ETV Bharat / state

ಬಡವರ ಮಕ್ಕಳಿಗೆ ಕೇಸರಿ ಶಾಲು ಹಾಕಿ ಬೀದಿಗೆ ಬಿಡುತ್ತೀರಾ.. ಆದರೆ, ನಿಮ್ಮ ಮಕ್ಕಳು ಮಾತ್ರ ವಿದೇಶದಲ್ಲಿ ಓದ್ಬೇಕಾ? : ಪ್ರಿಯಾಂಕ್ ಖರ್ಗೆ ಪ್ರಶ್ನೆ

author img

By

Published : Mar 26, 2022, 7:52 PM IST

ಆರ್​ಎಸ್​ಎಸ್​ ಮತ್ತು ಕೇಂದ್ರವನ್ನು ಒಲಿಸುವ ರಾಜಕಾರಣ ಮಾಡಲಾಗುತ್ತಿದೆ. ಇದಕ್ಕಾಗಿ ಕೋಮು ವಿವಾದಗಳು ರಾಜ್ಯದಲ್ಲಿ ಹೆಚ್ಚಾಗಿವೆ. ಧಾರ್ಮಿಕವಾಗಿ ಜನರನ್ನು ವಂಚಿಸುತ್ತಿದ್ದಾರೆ. ನಿಜವಾದ ಸಮಸ್ಯೆಗಲಿಗೆ ಪರಿಹಾರ ಇವರಿಗೆ ಅಗತ್ಯ ಇಲ್ಲ..

Priyank Kharge talk on rss and central government
ಆರ್​ಎಸ್​ಎಸ್​ ಮತ್ತು ಕೇಂದ್ರವನ್ನು ಒಲಿಸುವ ರಾಜಕಾರಣ ಮಾಡಲಾಗುತ್ತಿದೆ ಪ್ರಯಾಂಕ್​ ಖರ್ಗೆ

ಬೆಂಗಳೂರು : ಬಡವರ ಮಕ್ಕಳಿಗೆ ಕೇಸರಿ ಶಾಲು ಹಾಕಿ ಬೀದಿಗೆ ಬಿಡುತ್ತಿದ್ದೀರಿ. ಬಡವರ ಮಕ್ಕಳು ಕೇಸರಿ ಶಾಲು ಹಾಕಬೇಕು. ಆದರೆ, ನಿಮ್ಮ ಮಕ್ಕಳು ಮಾತ್ರ ವಿದೇಶಗಳಲ್ಲಿ ಓದಬೇಕಾ?. ಮುಂದಿನ ತಲೆಮಾರಿಗೆ ಈ ರೀತಿಯ ವಿಚಾರಗಳನ್ನು ಬಿತ್ತಿ ಅವರಲ್ಲಿ ಕೋಮು ಭಾವನೆಗಳನ್ನು ಬೆಳೆಸುತ್ತಿದ್ದೀರಿ. ಬಿಜೆಪಿಯ ಒಬ್ಬರ ಮಗನಾದರೂ ಆರ್​ಎಸ್​ಎಸ್​ನಲ್ಲಿ ಇದ್ದಾರಾ ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಮೃದ್ಧ ಭಾರತಕ್ಕೆ ಪ್ರಬುದ್ಧ ಕರ್ನಾಟಕ ಮಾಡಿ. ನಿರುದ್ಯೋಗದಂತಹ ಸಮಸ್ಯೆಗಳು ಕಣ್ಣ ಮುಂದೆ ಇದ್ದರೂ ಕೋಮು ಭಾವನೆಗಳನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಯುವಕರು ನೌಕರಿ ಕೇಳಿದರೆ, ನಶೆ ಹಂಚುತ್ತಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಹೇಳಿದಂತೆ ನಡೆಯುತ್ತಿದೆ. ಇಲ್ಲಿ ಸ್ವಾತಂತ್ರ ನಿಲುವಿಲ್ಲ. ಆರ್​ಎಸ್​ಎಸ್​ ಮತ್ತು ಕೇಂದ್ರದ ಮನವೊಲಿಸುವ ರಾಜಕೀಯ ಮಾಡುವ ಬದಲು ಜನರ ಅಗತ್ಯತೆಗಳನ್ನು ಅರಿತು ಆಡಳಿತ ಮಾಡಿ ಎಂದು ಹೇಳಿದರು.

ಬೊಮ್ಮಾಯಿ ಸರ್ಕಾರದಲ್ಲಿ ಆರ್​ಎಸ್​ಎಸ್​ ಮತ್ತು ಕೇಂದ್ರವನ್ನು ಒಲಿಸುವ ರಾಜಕಾರಣ ಮಾಡಲಾಗುತ್ತಿದೆ ಎಂದಿರುವ ಪ್ರಿಯಾಂಕ್​ ಖರ್ಗೆ

ಮುಸ್ಲಿಂ ರಾಷ್ಟ್ರಗಳಿಗೆ ರಪ್ತು ನಿಷೇಧಿಸಲಿ, ಆಮದು ನಿಷೇಧಿಸಲಿ : ಇದೆಲ್ಲ ಮಾಡಕ್ಕಾಗುತ್ತಾ ಸರ್ಕಾರಕ್ಕೆ?. 1.12 ಕೋಟಿ ನಮ್ಮ ದೇಶದವ್ರು ಇಸ್ಲಾಮಿಕ್ ದೇಶಗಳಲ್ಲಿ ಕೆಲಸ ಮಾಡ್ತಿದ್ದಾರೆ. 7.5 ಲಕ್ಷ ವಿದ್ಯಾರ್ಥಿಗಳು ಇಸ್ಲಾಮಿಕ್ ದೇಶಗಳಲ್ಲಿ ಶಿಕ್ಷಣ ಮಾಡ್ತಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದ ಗುಲಾಮ ಆಗಿದೆ. ಕೇಂದ್ರ ಹೇಳಿದಂತೆ ರಾಜ್ಯ ಕೇಳ್ತಿದೆ. 25% ಜನ ಬಡನತ ರೇಖೆಗಿಂತ ಕೆಳಕ್ಕೆ ಹೋಗಿದ್ದಾರೆ. ನೌಕರಿ ಕೇಳಿದ್ರೆ ನಶೆ ಕೊಡ್ತಿದೆ ಬಿಜೆಪಿ ಸರ್ಕಾರ ಎಂದು ದೂರಿದರು.

ದೇಶಕ್ಕೆ ರೇಷ್ಮೆ ಪರಿಚಯಿಸಿದವರು ಯಾರು?. ಟಿಪ್ಪು ಸುಲ್ತಾನ್ ಪರಿಚಯ ಮಾಡಿದ್ದು ಅಂತಾ ಸುಡಲು ಆಗುತ್ತಾ?. ಲಾಲ್ ಬಾಗ್ ಹೈದರಾಲಿ ಮಾಡಿದ್ದು ಅಂತಾ ಸುಡಲು ಆಗುತ್ತಾ?. ಕಾಫಿ ಬಂದಿದ್ದು ಬಾಬಾ ಬುಡನ್​ರಿಂದ. ಅರೇಬಿಯಾದಿಂದ ಬಂದಿದ್ದು ಕಾಫಿ ಇದನ್ನೆಲ್ಲಾ ವಿರೋಧಿಸಕ್ಕೆ ಆಗುತ್ತದಾ. ಇದರಿಂದ ಎಷ್ಟೋ ಜನಕ್ಕೆ ಉದ್ಯೋಗ ಸಿಕ್ತಿದೆ ಎಂದರು.

ಇದನ್ನೂ ಓದಿ: ಹಿಂದೂ ಧಾರ್ಮಿಕ, ಸಾಂಸ್ಕೃತಿಕ ಸಂಕೇತ ಕಂಡರೆ ಸಿದ್ದರಾಮಯ್ಯಗೆ ಅದೇಕೆ ಅಸಹನೆ?: ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.