ETV Bharat / state

ಹ್ಯಾಟ್ರಿಕ್ ಜಯ ಸಾಧಿಸಿರುವ ಸತೀಶ್ ರೆಡ್ಡಿ ನಿದ್ದೆಗೆಡಿಸಿದ ಕಾಂಗ್ರೆಸ್ ಅಭ್ಯರ್ಥಿ: ಯಾರಾಗಲಿದ್ದಾರೆ ಬೊಮ್ಮನಹಳ್ಳಿ ಬಾಸ್?​

author img

By

Published : May 7, 2023, 6:39 PM IST

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ ಸತೀಶ್ ರೆಡ್ಡಿ ಮತ್ತು ಕಾಂಗ್ರೆಸ್​ ಅಭ್ಯರ್ಥಿ ಉಮಾಪತಿ ಎಸ್ ಗೌಡ ನಡುವೆ ನೇರ ಹಣಾಹಣಿ ನಡೆಯಲಿದೆ.

profile-of-bommanahalli-constituency
ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಶಾಸಕ ಸತೀಶ್ ರೆಡ್ಡಿಯ ನಿದ್ದೆಗೆಡಿಸಿದ ಕಾಂಗ್ರೆಸ್ ಅಭ್ಯರ್ಥಿ

ಬೆಂಗಳೂರು: 2008ರ ಬೆಂಗಳೂರಿನ ಉತ್ತರಹಳ್ಳಿ ಭಾಗದಿಂದ ಬೇರ್ಪಟ್ಟ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಆಗಿಂದಲೇ ಬಿಜೆಪಿ ಭದ್ರಕೋಟೆಯಾಗಿದ್ದು, ಇಲ್ಲಿ ಎಂ ಸತೀಶ್ ರೆಡ್ಡಿ ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ಕಾಂಗ್ರೆಸ್ ಕಳೆದ ಚುನಾವಣೆವರೆಗೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿರುವುದು ಹಾಗೂ ಪ್ರತಿ ಬಾರಿ ವಿರೋಧ ಪಕ್ಷವಾಗಿ ಜನರ ನಡುವೆ ತೆರಳದೆ ಕೇವಲ ಪಕ್ಷದ ಅಧಿಕಾರಕ್ಕೆ ಮಾತ್ರ ಸೀಮಿತವಾಗಿದ್ದು ಸತೀಶ್ ರೆಡ್ಡಿ ಹ್ಯಾಟ್ರಿಕ್ ಗೆಲುವಿಗೆ ಕಾರಣವಾಗಿದೆ. ನಿತ್ಯ ಜ್ವಲಂತ ಸಮಸ್ಯೆಗಳನ್ನ ಎದುರಿಸುತ್ತಿರುವ ಇಲ್ಲಿ ಗಣನೀಯ ಪ್ರಮಾಣದಲ್ಲಿ ಮುಸ್ಲಿಂ, ಒಕ್ಕಲಿಗ ಮತದಾರರಿದ್ದಾರೆ.

ಬಿಟಿಎಂ ಶಾಸಕ, ಮಾಜಿ ಗೃಹಮಂತ್ರಿ ರಾಮಲಿಂಗಾರೆಡ್ಡಿ, ಮಾಜಿ ರಾಜ್ಯ ಸಭಾ ಸಧಸ್ಯ ಕುಪೇಂದ್ರ ರೆಡ್ಡಿ, ವಿಎಸ್ ಉಗ್ರಪ್ಪರಂತಹ ಘಟಾನುಘಟಿ ನಾಯಕರಿದ್ದರು ಸತೀಶ್ ರೆಡ್ಡಿ ಗೆಲುವಿಗೆ ಬ್ರೇಕ್ ಹಾಕುವಲ್ಲಿ ವಿಫಲರಾಗಿದ್ದರು. ವಲಸಿಗ ಗಾರ್ಮೆಂಟ್ಸ್ ಕಾರ್ಖಾನೆಯ ಮತದಾರರು, ಅಪಾರ್ಟ್ಮೆಂಟ್ ನಿವಾಸಿಗಳು ಹೆಚ್ಚಾಗಿರುವೆಡೆಯೆಲ್ಲಾ ಸತೀಶ್ ರೆಡ್ಡಿ ಹಿಡಿತ ಸಾಧಿಸಿದ್ದರು. ಆಗಾಗ್ಗೆ ಸರ್ಕಾರದ ಕಾರ್ಯಕ್ರಮಗಳನ್ನ ಪಕ್ಷದ ಕಾರ್ಯಕ್ರಮಗಳಂತೆ ಬಿಂಬಿಸಿ ಇಲಾಖೆಗಳ ಅಧಿಕಾರಿಗಳನ್ನ ಸದಾ ಮನೆಗೆ ಕರೆಸಿಕೊಂಡು ಬಿಬಿಎಂಪಿ ಕಚೇರಿಯಾಗಿ ಮಾರ್ಪಟ್ಟಿತ್ತು ಎನ್ನುವುದು ಎಡ ಪಕ್ಷಗಳ ವಾದ.

ಕ್ಷೇತ್ರದಲ್ಲಿ ಮಳೆಗಾಲ ಬಂದರೆ ಹಳ್ಳ ಕೊಳ್ಳ ತುಂಬಿ ರಾಜಕಾಲುವೆ ಮೇಲಿನ ಮನೆಗಳಿಗೆ ನೀರು ತುಂಬಿ ಜಲಾವೃತವಾದರೆ, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುತ್ತದೆ. ಆಗಾಗ್ಗೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಗೇಲ್ ಗ್ಯಾಸ್ ಸ್ಫೋಟಗಳು, ಪಾರ್ಕಿಂಗ್, ರಸ್ತೆ ಸಂಚಾರ, ಅಪಕ್ವ ರಸ್ತೆ ಕಾಮಗಾರಿಗಳು ಜನರನ್ನ ಕಾಡುತ್ತಿದ್ದರೂ ಸರ್ಕಾರದ ಅನುದಾನಗಳು ಬಳಕೆಯಾಗಿಲ್ಲ ಎನ್ನುವುದು ನಿವಾಸಿಗಳ ಅಳಲಾಗಿದೆ.

ಸ್ಟಾರ್ ನಟ ದರ್ಶನ್ ಅವರನ್ನು ಕರೆತಂದು ಜನರ ಮುಂದೆ ನಿಲ್ಲಿಸಿ ಮತ ಗಳಿಕೆಗೆ ತಂತ್ರಗಾರಿಕೆ ಹೂಡಿರುವ ಸತೀಶ್ ರೆಡ್ಡಿ ವಿರುದ್ಧ 90,000ಕ್ಕೂ ಅಧಿಕ ಒಕ್ಕಲಿಗ ಮತದಾರರಿರುವ ಈ ಕ್ಷೇತ್ರದಲ್ಲಿ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡನನ್ನು ಕಾಂಗ್ರೆಸ್ ಕಣಕ್ಕಿಳಿಸಿ ಬಿಜೆಪಿಯ ನಿದ್ದೆಗೆಡಿಸಿದೆ. ಕ್ಷೇತ್ರದಲ್ಲಿ ದಲಿತ, ಮುಸ್ಲಿಂ, ಹಿಂದುಳಿದ ವರ್ಗ ಮತ್ತು ಒಕ್ಕಲಿಗ ಮತಗಳನ್ನು ಕಾಂಗ್ರೆಸ್ ಈ ಬಾರಿ ಮನಸ್ಸಿನಲ್ಲಿಟ್ಟುಕೊಂಡು ಚುನಾವಣೆಗೆ ರಣತಂತ್ರ ರೂಪಿಸಿದೆ.

2008ರಲ್ಲಿ ಕುಪೇಂದ್ರ ರೆಡ್ಡಿಯ ವಿರುದ್ಧ 13,640 ಮತ. 2013ರಲ್ಲಿ ಸಿ ನಾಗಭೂಷಣ್ ವಿರುದ್ಧ 25,852 ಮತ. 2018ರಲ್ಲಿ ಸುಷ್ಮಾ ರಾಜಗೋಪಾಲರೆಡ್ಡಿ ವಿರುದ್ಧ 47,162 ಮತ ಪಡೆಯುವ ಮೂಲಕ ವರ್ಷದಿಂದ ವರ್ಷಕ್ಕೆ ದುಪ್ಪಟ್ಟು ಮತಗಳಿಕೆ ಮಾಡಿ ಸತೀಶ್ ರೆಡ್ಡಿ ಸತತ ಗೆಲುವು ದಾಖಲಿಸಿದ್ದಾರೆ.

ಈ ಬಾರಿ ಕಣದಲ್ಲಿರುವ ಬಿಎಸ್​ಪಿಯಿಂದ ಉಮಾಪತಿ ಬಾಬು, ಜೆಡಿಎಸ್​ನಿಂದ ನಾರಾಯಣರಾಜು, ಆಪ್​ನಿಂದ ಸೀತಾರಾಮು, ಕೆಆರ್​ಎಸ್​ನಿಂದ ನಂದಾರೆಡ್ಡಿ, ಯುಪಿಪಿಯಿಂದ ಮಮತಾ, ಬಿಪಿಕೆಯಿಂದ ಸತೀಶ್ ರೆಡ್ಡಿ, ಎನ್​ಬಿಎಸ್​ನಿಂದ ಶಿವರಾಮು, ಕಣದಲ್ಲಿದ್ದು ಪಕ್ಷೇತರರಾಗಿ ಎಂ ಸತೀಶ್ ರೆಡ್ಡಿ, ಆದಿಲ್ ಪಾಷ, ಅಬ್ಸುಲ್ ಖಾದರ್, ನಿಜಾಮುದ್ದೀನ್, ಆಂತೋಣಿರಾಜ್ ಸೇರಿ ಒಟ್ಟು 14 ಮಂದಿ ಕಣದಲ್ಲಿದ್ದರು. ಈ ಬಾರಿ ಬಿಜೆಪಿಯ ಎಂ ಸತೀಶ್ ರೆಡ್ಡಿ ಮತ್ತು ಕಾಂಗ್ರೆಸ್​ನ ಉಮಾಪತಿ ಎಸ್ ಗೌಡ ನಡುವೆ ನೇರ ಹಣಾಹಣಿ ನಡೆಯಲಿದೆ. ಸತೀಶ್ ರೆಡ್ಡಿ ವಿರುದ್ಧ ಹತ್ತು ಹಲವು ಪ್ರಕರಣಗಳಿವೆ. ಒಟ್ಟು 87 ಕೋಟಿಯಷ್ಟು ಆಸ್ತಿ ಘೋಷಿಸಿದ್ದಾರೆ. ಇತ್ತ ನಿರ್ಮಾಪಕ ಉಮಾಪತಿ 74 ಕೋಟಿ ಹಣ ಘೋಷಿಸಿದ್ದಾರೆ.

ಮರದಾರರ ವಿವರ:14 ವಾರ್ಡುಗಳಲ್ಲಿ ಕ್ಷೇತ್ರದಲ್ಲಿ ಒಟ್ಟು 4,32,752 ,ಮತಗಳಿವೆ. 2,32,487 ಮಂದಿ ಪುರುಷರು ಮತ್ತು 2,00194 ಮಹಿಳಾ ಮತದಾರರಿದ್ದು 71 ಇತರೆ ವೋಟರ್ಸ್​ ಇದ್ದಾರೆ.

ಇದನ್ನೂ ಓದಿ:ಗುರು-ಶಿಷ್ಯನ ಮಧ್ಯೆ ನೇರಾನೇರ ಫೈಟ್: ಯಾರಾಗುತ್ತಾರೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಧಿಪತಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.