ETV Bharat / state

ಗ್ರಾ.ಪಂ ಗಳಲ್ಲಿ ಸಮಸ್ಯೆ, ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಪರಿಷತ್ ಸದಸ್ಯರೊಂದಿಗೆ ಸಭೆ ನಡೆಸುವೆ: ಸಚಿವ ಪ್ರಿಯಾಂಕ್​ ಖರ್ಗೆ - ಗ್ರಾಮ ಪಂಚಾಯಿತಿ

ಗ್ರಾ.ಪಂ ಗಳಲ್ಲಿ ಪಿಡಿಒಗಳು ಇತರೆ ಸಿಬ್ಬಂದಿ ಕೊರತೆ ಇದೆ. 150 ಸ್ಥಾನ ಭರ್ತಿಗೆ ಅರ್ಜಿ ಕರೆದಿದ್ದು, ಸಿಎಂಗೆ ಮನವಿ ಮಾಡಿ ಇನ್ನಷ್ಟು ಸ್ಥಾನ ಭರ್ತಿ ಮಾಡಲಾಗುವುದು. ಬೇರೆ ಇಲಾಖೆಗೆ ಎರವಲು ಸೇವೆಗೆ ತೆರಳಿದವರನ್ನು ಸಹ ವಾಪಸ್ ಬರುವಂತೆ ಸೂಚಿಸಿದ್ದೇವೆ. ಶೀಘ್ರ ಸಮಸ್ಯೆ ನಿವಾರಿಸಲಾಗುವುದೆಂದು ಸಚಿವ ಪ್ರಿಯಾಂಕ್​ ಖರ್ಗೆ ಅವರು ವಿಧಾನಪರಿಷತ್​ನಲ್ಲಿ ಮಾಹಿತಿ ನೀಡಿದರು.

Minister Priyank Kharge spoke.
ವಿಧಾನಪರಿಷತ್ ಕಲಾಪದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಭಾಗವಹಿಸಿ ಮಾತನಾಡಿದರು.
author img

By

Published : Jul 13, 2023, 6:31 PM IST

ಬೆಂಗಳೂರು: ಈ ಅಧಿವೇಶನ ಮುಕ್ತಾಯಕ್ಕೂ ಮುನ್ನವೇ ಗ್ರಾ.ಪಂ ಸದಸ್ಯರ ಮೂಲಕ ಆಯ್ಕೆಯಾಗಿ ಬಂದ ವಿಧಾನ ಪರಿಷತ್ ಸದಸ್ಯರ ಜತೆ ಸಭೆ ನಡೆಸಿ ಚರ್ಚಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಪ್ರಿಯಾಂಕ್​ ಖರ್ಗೆ ಭರವಸೆ ನೀಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿಗಳ ದೈನಂದಿನ ಆಡಳಿತಾತ್ಮಕ ಸಮಸ್ಯೆಗಳು, ಪಂಚತಂತ್ರ ತಂತ್ರಾಂಶದ ಲೋಪದೋಷ, ಸಿಬ್ಬಂದಿ ವೇತನ ಇನ್ನಿತರ ಸಮಸ್ಯೆ, ಬೇಡಿಕೆ ಕುರಿತು ಮಾತನಾಡಿದ ಸಚಿವ ಖರ್ಗೆ ಅವರು, ಗ್ರಾಮ ಪಂಚಾಯಿತಿ ಮೂಲಕ ಜನನ, ಮರಣ ನೋಂದಣಿ, ವಿವಾಹ ನೋಂದಣಿ ಮಾಡುವ ಅವಕಾಶ ಕಲ್ಪಿಸಲು ಅನುವು ಮಾಡಿಕೊಡುವಂತೆ ಸೂಚಿಸಲಾಗಿದ್ದು, ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.

ಆಸ್ತಿ ನೋಂದಣಿ ವಿಚಾರ ಕಂದಾಯ ಇಲಾಖೆ ಜತೆ ಸಮಾಲೋಚಿಸಬೇಕಿದೆ, ಅದನ್ನು ಮಾಡುತ್ತೇವೆ. ಗ್ರಾಮ ಪಂಚಾಯಿತಿ ಮೂಲಕ ತೆರಿಗೆ ಸಂಗ್ರಹ ಮಾಡಿದರೆ 6-7 ಸಾವಿರ ಕೋಟಿ ರೂ. ಸಂಗ್ರಹಿಸಬಹುದು, ಅದನ್ನು ಮಾಡುತ್ತೇವೆ. ಪಂಚತಂತ್ರ ಯೋಜನೆಯ ನೇರ ಪರಿಶೀಲನೆ ಆಗ್ತಿದೆ. ಯಶಸ್ವಿಯಾದ ಬಳಿಕ ಉತ್ತಮ ತೆರಿಗೆ ಬರಲಿದೆ. ಟವರ್ ಗಳಿಂದ ತೆರಿಗೆ ಬರುತ್ತಿಲ್ಲ. ಅದನ್ನು ಸಂಗ್ರಹಿಸುತ್ತೇವೆ ಎಂದರು.

ಪಿಡಿಒಗಳು ಹಾಗೂ ಇತರೆ ಸಿಬ್ಬಂದಿ ಕೊರತೆ ಇದೆ. 150 ಮಂದಿ ಸ್ಥಾನ ಭರ್ತಿಗೆ ಅರ್ಜಿ ಕರೆದಿದ್ದು, ಸಿಎಂಗೆ ಮನವಿ ಮಾಡಿ ಇನ್ನಷ್ಟು ಹೆಚ್ಚು ಸ್ಥಾನ ಭರ್ತಿ ಮಾಡುತ್ತೇವೆ. ಬೇರೆ ಇಲಾಖೆಗೆ ಎರವಲು ಸೇವೆಗೆ ತೆರಳಿದವರನ್ನು ವಾಪಸ್ ಬರುವಂತೆ ಸೂಚಿಸಿದ್ದೇವೆ. ಸಮಸ್ಯೆ ನಿವಾರಣೆ ಶೀಘ್ರವಾಗಿ ಆಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಗ್ರಾಪಂ ಸದಸ್ಯರಿಗೆ ಗೌರವಧನ: ಗ್ರಾ.ಪಂ ಸದಸ್ಯರಿಗೆ ಸಭೆಗೆ ನೀಡುವ ಗೌರವಧನ ಕಳೆದ ತಿಂಗಳವರೆಗೆ ನೀಡಿಕೆ ಆಗಿದೆ. ಬಾಕಿ ಉಳಿದಿರುವ ಹಣ ತ್ವರಿತವಾಗಿ ಒದಗಿಸುತ್ತೇವೆ. ಮುಂದಿನ ವರ್ಷದಲ್ಲಿ ಪಿಡಿಒಗಳ ಹಾಗೂ ಇತರರ ಕೌನ್ಸೆಲಿಂಗ್ ಆಗಲಿದೆ. ಅದಕ್ಕೆ ಕಾರ್ಯ ಯೋಜನೆ ರೂಪಿಸುತ್ತೇವೆ. ತಂತ್ರಾಂಶ ಈಗಿನ್ನೂ ಬಿಟಾ ವರ್ಷನ್ ನಲ್ಲಿ ತಪಾಸಣೆ ನಡೆಯುತ್ತಿದೆ.

ಅದರ ಯಶಸ್ಸು ಆಧರಿಸಿ ಮಾಡ್ತೇವೆ. ಸೂಕ್ತ ತರಬೇತಿ ಕೊಡುತ್ತೇವೆ. ಹಾರ್ಡ್‌ವೇರ್, ಸಾಫ್ಟ್‌ವೇರ್ ಸಮಸ್ಯೆ‌ ಇದೆ. ಇನ್ನೆರಡು ತಿಂಗಳಲ್ಲಿ ಎಲ್ಲಾ ಸಮಸ್ಯೆ ನಿವಾರಣೆ ಆಗಲಿದೆ. ತಂತ್ರಜ್ಞಾನ ಇಲ್ಲವೇ ಕೌಶಲ್ಯದ ಕೊರತೆ ಇದ್ದರೆ ಅದನ್ನು ನಿವಾರಿಸುತ್ತೇವೆ. ಸಮಸ್ಯೆ ಯಾವ ರೀತಿ ಆಗುತ್ತಿದೆ ಎಂಬ ಮಾಹಿತಿ ಸಿಕ್ಕರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಪಂಚಾಯತ್ ಕಾಯ್ದೆ ಬಂದು 30 ವರ್ಷವಾಗಿದೆ. ಆ ಸಂಭ್ರಮದಲ್ಲಿ ನಾವಿರಬೇಕಿತ್ತು. ಇದರಿಂದ ಬಜೆಟ್ ನಲ್ಲಿ ಆಚರಣೆ ಕುರಿತು ಪ್ರಸ್ತಾಪ ಮಾಡಿದ್ದೇವೆ. ಕಾಯ್ದೆಯ ಸಬಲೀಕರಣ, ಸರಳೀಕರಣ ಮಾಡಲು ಸಹಕಾರ ಕೇಳುತ್ತಿದ್ದೇವೆ ಎಂದು ಸದನಕ್ಕೆ ಸಚಿವರು ಉತ್ತರ ನೀಡಿದರು.

ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡಬೇಕಾದ ಗೌರವ ಧನ ನೇರವಾಗಿ ಅವರ ಖಾತೆಗೆ ತಲುಪಿಸಬೇಕು. 93 ಸಾವಿರ ಮಂದಿ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಅವರಲ್ಲಿ 53 ಸಾವಿರಕ್ಕೂ ಅಧಿಕ ಮಹಿಳಾ ಸದಸ್ಯರಿದ್ದಾರೆ. ಸದಸ್ಯರ ಬದುಕು ಅಷ್ಟು ಉತ್ತಮವಾಗಿಲ್ಲ. ಆಸ್ತಿ ವಿವರ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಕಲಬುರಗಿಯಲ್ಲಿ ಸದಸ್ಯೆಯೊಬ್ಬರನ್ನು ಅನರ್ಹಗೊಳಿಸಲಾಗಿದೆ ಎಂದು ಹೇಳಿದರು.

ಆಸ್ತಿ ವಿವರ ಸಲ್ಲಿಸದಿದ್ದರೆ ಸದಸ್ಯತ್ವ ರದ್ದು ಮಾಡಲು ಅವಕಾಶ ಇದೆ. ಆದರೆ ಎರಡು ಲಕ್ಷ ರೂ.ಗಿಂತ ಮೇಲ್ಪಟ್ಟು ಆದಾಯ ಇದ್ದರೆ ಮಾತ್ರ ಆಸ್ತಿ ವಿವರ ಸಲ್ಲಿಸಬೇಕು ಎಂದಿದೆ. ಜಾತಿ, ಹಣ ಮೀರಿ ಜನರ ನಡುವೆ ಇರುವವರು ಗೆಲ್ಲುತ್ತಾರೆ. ಇದು ಬಹಳ ಕಷ್ಟ. ಇದರಿಂದ ಇವರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು. ಪಂಚಾಯತ್ ರಾಜ್ ಸಬಲೀಕರಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಹಲವು ವರ್ಷದಿಂದ ಕೆಲವರು ಒಂದೇ ಕಡೆ ಇದ್ದಾರೆ. ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಮಾಡಿ. ಇದರಿಂದ ಅನುಕೂಲ ಆಗಲಿದೆ. ಮನೆ ನೀಡಿಕೆಯನ್ನು ಆದ್ಯತೆಯ ಮೇರೆಗೆ ನೀಡಿ. ಗ್ರಾಮ ಸಭೆಯಲ್ಲಿ ನಡೆಯುವ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಸಹ ಅಲ್ಲಗಳೆಯಲ್ಲ. ಅದನ್ನು ಅನುಸರಿಸುವ ಕಾರ್ಯ ಮಾಡಬೇಕು. 28 ಇಲಾಖೆಗಳನ್ನು ಗ್ರಾಮ ಪಂಚಾಯತಿಗೆ ವರ್ಗಾಯಿಸಲಾಗಿದೆ. ಕೆಡಿಪಿ ಸಭೆ ಬಲಪಡಿಸಿ. ಗ್ರಾಮೀಣಾಭಿವೃದ್ಧಿ ಇಲಾಖೆಯ ಆಮೂಲಾಗ್ರ ಬದಲಾವಣೆಗೆ ಚಾಲನೆ ಸಿಗಬೇಕಿದೆ ಎಂದರು.

ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಪಂಚತಂತ್ರ 2.0 ಆದ ಬಳಿಕ ಸಾಕಷ್ಟು ಸಮಸ್ಯೆ ಎದುರಾಗಿದೆ. ಡೇಟಾ ಎಂಟ್ರಿ ಮಾಡುವವರಿಗೆ ತರಬೇತಿ ಸರಿಯಾಗಿ ಸಿಗುತ್ತಿಲ್ಲ. ಸಾಫ್ಟ್‌ವೇರ್ ಅಪ್ಡೇಟ್ ಆಗಿಲ್ಲ. ಗ್ರಾಮ ಒನ್ ಸೇವೆ ಸಹ ಆರಂಭವಾಗಿದೆ. ತಂತ್ರಾಂಶ ಪ್ರಗತಿ ಮಾಡಿ ಎಂದು ಸಲಹೆ ನೀಡಿದರು.

ಇದನ್ನೂಓದಿ:ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಲವ್ ಜಿಹಾದ್, ಪಾಕಿಸ್ತಾನ ಜಿಂದಾಬಾದ್ ಫ್ರೀ: ಆರ್.ಅಶೋಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.