ETV Bharat / state

ಕೋಟಿ ಕೋಟಿ ಆಸ್ತಿಗೆ ಅಧಿಪತಿಯಾಗಿರುವ ಕಮಲ ಅಭ್ಯರ್ಥಿಗಳು: ಉದಯ್ ಗರುಡಾಚಾರ್ ಕೆಜಿ ಕೆಜಿ ಚಿನ್ನಾಭರಣದ ಕುಬೇರ! - rich politicians

ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ.

property-details-of-bangalore-bjp-candidates
ಕೋಟಿ ಕೋಟಿ ಅಧಿಪತಿಯಾಗಿರುವ ಕಮಲ ಅಭ್ಯರ್ಥಿಗಳು: ಉದಯ್ ಗರುಡಾಚಾರ್ ಕೆಜಿ ಕೆಜಿ ಚಿನ್ನಾಭರಣದ ಕುಬೇರ!
author img

By

Published : Apr 17, 2023, 9:46 PM IST

ಬೆಂಗಳೂರು: ಬೆಂಗಳೂರಿನ ಬಿಜೆಪಿ ಅಭ್ಯರ್ಥಿಗಳ ಪೈಕಿ ಚಿಕ್ಕಪೇಟೆ ಕ್ಷೇತ್ರದ ಉದಯ್ ಗರುಡಾಚಾರ್ ಅತ್ಯಂತ ಶ್ರೀಮಂತ ಅಭ್ಯರ್ಥಿ. ಇಂದು ಬಹುತೇಕ ಬೆಂಗಳೂರು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಕೋಟ್ಯಧಿಪತಿಗಳಾಗಿದ್ದಾರೆ. ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಕೇಸರಿ ಹುರಿಯಾಳುಗಳು ಕೋಟಿ ಕೋಟಿ ಆಸ್ತಿ ಹೊಂದಿದ್ದಾರೆ.

ಕುಬೇರ ಉದಯ್ ಗರುಡಾಚಾರ್: ಬೆಂಗಳೂರು ಬಿಜೆಪಿ ಅಭ್ಯರ್ಥಿಗಳ ಪೈಕಿ ಬಿಜೆಪಿ ಚಿಕ್ಕಪೇಟೆ ಅಭ್ಯರ್ಥಿ ಉದಯ್ ಗರುಡಾಚಾರ್ ಅತ್ಯಂತ ಸಿರಿವಂತ. ಇವರ ಒಟ್ಟು ಆಸ್ತಿ ಮೌಲ್ಯ 200.44 ಕೋಟಿ ರೂ. ಪತ್ನಿ ಮೇದಿನಿ ಉದಯ್ ಒಟ್ಟು ಆಸ್ತಿ ಮೌಲ್ಯ 41.14 ಕೋಟಿ ರೂ. ಇದ್ದು, ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದಲ್ಲಿ ತಮ್ಮ ಚರಾಸ್ತಿ ಮೊತ್ತ 123.19 ಕೋಟಿ ರೂ. ಎಂದು ತೋರಿಸಿದ್ದಾರೆ.

ಸ್ಥಿರಾಸ್ತಿ ಮೊತ್ತ 77.25 ಕೋಟಿ ರೂ. ಇಗಿದೆ. ಉದಯ್ ಗರುಡಾಚಾರ್ ಮಾಡಿದ ಒಟ್ಟು ಸಾಲದ ಮೊತ್ತ 47.63 ಕೋಟಿ ರೂ., ಪತ್ನಿ ಮಾಡಿದ ಒಟ್ಟು ಸಾಲ 97.65 ಲಕ್ಷ ರೂ‌. ಆಗಿದೆ. ಇವರ ಬಳಿ 5.49 ಕೋಟಿ ಮೊತ್ತದ 22 ಕೆ.ಜಿ ಬಂಗಾರವಿದೆ. 37.93 ಲಕ್ಷ ಮೌಲ್ಯದ 50 ಕೆ.ಜಿ ಬೆಳ್ಳಿ ಹೊಂದಿದ್ದಾರೆ. ಪತ್ನಿ ಹೆಸರಲ್ಲಿ 3.2 ಕೋಟಿ ಮೊತ್ತದ 22 ಕೆಜಿ ಬಂಗಾರ ಇದೆ. 1.44 ಕೋಟಿ ಮೌಲ್ಯದ 144 ಕೆ.ಜಿ ಬೆಳ್ಳಿಯ ಒಡತಿಯಾಗಿದ್ದಾರೆ.

ಆರ್.ಅಶೋಕ್ ಆಸ್ತಿ ವಿವರ: ಪದ್ಮನಾಭನಗರ ಕ್ಷೇತ್ರದ ಅಭ್ಯರ್ಥಿ ಆರ್.ಅಶೋಕ್ ಒಟ್ಟು ಆಸ್ತಿ ಮೌಲ್ಯ 5.28 ಕೋಟಿ ರೂ. ಆಗಿದೆ. ಈ ಪೈಕಿ ಚರಾಸ್ತಿ 2.18 ಕೋಟಿ ರೂ., ಸ್ಥಿರಾಸ್ತಿ 3.10 ಕೋಟಿ ರೂ. ಇದೆ. ಪತ್ನಿ ಪ್ರಮಿಳಾ ರಾಣಿ ಒಟ್ಟು ಆಸ್ತಿ ಮೌಲ್ಯ 11.61 ಕೋಟಿ ರೂ. ಆಗಿದೆ. ಆ ಪೈಕಿ ಚರಾಸ್ತಿ 1.16 ಕೋಟಿ ರೂ., ಸ್ಥಿರಾಸ್ತಿ ಮೊತ್ತ 10.44 ಕೋಟಿ ರೂ. ಇದೆ.

ಆರ್.ಅಶೋಕ್ ಒಟ್ಟು 97.78 ಲಕ್ಷ ರೂ. ಸಾಲ ಪಡೆದಿದ್ದಾರೆ. ಅದರಲ್ಲಿ ಪತ್ನಿಯಿಂದ 42.10 ಲಕ್ಷ ರೂ. ಸಾಲ ಪಡೆದಿದ್ದಾರೆ. ಪತ್ನಿ ಮಾಡಿರುವ ಸಾಲದ ಮೊತ್ತ 64.04 ಲಕ್ಷ ರೂ. ಆರ್.ಅಶೋಕ್ 21.60 ಲಕ್ಷ ರೂ. ಚಿನ್ನ, 18.80 ಲಕ್ಷ ಬೆಳ್ಳಿ ಆಭರಣದ ಒಡೆಯರಾಗಿದ್ದಾರೆ. ಅವರ ಪತ್ನಿ 33.31 ಲಕ್ಷ ಬಂಗಾರ, 8.19 ಲಕ್ಷ ಬೆಳ್ಳಿ ಹಾಗೂ 17.30 ಲಕ್ಷ ಮೊತ್ತದ ವಜ್ರ ಆಭರಣದ ಒಡತಿಯಾಗಿದ್ದಾರೆ. ಆರ್.ಅಶೋಕ್ ಕುಟುಂಬದ ಒಟ್ಟು ಆಸ್ತಿ ಮೌಲ್ಯ 70.45 ಕೋಟಿ ರೂ. ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಗೋಪಾಲಯ್ಯ ಆಸ್ತಿ ವಿವರ: ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಒಟ್ಟು 36.01 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ಈ ಪೈಕಿ ಚರಾಸ್ತಿ 1.96 ಕೋಟಿ ರೂ., ಸ್ಥಿರಾಸ್ತಿ ಮೊತ್ತ 35.01 ಕೋಟಿ ರೂ. ಇದೆ. ಅವರು ಮಾಡಿದ ಸಾಲದ ಮೊತ್ತ 23.10 ಕೋಟಿ ರೂ. ಪತ್ನಿಯಿಂದ 2.61 ಕೋಟಿ ರೂ. ಕೈ ಸಾಲ ಮಾಡಿಕೊಂಡಿದ್ದಾರೆ. 15.60 ಲಕ್ಷ ಮೌಲ್ಯದ ಬಂಗಾರ, 5 ಲಕ್ಷ ಮೊತ್ತದ ಬೆಳ್ಳಿಯ ಒಡೆಯರಾಗಿದ್ದಾರೆ.

ಪತ್ನಿ ಹೇಮಲತಾ ಒಟ್ಟು ಆಸ್ತಿ ಮೌಲ್ಯ 73.33 ಕೋಟಿ ರೂ. ಆಗಿದೆ. ಅವರು ಮಾಡಿದ ಸಾಲ 39.50 ಕೋಟಿ ರೂ. ಇದೆ. ಒಟ್ಟು ಬಂಗಾರ 82.60 ಲಕ್ಷ ರೂ., ಬೆಳ್ಳಿ 9.60 ಲಕ್ಷ ರೂ. ಹೊಂದಿದ್ದಾರೆ. ಗೋಪಾಲಯ್ಯ ಮಗ ಮಂಜುನಾಥ ಗೌಡ ಆಸ್ತಿ ಮೊತ್ತ 28.43 ಲಕ್ಷ ರೂ., ಮಗ ಸಂಜಯ ಗೌಡ ಆಸ್ತಿ ಮೊತ್ತ 4.71 ಲಕ್ಷ ರೂ. ಇದೆ.

ರವಿ ಸುಬ್ರಮಣ್ಯ ಆಸ್ತಿ ವಿವರ: ಬಸವನಗುಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವಿಸುಬ್ರಮಣ್ಯ ಚರಾಸ್ತಿ 6.57 ಲಕ್ಷ‌ ರೂ. ಆಗಿದ್ದರೆ, ಸ್ಥಿರಾಸ್ತಿ ಮೊತ್ತ 1.92 ಕೋಟಿ ರೂ. ಆಗಿದೆ. ಪತ್ನಿ ಮಂಜುಳಾ ಚರಾಸ್ತಿ 2.12 ಲಕ್ಷ ರೂ. ಆಗಿದ್ದರೆ, ಪತ್ನಿ ಸ್ಥಿರಾಸ್ತಿ ಮೊತ್ತ 50 ಲಕ್ಷ ರೂ.‌ ಆಗಿದೆ. ರವಿ ಸುಬ್ರಮಣ್ಯ ಮಾಡಿರುವ ಸಾಲ 4.56 ಕೋಟಿ ರೂ., ಪತ್ನಿ ಮಾಡಿರುವ ಸಾಲ 1.25 ಕೋಟಿ ರೂ. ಆಗಿದೆ. ರವಿಸುಬ್ರಮಣ್ಯ ಪತ್ನಿಗೆ 77.26 ಲಕ್ಷ‌ ರೂ. ಸಾಲ ಕೊಟ್ಟಿದ್ದಾರೆ.

ಭಾಸ್ಕರ್ ರಾವ್ ಆಸ್ತಿ ವಿವರ: ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಒಟ್ಟು ಆಸ್ತಿ ಮೌಲ್ಯ 7.56 ಕೋಟಿ ರೂ. ಇದೆ. ಈ ಪೈಕಿ ಚರಾಸ್ತಿ 2.81 ಕೋಟಿ ರೂ., ಸ್ಥಿರಾಸ್ತಿ 4.75 ಕೋಟಿ ಇದೆ. 5 ಲಕ್ಷ ಮೌಲ್ಯದ ಬಂಗಾರ ಹೊಂದಿದ್ದಾರೆ. ಪತ್ನಿ ಚಂದಿರಾ ರಾವ್ ಒಟ್ಟು ಆಸ್ತಿ ಮೌಲ್ಯ 16.35 ಕೋಟಿ ಆಗಿದ್ದು, ಚರಾಸ್ತಿ 2.38 ಕೋಟಿ ರೂ., ಸ್ಥಿರಾಸ್ತಿ 13.97 ಕೋಟಿ ರೂ. ಆಗಿದೆ. ಬಂಗಾರದ ಮೌಲ್ಯ 22.50 ಲಕ್ಷ ರೂ. ವಜ್ರ ಆಭರಣದ ಮೊತ್ತ 9 ಲಕ್ಷ ರೂ., 6.50 ಲಕ್ಷ ರೂ. ಬೆಳ್ಳಿಯ ಒಡತಿಯಾಗಿದ್ದಾರೆ.

ಎಂ.ಕೃಷ್ಣಪ್ಪ ಆಸ್ತಿ ವಿವರ: ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪರ ಒಟ್ಟು ಆಸ್ತಿ ಮೌಲ್ಯ 53.24 ಕೋಟಿ ರೂ. ಆಗಿದೆ. ಈ ಪೈಕಿ ಚರಾಸ್ತಿ 11.19 ಕೋಟಿ ರೂ., ಸ್ಥಿರಾಸ್ತಿ 42.05 ಕೋಟಿ ರೂ. ಆಗಿದೆ. ಒಟ್ಟು ಸಾಲ 6.5 ಕೋಟಿ ರೂ. ಆಗಿದೆ. 37.03 ಲಕ್ಷ ಮೌಲ್ಯದ ಚಿನ್ನ, 2.05 ಲಕ್ಷ ಮೌಲ್ಯದ ಬೆಳ್ಳಿಯ ಒಡೆಯರಾಗಿದ್ದಾರೆ. ಪತ್ನಿಯ ಒಟ್ಟು ಆಸ್ತಿ ಮೌಲ್ಯ 36.74 ಕೋಟಿ ರೂ. ಆಗಿದೆ. ಮಾಡಿದ ಸಾಲದ ಮೊತ್ತ 14.24 ಕೋಟಿ ರೂ. ಚಿನ್ನ 54.17 ಲಕ್ಷ ರೂ., 2.44 ಲಕ್ಷ ಮೌಲ್ಯದ ಬೆಳ್ಳಿ ಹೊಂದಿದ್ದಾರೆ.

ಸತೀಶ್ ರೆಡ್ಡಿ ಆಸ್ತಿ ವಿವರ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ಸತೀಶ್ ರೆಡ್ಡಿ 151.25 ಕೋಟಿ ರು.ಗಿಂತ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ 4.83 ಕೋಟಿ ರು. ನಗದು ಹೊಂದಿರುವ ಸತೀಶ್ ರೆಡ್ಡಿ ಹೆಸರಲ್ಲಿ 32.58 ಕೋಟಿ ರು. ಮೌಲ್ಯದ ಚರಾಸ್ತಿ ಇದೆ. ಪತ್ನಿ ಆಶಾ ಸತೀಶ್ ಅವರು ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿ 78.66ಲಕ್ಷ ರು. ನಗದು ಹೊಂದಿದ್ದಾರೆ. 5.84 ಕೋಟಿ ರು. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪುತ್ರಿ ರಿಶಿಕಾ ಬ್ಯಾಂಕ್‌ಗಳ ಖಾತೆಯಲ್ಲಿ 13.61 ಲಕ್ಷ ರೂ. ಇದ್ದು, 47.61 ಲಕ್ಷ ರು. ಮೌಲ್ಯದ ಚರಾಸ್ತಿ ಇದೆ. ಅಂತೆಯೇ ಪುತ್ರ ನಿಶಾಂತ್ ಬ್ಯಾಂಕ್‌ಗಳ ಖಾತೆಯಲ್ಲಿ 12.65 ಲಕ್ಷ ರೂ. ಇದ್ದು, 46.65 ಲಕ್ಷ ರು. ಮೌಲ್ಯದ ಚರಾಸ್ತಿ ಇದೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖಿಸಲಾಗಿದೆ.

ಸತೀಶ್ ರೆಡ್ಡಿ ಹೆಸರಲ್ಲಿ 94.61 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದ್ದು, ಈ ಪೈಕಿ 17.66 ಕೋಟಿ ರೂ. ಮೌಲ್ಯದ ಕೃಷಿ ಭೂಮಿ ಇದೆ. ಪತ್ನಿ ಹೆಸರಲ್ಲಿ 17.27 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದ್ದು, ಇದರಲ್ಲಿ 6.15 ಕೋಟಿ ರೂ. ಮೌಲ್ಯದ ಕೃಷಿ ಭೂಮಿ ಇದೆ. ಸತೀಶ್ ರೆಡ್ಡಿಗೆ 39.82ಕೋಟಿ ರೂ. ಸಾಲ ಇದೆ. ಪತ್ನಿಗೆ 7.41 ಕೋಟಿ ರೂ. ಸಾಲ ಇದೆ ಎಂದು ನಮೂದಿಸಲಾಗಿದೆ.

ಅಶ್ವತ್ಥ್ ನಾರಾಯಣ್ ಆಸ್ತಿ ವಿವರ: ಮಲ್ಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವತ್ಥ್ ನಾರಾಯಣ್ ಒಟ್ಟು 58.15 ಕೋಟಿ ಮೌಲ್ಯದ ಒಡೆಯರಾಗಿದ್ದಾರೆ. ಈ ಪೈಕಿ 54.63 ಲಕ್ಷ ಚರಾಸ್ತಿ ಇದ್ದರೆ, 3.52 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಒಟ್ಟು 7.11 ಲಕ್ಷ ರೂ. ಸಾಲ ಮಾಡಿದ್ದಾರೆ. ಯಾವುದೇ ಚಿನ್ನಾಭರಣ ಹೊಂದಿಲ್ಲ. 1,14,500 ಮೊತ್ತದ ಪರವಾನಗಿ ಹೊಂದಿದ ಪಿಸ್ತೂಲ್ ಇದೆ. ಪತ್ನಿ 13.12 ಕೋಟಿ ಮೊತ್ತದ ಆಸ್ತಿ ಹೊಂದಿದ್ದಾರೆ. 33.31 ಲಕ್ಷ ಮೊತ್ತದ ಸಾಲ ಪಡೆದಿದ್ದಾರೆ. ಪತ್ನಿ 1.59 ಕೋಟಿ ಮೌಲ್ಯದ 3 ಕೆ.ಜಿ ಚಿನ್ನಾಭರಣ, 14.80 ಲಕ್ಷ ಮೌಲ್ಯದ ಇತರೆ ಆಭರಣ ಹಾಗೂ 8.82 ಲಕ್ಷ ಮೌಲ್ಯದ 17 ಕೆ.ಜಿ. ಬೆಳ್ಳಿ ಹೊಂದಿದ್ದಾರೆ. 34.27 ಮೌಲ್ಯದ ರೋಲ್ಯಾಕ್ಸ್ ವಾಚ್​​​ನ ಒಡತಿಯಾಗಿದ್ದಾರೆ.

ಇದನ್ನೂ ಓದಿ: ಬಿಜೆಪಿಯ 3ನೇ ಪಟ್ಟಿಯಲ್ಲಿ ಇಬ್ಬರು ಮಹಿಳೆರಿಗೆ ಮಣೆ; 222 ಕ್ಷೇತ್ರಗಳಲ್ಲಿ ಸ್ತ್ರೀಯರಿಗೆ 12 ಟಿಕೆಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.