ಬೆಂಗಳೂರು: ಉತ್ತಮ ಗುಣಮಟ್ಟವಿಲ್ಲದ ಔಷಧಗಳನ್ನು ಔಷಧ ನಿಯಂತ್ರಣ ಇಲಾಖೆ ನಿಷೇಧಿಸಿದೆ. ನಿಷೇಧಿತ ಔಷಧಿಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಅಥವಾ ಮಾರಾಟವನ್ನು ನಿಲ್ಲಿಸುವಂತೆ ಸೂಚನೆ ನೀಡಿದೆ.
ಯಾರಾದರೂ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವಂತೆ ಆದೇಶಿಸಲಾಗಿದೆ. ಇನ್ನು ಸಾರ್ವಜನಿಕರು ಈ ಔಷಧಿಗಳನ್ನು ಉಪಯೋಗಿಸಬಾರದೆಂದು ಔಷಧ ನಿಯಂತ್ರಕ ಭಾಗೋಜಿ ಟಿ. ಖಾನಾಪುರೆ ಪ್ರಕಟಣೆ ಹೊರಡಿಸಿದ್ದಾರೆ.
ಯಾವೆಲ್ಲ ಔಷಧಗಳ ಮಾರಾಟ ಮಾಡುವಂತಿಲ್ಲ?
ಒನ್ ಡನ್ ಸೆಟ್ರೋನ್ ಟ್ಯಾಬ್ಲೆಟ್ ಐ.ಪಿ.4 ಎಂ ಜಿ( ಡನ್‌ಸೆಟ್ ಟಿಎಂ 4 ಎಂ ಜಿ ಟ್ಯಾಬ್ಲೆಟ್), ಸ್ಫೋಸಿಡ್( ಒಕ್ಸ್ ಟಕೈನ್ ವಿತ್ ಅಲ್ಯುಮಿನಿಯಮ್ ಹೈಡ್ರಾಕ್ಸೈಡ್ ಅಂಡ್ ಮೆಗ್ನೀಷಿಯಂ ಹೈಡ್ರಾಕ್ಸೈಡ್ ಸಪೆನ್ ಕ್ಷನ್ ಅನೆಸ್ತೆಟಿಕ್ ಅನ್ತ್ ಕ್ಸೈಡ್ ಜೆಲ್), ಗ್ಲಿಮಿತ್- ಎಂ ಎಫ್ 3 1000 ಎಸ್ ಆರ್ ( ಗ್ರಿಮಿಪ್ರೈಡ್ ಅಂಡ್ ಮೆಟ್ ಫಾರ್ ಮಿನ್ ಹೈಡ್ರೋಕ್ಲೋರೈಡ್ ( ಎಸ್ ಆರ್ ಟ್ಯಾಬ್ಲೆಟ್), ಎಬಿಡಿ- ಪ್ಲಸ್ ಸಪ್ಷೇನ್ ಕ್ಷನ್ ( ಆಲ್ ಬೆಡ್ಜಲ್ ಅಂಡ್ ಇವರ್ ಮೆಟಿನ್ ಸಪೆನ್ ಕ್ಷನ್, ಎಂ- ಟೊನ್-ಎಲ್ ( ಫ್ಯೂರಜೋಲಿಡೋನ್, ಮೆಟ್ರೋ ನಿಡಸೋಲ್ & ಲೊಫೆರಮೈಡ್ ಬೊಲಸ್, ಸಿಡಿನ್ - ಎ (ಅಂಬ್ರೊಸೊಲ್ ಹೈಡ್ರೋಕ್ಲೋರೈಡ್ ಎಸ್ ಆರ್ & ಲೆವೋಸ್ಟ್ರಿಜೋನ್ ಟ್ಯಾಬ್ಲೆಟ್, ಆಲೋವ್- 250 (ಲೆವೋಪ್ಲೊಸಿನ್ ಟ್ಯಾಬ್ಲೆಟ್ ಐ ಪಿ 250 ಎಂ ಜಿ ,ಮೆಟ್ನಿ ಬಿಡ್- ಎಲ್ (ಮೆಟ್ನಿಲೊಕಸ್ಟ್ & ಲಿವೊಸ್ಟ್ರಿಜಿನ್ ಹೆಚ್ ಸಿಐ ಟ್ಯಾಬ್ಲೆಟ್, ಜೆಕ್ ಫಾರ( ಆಸಿಕ್ಲೋಫೆನಕ್& ಪ್ಯಾರಸಿಟಮೋಲ್ ಟ್ಯಾಬ್ಲೆಟ್), ಕೊಲ್ಡ್ ವಿನ್ ಪ್ಲಸ್, ರೆಡ್ ನಿಸೊಲ್ - ಎ 80 ( ಮೆತಲ್ ಪ್ರೆಡ್ನಿಸೊಲನ್ ಅಸಿಟೆಡ್ ಇಂಜೆಕ್ಷನ್ ಐಪಿ), ಸಲಬ್ಯುಟ್ಮಲ್& ತಿಯೋಫಿಲಿನ್ ಟ್ಯಾಬ್ಲೆಟ್ ( ಅನ್ಸುಲಿನ್ ಟ್ಯಾಬ್ಲೆಟ್), ರೊಜ್ಯುಟಿನ್ - ಎಸಿ ( ರೊಸ್ ವಸ್ಟಿನ್ & ಆಸ್ಫಿರಿನ್ ಕ್ಯಬ್ಸೂಲೆಸ್), ಲಿವಿಟ್ರಿರಸಿಟಿಂ ಇಂಜೆಕ್ಷನ್ ಯುಎಸ್ ಪಿ 100 ಎಂ ಜಿ/ ಎಂ ಎಲ್, ಆಗ್ಲೋನಿಮ್- ಪಿ ( ನಿಮ್ಸ್ಯಲೈಡ್ & ಪ್ಯಾರಸಿಟೊಮಲ್ ಟ್ಯಾಬ್ಲೆಟ್, ಒಡಾನ್ ಸೆಟ್ರೋನ್ ಹೈಡ್ರೋಕ್ಲೋರೈಡ್ ಇಂಜಕ್ಷನ್ ಐಪಿ ( ವೊಮಿಫ್ರೊಡ್ 2 ಎಂ ಜಿ / ಎಂಎಲ್) ಈ ಔಷಧಿಗಳ ಮಾರಾಟವನ್ನು ನಿಷೇಧಿಸಲಾಗಿದೆ.