಮಾಡಿದ್ದಾರೆ. ಹೀಗಾಗಿ ಎಲ್ಲರೂ ಸಹಕರಿಸಬೇಕು. ಕಾಂಗ್ರೆಸ್​ನ ಕಿತಾಪತಿ, ಕೈವಾಡದಿಂದಲೇ ಈ ರೀತಿಯ ಪ್ರತಿಭಟನೆ ಆಗ್ತಿದೆ. ಯು.ಟಿ.ಖಾದರ್ ಅವರ ಕೈವಾಡದಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಇದೇ ರೀತಿಯ ಘಟನೆಗಳಿಗೆ ಕಾಂಗ್ರೆಸ್ ಸಹಕರಿಸಿದರೆ ಅವರು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಲ್ಲರು ಆನಂದವಾಗಿ ಓಡಾಡುತ್ತಿದ್ದಾರೆ. ಯಾವುದೇ ರೀತಿಯ ತೊಂದರೆ ಇಲ್ಲ. ಯಾವುದೇ ಮೆರವಣಿಗೆ, ಸಭೆಗಳನ್ನು ಯಾರು ಮಾಡಬಾರದು. ಎಲ್ಲರೂ ಶಾಂತಿ ಕಾಪಾಡಬೇಕು. ಟೌನ್ ಹಾಲ್​ನಲ್ಲಿ ನಡೆಯುವ ಪ್ರತಿಭಟನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಪರ-ವಿರೋಧದ ಯಾವುದೇ ಹೋರಾಟಕ್ಕೂ ನಾನು ಅನುಮತಿ ಕೊಟ್ಟಿಲ್ಲ ಎಂದರು.

Intro:KN_BNG_01_CM_REACTION_SCRIPT_9021933

ಮುಸ್ಲಿಮರ ರಕ್ಷಣೆ ನಮ್ಮದು,ಸಹಕಾರ ನೀಡಿ: ಸಿಎಂ ಬಿಎಸ್ವೈ ಮನವಿ

ಬೆಂಗಳೂರು: ಮುಸ್ಲಿಂ ಬಾಂಧವರಿಗೆ ಸಿಎಎ ಕಾಯ್ದೆಯಿಂದ ಯಾವುದೇ ತೊಂದರೆ ಇಲ್ಲ ಯಾರೂ ಆತಂಕ ಪಡುವ ಅಗತ್ಯ ಇಲ್ಲ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಮುಸ್ಲಿಮರ ಸಂಪೂರ್ಣ ರಕ್ಷಣೆ ಹೊಣೆ ನಮ್ಮದು ಶಾಂತಿ ಸುವ್ಯವಸ್ಥೆಗೆ ಸಹಕರಿಸಿ ಸಿಎಂ ಮನವಿ ಮಾಡಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ,144 ಸೆಕ್ಷನ್ ಜಾರಿ ಮಾಡಿದ್ದಾರೆ ಹೀಗಾಗಿ ಎಲ್ಲರೂ ಸಹಕರಿಸಬೇಕು ಕಾಂಗ್ರೆಸ್ ನ ಕಿತಾಪತಿ, ಕೈವಾಡ ದಿಂದಲೇ ಈ ರೀತಿಯ ಪ್ರತಿಭಟನೆ ಆಗ್ತಿದೆ ಯೂ ಟಿ ಖಾದರ್ ರವರ ಕೈವಾಡದಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ ಇದೇ ರೀತಿಯ ಕಾಂಗ್ರೆಸ್ ನವರು ಮುಂದುವರೆಸಿದ್ರೆ, ಅವರು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಲ್ಲರು ಆನಂದವಾಗಿ ಓಡಾಡುತ್ತಿದ್ದಾರೆ ಯಾವುದೇ ರೀತಿಯ ತೊಂದರೆ ಇಲ್ಲ ಯಾವುದೇ ಮೆರವಣಿಗೆ, ಸಭೆಗಳನ್ನು ಯಾರು ಮಾಡಬಾರದು ಎಲ್ಲರೂ ಶಾಂತಿ ಕಾಪಾಡಬೇಕು ಟೌನ್ ಹಾಲ್ ನಲ್ಲಿ ನಡೆಯುವ ಪ್ರತಿಭಟನೆ ಬಗ್ಗೆ ನನಗೆ ಮಾಹಿತಿ ಇಲ್ಲ, ಆದರೆ ಪರ ವಿರೋಧದ ಯಾವುದೇ ಹೋರಾಟಕ್ಕೂ ನಾನು ಅನುಮತಿ ಕೊಟ್ಟಿಲ್ಲ ಎಂದರು.Body:.Conclusion:
Last Updated : Dec 19, 2019, 11:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.