ಬೆಂಗಳೂರು : ಭಾರತದ ಅತ್ಯಂತ ಪುರಾತನ, ಅತಿ ದೊಡ್ಡ ಮತ್ತು ಅತ್ಯುತ್ತಮ ಆಭರಣ ಮೇಳ ಜ್ಯುವೆಲ್ಸ್ ಆಫ್ ಇಂಡಿಯಾದ ಪ್ರದರ್ಶನ ಮತ್ತು ಮಾರಾಟ ಮೇಳ ಇದೇ ತಿಂಗಳು ಅಕ್ಟೋಬರ್ 15 ರಿಂದ 18ರವರೆಗೆ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆಯೋಜಿಸಲಾಗಿದೆ.
ದೇಶದಾದ್ಯಂತ 100ಕ್ಕೂ ಹೆಚ್ಚು ಖ್ಯಾತ ಆಭರಣ ಮಾರಾಟಗಾರರು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಶೇ.20ರಷ್ಟು ನೂತನ ಮತ್ತು ಅತ್ಯಾಧುನಿಕ ಮಾದರಿಯ ಆಭರಣಗಳು ಈ ಮೇಳದಲ್ಲಿ ಮಾರಲಾಗುತ್ತೆ.
ಅಂಭೂಷಣ್, ಶ್ರೀ ಗಣೇಶ್ ಡೈಮಂಡ್ಸ್ ಅಂಡ್ ಜ್ಯುವೆಲ್ಸ್, ಪಂಚ್ ಕೇಸರಿ ಬಡೇರಾ ಜ್ಯುವೆಲ್ಸ್, ಎಂ.ಪಿ. ಸ್ವರ್ಣಮಹಲ್, ಕ್ರಿಯೇಷನ್ಸ್ ಜ್ಯುವೆಲ್ಲರಿ, ಪಿಎಂಜೆ. ಜ್ಯುವೆಲ್ಸ್ ಹೀಗೆ ಹತ್ತು-ಹಲವು ಆಭರಣ ಮಾರಾಟಗಾರರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಇನ್ನು, ಅಕ್ಟೋಬರ್ 15ರಂದು ಮಧ್ಯಾಹ್ನ 12ಗಂಟೆಗೆ ನಟಿ ಪ್ರಿಯಾಂಕಾ ಉಪೇಂದ್ರ ಮೇಳಕ್ಕೆ ಚಾಲನೆ ನೀಡುತ್ತಿದ್ದು, ಈ ಸಂದರ್ಭ ಆಭರಣ ಪ್ರಿಯರಿಗೆ ಸುಮಧುರ ಕ್ಷಣಗಳಾಗಲಿವೆ.
ಈ ಬಾರಿ ಜ್ಯುವೆಲ್ಸ್ ಆಫ್ ಇಂಡಿಯಾದ ರಾಯಭಾರಿಯಾಗಿ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ ಮೇಳದಲ್ಲಿ ಗಮನ ಸೆಳೆಯಲಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಅವರ ನಿವಾಸದಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೈವಿದ್ಯಮಯ ವಿನ್ಯಾಸವುಳ್ಳ ಆಭರಣಗಳನ್ನು ತೊಟ್ಟು ಅವರು ಕಂಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ ಪ್ರಿಯಾಂಕಾ ಉಪೇಂದ್ರ, ಇಂತಹ ವಿಶಿಷ್ಟ, ವಿನೂತನ ಹಾಗೂ ಆಕರ್ಷಕ ಆಭರಣ ಮೇಳದಲ್ಲಿ ಬೆಂಗಳೂರಿನ ಮಹಿಳೆಯರಷ್ಟೇ ಅಲ್ಲದೆ, ರಾಜ್ಯಾದ್ಯಂತ ಎಲ್ಲರೂ ಪಾಲ್ಗೊಳ್ಳಬೇಕು.
ಈ ಮೇಳ ಬದುಕಿಗೆ ಹೊಸ ಮೆರುಗು ಮತ್ತು ಘನತೆ ತಂದು ಕೊಡುತ್ತದೆ. ನಂತರ ದಸರಾ ಹಬ್ಬದ ಸಂದರ್ಭದಲ್ಲಿ ದೇಶದ ಎಲ್ಲ ಅತ್ಯುತ್ತಮ ಆಭರಣಗಳು ಒಂದೇ ಸೂರಿನಡಿ ಪ್ರದರ್ಶನವಾಗುತ್ತಿವೆ. ಇದು ಖರೀದಿಗೆ ಅತ್ಯುತ್ತಮ ಸಮಯ ಎಂದರು.