ETV Bharat / state

ಖಾಸಗಿ ಶಾಲೆಗಳ ಆರ್​ಟಿಇ ಶುಲ್ಕ ಮರುಭರಣ ಮಾಡಿದ ಸರ್ಕಾರ - RTE Fee Refinancing of Private Schools

ಮಾರ್ಚ್ 2021 ನೇ ಸಾಲಿನ ಹೆಚ್ಚುವರಿ ಆರ್ ಟಿಇ ಶುಲ್ಕ ಮರುಪಾವತಿಗಾಗಿ 100 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೂ 2466 ಖಾಸಗಿ ಶಾಲೆಗಳಿಗೆ ₹76 ಕೋಟಿಯನ್ನು ಶಾಲೆಗಳಿಗೆ ನೇರವಾಗಿ ಬಿಡುಗಡೆ ಮಾಡಲಾಗಿದೆ..

vidhanasoudha
ವಿಧಾನಸೌಧ
author img

By

Published : May 14, 2021, 3:46 PM IST

ಬೆಂಗಳೂರು : 6 ರಿಂದ 14 ವರ್ಷ ವಯೋಮಾನದ ಎಲ್ಲಾ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯಡಿ ನೀಡುತ್ತಿದ್ದು, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಶುಲ್ಕವನ್ನು ಆರ್​ಟಿಇ ಕಾಯ್ದೆ 2009ರ ಸೆಕ್ಷನ್ 12(2)ರ ಅಡಿಯಲ್ಲಿ ಸರ್ಕಾರ ಮರುಭರಣ ಮಾಡಿದೆ.

2019-20ನೇ ಸಾಲಿನಲ್ಲಿ 500 ಕೋಟಿ ಬಿಡುಗಡೆಯಾಗಿದೆ. 11432 ಶಾಸಗಿ ಶಾಲೆಗಳ 506694 ವಿದ್ಯಾರ್ಥಿಗಳ ಶುಲ್ಕ ಮರುಪಾವತಿಗಾಗಿ ಅನುದಾನ ಬಳಕೆ ಮಾಡಲಾಗಿದೆ.

2020-21ರ ಸಾಲಿಗೆ 11386 ಖಾಸಗಿ ಶಾಲೆಗಳ 475083 ವಿದ್ಯಾರ್ಥಿಗಳ ಶುಲ್ಕ ಮರುಪಾವತಿಗೆ 550 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

ಮಾರ್ಚ್ 2021 ನೇ ಸಾಲಿನ ಹೆಚ್ಚುವರಿ ಆರ್ ಟಿಇ ಶುಲ್ಕ ಮರುಪಾವತಿಗಾಗಿ 100 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೂ 2466 ಖಾಸಗಿ ಶಾಲೆಗಳಿಗೆ ₹76 ಕೋಟಿಯನ್ನು ಶಾಲೆಗಳಿಗೆ ನೇರವಾಗಿ ಬಿಡುಗಡೆ ಮಾಡಲಾಗಿದೆ.

2021-22ನೇ ಸಾಲಿಗೆ ರಾಜ್ಯ ಆಯವ್ಯದಲ್ಲಿ ರೂ. 700 ಕೋಟಿ ಅನುಮೋದನೆಯಾಗಿದೆ. ಅನುದಾನ ಸ್ವೀಕರಿಸಿದ ತಕ್ಷಣವೇ ಶಾಲೆಗಳಿಗೆ ಶುಲ್ಕ ಮರುಪಾವತಿಗಾಗಿ ಸಂಬಂಧಿತ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

ಓದಿ: ಕೋವಿಡ್​​​​​​ ಲಸಿಕೆ ಖರೀದಿಗಾಗಿ 100 ಕೋಟಿ ರೂ. ನೀಡಲು ರಾಜ್ಯ ಕಾಂಗ್ರೆಸ್​​​ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.